ಕೆ.ಆರ್.ಪೇಟೆ-ಶ್ರೀ ಕ್ಷೇತ್ರದ ಲಿಂಗೈಕ್ಯ ಪೀಠಾಧಿಪತಿ ಶ್ರೀ ಚಂದ್ರಶೇಖರ ಸ್ವಾಮೀಜಿಗಳು ಗವಿಮಠದ ಪೀಠಾಧ್ಯಕ್ಷರಾಗಿ ಶ್ರೀ ಮಠವನ್ನು ಸಮರ್ಥವಾಗಿ ವೈಚಾರಿಕ ನೆಲೆಗಟ್ಟಿನ ಆಧಾರದ ಮೇಲೆ ಶರಣ ಶ್ರದ್ಧಾಕೇಂದ್ರವನ್ನಾಗಿ ಮುನ್ನಡೆಸಿದ್ದಾರೆ ಎಂದು ಕೆಂಗೇರಿ ಉಪ ನಗರದ ಏಕದಳ ಬಂಡೆ ಮಠದ ಪೀಠಾಧಿಪತಿ ಶ್ರೀ.ಸಚ್ಚಿದಾನಂದ ಸ್ವಾಮೀಜಿಗಳು ಮೆಚ್ಚುಗೆ ಸೂಚಿಸಿದರು.
ಅವರು ಕಾಪನಹಳ್ಳಿ ಗವಿಮಠ ಸ್ವತಂತ್ರ ಸಿದ್ದಲಿಂಗೇಶ್ವರ ಶ್ರೀ ಕ್ಷೇತ್ರದ ಲಿಂಗೈಕ್ಯ ಪೀಠಾಧಿಪತಿ ಶ್ರೀ ಚಂದ್ರಶೇಖರ ಸ್ವಾಮೀಜಿಗಳ 15ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ,ಸ್ವತಂತ್ರ ಸಿದ್ದಲಿಂಗೇಶ್ವರರು ಜೀವಂತವಾಗಿ ಸಮಾಧಿಯಾಗಿರುವ ಗದ್ದುಗೆಯಿರುವ ಗವಿಮಠವನ್ನು ಬಸವಾದಿ ಶರಣರ ಚಿಂತನೆಗಳು ಹಾಗೂ ಸಂದೇಶಗಳ ಆಧಾರದ ಮೇಲೆ ಮುನ್ನಡೆಸಿ ವಚನಗಳ ಸಾರವನ್ನು ಗ್ರಾಮೀಣ ಜನರಿಗೆ ತಲುಪಿಸುವ ಮೂಲಕ ಧಾರ್ಮಿಕ ಜಾಗೃತಿ ಮೂಡಿಸಿದ್ದಾರೆ. ಹಾದಿ ತಪ್ಪುತ್ತಿರುವ ಯುವ ಜನಾಂಗವನ್ನು ಸರಿ ದಾರಿಯಲ್ಲಿ ಮುನ್ನಡೆಸಲು ಧರ್ಮದ ದಾರಿಯಲ್ಲಿ ಮುನ್ನಡೆಯುವುದು ಇಂದಿನ ಅಗತ್ಯವಿದ್ದು ಈ ದಿಕ್ಕಿನಲ್ಲಿ ಗವಿಮಠದ ಪೀಠಧಿಪತಿಗಳಾದ ಶ್ರೀ ಚನ್ನವೀರಯ್ಯ ಸ್ವಾಮೀಜಿಗಳು ಗವಿಮಠದ ಭಕ್ತರು ಹಾಗೂ ಗ್ರಾಮೀಣ ಜನರಿಗೆ ಪ್ರವಚನಗಳು ಹಾಗೂ ಧರ್ಮ ಸಂದೇಶದ ಮೂಲಕ ಅರಿವಿನ ಜಾಗೃತಿ ಮೂಡಿಸಿ ಮುನ್ನಡೆಸುತ್ತಿರುವುದು ಸಂತೋಷ ತಂದಿದೆ ಎಂದು ಬಂಡೆ ಮಠದ ಶ್ರೀಗಳು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ತೋಟಪ್ಪಶೆಟ್ಟಿ ಮಾತನಾಡಿ, ನಮ್ಮ ತಾಲೂಕಿನ ಏಕೈಕ ಶರಣ ಶ್ರದ್ಧಾಕೇಂದ್ರವಾಗಿರುವ ಕಾಪನಹಳ್ಳಿ ಗವಿಮಠದ ಕೀರ್ತಿಯನ್ನು ನಾಡಿನಾಧ್ಯಂತ ಬೆಳಗಿದ ಶ್ರೀ ಚಂದ್ರಶೇಖರಸ್ವಾಮೀಜಿಗಳು ಬಸವಾದಿ ಶರಣರ ತತ್ವಗಳು ಹಾಗೂ ಸಂದೇಶಗಳನ್ನು ಮನೆಮನೆಗೆ ತಲುಪಿಸುವ ಮೂಲಕ ವಿಚಾರಕ್ರಾಂತಿಗೆ ಭದ್ರ ಬುನಾದಿ ಹಾಕಿದ್ದಲ್ಲದೇ ವೈಜ್ಞಾನಿಕ ಚಿಂತನೆಗಳ ಆಧಾರದ ಮೇಲೆ ಶ್ರೀ ಮಠವನ್ನು ಮುನ್ನಡೆಸಿ, ಭಗವಂತನ ಒಲುಮೆಗೆ ಆಡಂಭರದ ಪೂಜೆ ಪುರಸ್ಕಾರಗಳು ಬೇಕಾಗಿಲ್ಲ. ನಿಜವಾದ ಭಕ್ತಿ ಹಾಗೂ ಸರಳವಾದ ಪೂಜೆ ಪುರಸ್ಕಾರಗಳಿಂದಲೇ ಭಗವಂತನ ಒಲುಮೆಗೆ ಪಾತ್ರರಾಗಬಹುದು. ಮಾನವ ಧರ್ಮಕ್ಕಿಂತ ಮಿಗಿಲಾದ ಧರ್ಮವು ವಿಶ್ವದಲ್ಲಿಯೇ ಯಾವುದೂ ಇಲ್ಲವೆಂಬುದನ್ನು ಸಾರಿ ಹೇಳಿ ಧಾರ್ಮಿಕ ಜಾಗೃತಿ ಮೂಡಿಸಿದ ಶ್ರೀ ಚಂದ್ರಶೇಖರ ಸ್ವಾಮೀಜಿಗಳ ಜೀವನದ ಸಂದೇಶಗಳು ಸಾರ್ವಕಾಲಿಕ ಸತ್ಯವಾಗಿವೆ ಎಂದು ತೋಟಪ್ಪಶೆಟ್ಟಿ ಹೇಳಿದರು.
ಗವಿಮಠ ಶ್ರೀ ಕ್ಷೇತ್ರದ ಶ್ರೀಗಳಾದ ಶ್ರೀ ಸ್ವತಂತ್ರ ಚನ್ನವೀರಯ್ಯ ಸ್ವಾಮೀಜೀ, ದಾನಿಗಳಾದ ಗಣಪತಿ ದೇವಸ್ಥಾನ ಚಂದ್ರಶೇಖರ್, ಮುಖಂಡರಾದ ಬ್ಯಾಂಕ್ ಪರಮೇಶ್, ತೋಟಪ್ಪಶೆಟ್ಟಿ, ಸೋಮನಾಥಪುರದ ಮಹದೇಶ್, ಮಡುವಿನಕೋಡಿ ಗಂಗಾಧರ್, ಕಟ್ಟಹಳ್ಳಿ ಪರಮೇಶ್, ಗಂಜಿಗೆರೆ ಮಹೇಶ್, ಬಿ.ಎ.ಸುರೇಶ್, ಗದ್ದೆಹೊಸೂರು ಜಗದೀಶ್, ತಾಲ್ಲೂಕು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ವೀರೇಶಪ್ಪ, ಗುಣಶ್ರೀ ಸೇರಿದಂತೆ ನೂರಾರು ಜನರು ಶ್ರೀಚಂದ್ರಶೇಖರ ಸ್ವಾಮೀಜಿಗಳ 15ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
——-——ಶ್ರೀನಿವಾಸ್ ಆರ್