ಕೆ.ಆರ್.ಪೇಟೆ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಕೆ.ಆರ್.ಪೇಟೆ ವಲಯದಿಂದ ಜ್ಞಾನವಿಕಾಸ ಕಾರ್ಯಕ್ರಮ ಅಡಿಯಲ್ಲಿ ಸದಸ್ಯರುಗಳಿಗೆ ಆಯೋಜಿಸಿದ್ದ ಮೂರು ತಿಂಗಳ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.
ಶ್ರೀ ಧರ್ಮಸ್ಥಳ ಗ್ರಾಮಾಭವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಅವರು, ತರಬೇತಿ ಪಡೆದುಕೊಂಡಂತಹ ಸದಸ್ಯರನ್ನು ಕುರಿತು ಮಾತನಾಡಿ ಮಾತೃಶ್ರೀ ಹೇಮಾವತಿ.ವಿ.ಹೆಗ್ಗಡೆಯವರ ಅಮ್ಮನವರು ಮಹಿಳೆಯರಿಗೆ ಸ್ವ-ಉದ್ಯೋಗ ಮಾಡಲು ಪ್ರೇರಣೆ ನೀಡುತ್ತಾ ಹೆಣ್ಣು ಕೇವಲ ಮನೆಯ ನಾಲ್ಕು ಕೊಠಡಿಯೊಳಗೆ ಸೀಮಿತವಾಗಬಾರದು.
ಹೆಣ್ಣು ಸ್ವತಂತ್ರವಾಗಿ ದುಡಿಯುವಂತವಳಾಗಬೇಕು. ಗಂಡಿಗೆ ಸರಿಸಮನಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಬೇಕೆಂಬ ಉದ್ದೇಶದಿಂದ ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಹೊಲಿಗೆ ತರಬೇತಿ ಸೇರಿದಂತೆ ಹಲವು ತರಬೇತಿಗಳನ್ನು ನೀಡಲಾಗುತ್ತಿದೆ. ಪ್ರತಿ ತಿಂಗಳು ಕೇಂದ್ರ ಸಭೆಯಲ್ಲಿ ವಿಷಯಾಧಾರಿತ ಸಂಪನ್ಮೂಲ ವ್ಯಕ್ತಿಯವರಿಂದ ಮಾಹಿತಿಯನ್ನು ಕೊಡಿಸುವಂತಹ ಕಾರ್ಯಕ್ರಮ ಹಾಗೂ ಹೇಮಾವತಿ ಅಮ್ಮನವರು ಮತ್ತು ಪೂಜ್ಯರು ಸ್ವ-ಉದ್ಯೋಗಕ್ಕೆ ಪೂರಕವಾಗಿ ಟೈಲರಿಂಗ್ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದ್ದು ಸದಸ್ಯರು ಪೂರ್ಣ ಕೌಶಲ್ಯ ತರಬೇತಿ ಪಡೆದುಕೊಂಡಿದ್ದು, ತಮ್ಮ ಕೌಶಲ್ಯವನ್ನು ಸದುಪಯೋಗ ಪಡಿಸಿಕೊಂಡು ಸ್ವಯಂ ಉದ್ಯೋಗ ಆರಂಭಿಸುವ ಮೂಲಕ ಆರ್ಥಿಕವಾಗಿ ಸಬಲೀಕರಣ ಹೊಂದಬೇಕು ಎಂದು ಸಲಹೆ ನೀಡಿದರು.

ತಾಲ್ಲೂಕು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ತಿಲಕ್‌ರಾಜ್ ರವರು ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ನುಡಿಗಳ್ನಾಡಿದರು. ಹಾಗೂ ಯಶಸ್ವಿಯಾಗಿ ತರಬೇತಿ ಪಡೆದ ಸದಸ್ಯರುಗಳಿಗೆ ಸರ್ಟಿಫಿಕೇಟ್ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರಾದ ಯೋಗೀಶ್ವರಿ, ಟೈಲರಿಂಗ್ ತರಬೇತುದಾರರಾದ ಲಕ್ಷೀದೇವಮ್ಮ, ಸೇವಾ ಪ್ರತಿನಿಧಿಗಳು ಹಾಗೂ ತರಬೇತಿ ಪಡೆದ ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದರು.
- ಶ್ರೀನಿವಾಸ್ ಆರ್