ಕೆ.ಆರ್.ಪೇಟೆ-ಗಣೇಶೋತ್ಸವಗಳು,ಹಬ್ಬ-ಹರಿದಿನಗಳು,ಜಾತ್ರೆ, ಉತ್ಸವಗಳು ನಮ್ಮ ಸಂಸ್ಕೃತಿ, ಪರಂಪರೆಯ ಪ್ರತಿಬಿಂಬ-ಶಾಸಕ ಹೆಚ್.ಟಿ.ಮಂಜು

ಕೆ.ಆರ್.ಪೇಟೆ-ಗಣೇಶೋತ್ಸವಗಳು, ಹಬ್ಬ-ಹರಿದಿನಗಳು, ಜಾತ್ರೆ, ಉತ್ಸವಗಳು ನಮ್ಮ ಸಂಸ್ಕೃತಿ, ಪರಂಪರೆಯ ಪ್ರತಿಬಿಂಬವಾಗಿದ್ದು ನಿರಂತರ 66ವರ್ಷಗಳಿಂದ ನಡೆಯುತ್ತಿರುವ ಸಂತೇಬಾಚಹಳ್ಳಿ ಗ್ರಾಮದ ಗೆಳೆಯರ ಬಳಗದ ಗಣೇಶೋತ್ಸವವು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಶಾಸಕ ಹೆಚ್.ಟಿ.ಮಂಜು ಹೇಳಿದರು.

ಅವರು ಸಂತೇಬಾಚಹಳ್ಳಿ ಗ್ರಾಮದ ಗೆಳೆಯರ ಬಳಗದ 66ನೇ ವರ್ಷದ ಅದ್ದೂರಿ ಗಣೇಶೋತ್ಸವ ಹಾಗೂ ಸಂಸ್ಕೃತಿ ಉತ್ಸವ ಸಮಾರಂಭದಲ್ಲಿ ಭಾಗವಹಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿದರು.

ಗಣೇಶೋತ್ಸವ ನಮ್ಮ ಸಂಸ್ಕೃತಿಯ ಸಂಕೇತವಾಗಿದ್ದು ಸಂತೆಬಾಚಹಳ್ಳಿಯ ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ವೈಭವವು ರಾಜ್ಯದಲ್ಲಿಯೇ ಹೆಸರು ವಾಸಿಯಾಗಿದೆ. ಸಂಸ್ಥಾಪಕ ಅಧ್ಯಕ್ಷ ಬಿ.ಶಿವಪ್ಪ ಅವರು ಬಿಬಿಪಿಎಂ ಇಂಜಿನಿಯರ್ ಆಗಿದ್ದ ವೇಳೆ ಸಂಘದ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿದ ಪರಿಣಾಮ, ಗೆಳೆಯರ ಬಳಗವು ಹೆಮ್ಮರವಾಗಿ ಬೆಳೆದಿರುವ ಕಾರಣ, ಗೆಳೆಯರ ಬಳಗದ ಗಣೇಶೋತ್ಸವವು 66 ವರ್ಷ ಕಳೆದರೂ ನಿರಂತರವಾಗಿ ವಿಜೃಂಭಣೆಯಿoದ ನಡೆಯುತ್ತಿದೆ. ಇದೂ ಹೀಗೆಯೇ ಮುಂದುವರೆಯಲಿ ಎಂದು ಶಾಸಕರು ಆಶಯ ವ್ಯಕ್ತಪಡಿಸಿದರು.

ಮನ್‌ಮುಲ್ ನಿರ್ದೇಶಕರಾದ ಡಾಲು ರವಿ ಮಾತನಾಡಿ, ಸಂತೇಬಾಚಹಳ್ಳಿ ಗೆಳೆಯರ ಬಳಗದ ಸಂಸ್ಥಾಪಕ ಅಧ್ಯಕ್ಷರಾದ ಬಿ.ಶಿವಪ್ಪ ಅವರ ಮಾರ್ಗದರ್ಶನ ಹಾಗೂ ದಾನಿಗಳ ಸಹಕಾರದಿಂದ 66ವರ್ಷಗಳಿಂದ ಯಶಸ್ವಿಯಾಗಿ ಗಣೇಶೋತ್ಸವ ಆಚರಣೆ ಮಾಡಿಕೊಂಡು ಬರುತ್ತಿದೆ.

ಸಂತೇಬಾಚಹಳ್ಳಿ ಗೆಳೆಯರ ಬಳಗದ ಸಾಧನೆ ಅಪಾರವಾದುದು.ರಾತ್ರಿಯಿಡೀ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಾವಿರಾರು ಜನರು ತಮ್ಮ ಮಕ್ಕಳು ಹಾಗೂ ಮರಿ ಮಕ್ಕಳೊಂದಿಗೆ ಎತ್ತಿನ ಗಾಡಿಗಳಲ್ಲಿ ಆಗಮಿಸಿ, ಕುಳಿತು ವೀಕ್ಷಿಸುವುದು ವಿಶೇಷವಾಗಿದೆ. ನಾನು ಹಾಲು ಒಕ್ಕೂಟದ ನಿರ್ದೇಶಕನಾಗಿ ಹೈನುಗಾರಿಕೆಗೆ ಒತ್ತು ನೀಡಿ ಗ್ರಾಮೀಣ ಪ್ರದೇಶದ ಜನರು ಸ್ವಾವಲಂಭಿ ಜೀವನ ನಡೆಸಲು ಒತ್ತಾಸೆ ನೀಡಿ ಕೆಲಸ ಮಾಡುತ್ತಿದ್ದೇನೆ. ಹೈನುಗಾರಿಕೆಯ ಮೂಲಕ ಕ್ಷೀರ ಕ್ರಾಂತಿಯಾಗಿ ರೈತಾಪಿ ವರ್ಗದ ಜನರು ನೆಮ್ಮದಿಯ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಹೇಳಿದರು.

ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಗಂಗಾಧರ ಶಿವಾಚಾರ್ಯಸ್ವಾಮೀಜಿ ಹಾಗೂ ಬೆಡದಹಳ್ಳಿ ಶ್ರೀಪಂಚಭೂತೇಶ್ವರ ಮಠದ ಶ್ರೀರುದ್ರಮುನಿ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಗೆಳೆಯರ ಬಳಗದ ಸಂಸ್ಥಾಪಕ ಅಧ್ಯಕ್ಷ ಶಿವಪ್ಪ ಮಾತನಾಡಿ, ಚುನಾಯಿತ ಜನಪ್ರತಿನಿಧಿಗಳು ಹಾಗೂ ರಾಜಕೀಯ ಮುಖಂಡರು ಗ್ರಾಮಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿ ಶಿಕ್ಷಣ, ಆರೋಗ್ಯ ಹಾಗೂ ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ನನಸು ಮಾಡುವ ದಿಕ್ಕಿನಲ್ಲಿ ಕೆಲಸ ಮಾಡಬೇಕು. ಪೋಷಕರು ತಮ್ಮ ಮಕ್ಕಳನ್ನು ಕನ್ನಡ ಸರ್ಕಾರಿ ಶಾಲೆಗಳಿಗೆ ದಾಖಲು ಮಾಡಿ ಸರ್ಕಾರಿ ಶಾಲಾ-ಕಾಲೇಜುಗಳನ್ನು ಉಳಿಸಬೇಕು ಎಂದು ಮನವಿ ಮಾಡಿದರು.

ಸಂತೇಬಾಚಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿಗೆ ವಿಶೇಷ ಅನುಧಾನ ಕೊಡಿಸಿದ ಸಣ್ಣ ನೀರಾವರಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಮೃತ್ಯುಂಜಯಸ್ವಾಮಿ ಸೇರಿದಂತೆ 66ವರ್ಷಗಳಿಂದ ಗೆಳೆಯರ ಬಳಗಕ್ಕೆ ಹಾಗೂ ಸಂತೇಬಾಚಹಳ್ಳಿ ಹೋಬಳಿಯ ಅಭಿವೃದ್ಧಿಗೆ ಸಹಕಾರ ನೀಡುತ್ತಿರುವ ಎಲ್ಲಾ ಮಹನೀಯರನ್ನು ಬಿ.ಶಿವಪ್ಪ ಸ್ಮರಿಸಿದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ನಡೆಸಲಾಯಿತು.

ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಮ್, ಸಮಾಜ ಸೇವಕ ಮೊಟ್ಟೆ ಮಂಜು, ಸದ್ಭಾವನಾ ಸೇವಾ ಟ್ರಸ್ಟ್ ಅಧ್ಯಕ್ಷ ಅಘಲಯ ವಿಜಯ್‌ಕುಮಾರ್, ಡಾ.ಮಧುಸೂಧನ್, ಮಾರೇನಹಳ್ಳಿ ಲೋಕೇಶ್, ಟಾಟಾ ಕಂಪನಿ ಪುನೀತ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಗಳ ಮಂಜೇಗೌಡ, ಸದಸ್ಯರಾದ ಲಕ್ಷ್ಮಿ ನಾಗೇಶ್, ಅಗ್ರಹಾರಬಾಚಹಳ್ಳಿ ಗ್ರಾ.ಪಂ.ಅಧ್ಯಕ್ಷ ಎ.ಸಿ.ದಿವಿಕುಮಾರ್, ಮಾಜಿ ಅಧ್ಯಕ್ಷ ಮೋಹನ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಶೋಕ್, ಗೆಳೆಯರ ಬಳಗದ ಗೌರವ ಅಧ್ಯಕ್ಷ ಸೋಮೇಶ್, ಅಧ್ಯಕ್ಷ ಗೌಡಜಯಕುಮಾರ್ ಹಾಗೂ ಕಾರ್ಯದರ್ಶಿ ಕೃಷ್ಣ, ಉಮೇಶ್‌ರಾಜು, ಸೋಮಶೇಖರ್, ನಾಗೇಶ್, ನಾಗೇಂದ್ರ ಸೇರಿದಂತೆ ನೂರಾರು ಗಣ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಿಂಹರೂಪಿಣಿ ಕನ್ನಡ ಚಲನಚಿತ್ರ ನಾಯಕ ನಟ ಬ್ಯಾಡರಹಳ್ಳಿ ಸಾಗರ್ ಹಾಗೂ ಖಳ ನಟ ಸಂತೆಬಾಚಹಳ್ಳಿ ಲೋಹಿತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 

ರಾತ್ರಿಯಿಡಿ ಭರತ ನಾಟ್ಯ, ಕೋಲಾಟ, ಮಲೆಮಹದೇಶ್ವರ ಸ್ವಾಮಿಯ ಗುಂಪು ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ತುಮಕೂರಿನ ಜ್ಯೋತಿ ಮೆಲೋಡಿಸ್ ಅವರಿಂದ ಸಂಗೀತೋತ್ಸವ ಹಾಗೂ ಕರ್ನಾಟಕ ಜಾದೂಗಾರ್ ಅಕ್ಕಿಹೆಬ್ಬಾಳು ಅಕ್ಬರ್ ಅವರು ನಡೆಸಿಕೊಟ್ಟ ಜಾದೂ ಕಾರ್ಯಕ್ರಮವು ಜನತೆಯ ಮೆಚ್ಚುಗೆಗೆ ಪಾತ್ರವಾಯಿತು.

ನಾಡಿನ ಖ್ಯಾತ ಜಾನಪದ ಗಾಯಕ ಗಾಮನಹಳ್ಳಿ ಮಹದೇವಸ್ವಾಮಿ, ಉಮೇಶರಾಜು ಸ್ವಾಗತಿಸಿ, ಗೌಡ ಜಯಕುಮಾರ್ ವಂದಿಸಿದರು, ಪುರಸಭೆ ಮಾಜಿ ಸದಸ್ಯರಾದ ಕೆ.ಆರ್.ನೀಲಕಂಠ ಕಾರ್ಯಕ್ರಮ ನಿರೂಪಿಸಿದರು.

—————--ಶ್ರೀನಿವಾಸ್ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?