ಕೆ.ಆರ್.ಪೇಟೆ: ತಾಲ್ಲೂಕಿನ ಆನೆಗೊಳ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ರುಕ್ಮಿಣಿ ನಾರಾಯಣ್ ಆವಿರೋಧವಾಗಿ ಆಯ್ಕೆಯಾದರು.
ಈ ಹಿಂದಿನ ಅಧ್ಯಕ್ಷೆ ಮಹಾಲಕ್ಷ್ಮಿ ವಿಶ್ವನಾಥ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ರುಕ್ಮಿಣಿ ನಾರಾಯಣ್ ಅವರನ್ನು ಹೊರತು ಪಡಿಸಿ ಬೇರೆ ಯಾರೂ ಸಹ ನಾಮಪತ್ರ ಸಲ್ಲಿಸದೇ ಇರುವ ಕಾರಣ ರುಕ್ಮಿಣಿ ರವರು ಅವಿರೋಧ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ್ ಕುಮಾರ್ ಘೋಷಿಸಿದರು.
ಸಹ ಚುನಾವಣಾಧಿಕಾರಿಯಾಗಿ ತಾ.ಪಂ.ವ್ಯವಸ್ಥಾಪಕ ಅನಿಲ್ ಬಾಬು, ಅನೆಗೊಳ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ವಿ.ಎಂ.ರವಿಕುಮಾರ್ ಕಾರ್ಯನಿರ್ವಹಿಸಿದರು.
ನೂತನ ಅಧ್ಯಕ್ಷೆ ರುಕ್ಮಿಣಿ ಅವರನ್ನು ರಾಜ್ಯ ಸಹಕಾರ ಮಾರಾಟ ಮಹಾ ಮಂಡಲದ ನಿರ್ದೇಶಕರಾದ ಸಿ.ಎನ್ ಪುಟ್ಟಸ್ವಾಮಿಗೌಡ ಅಭಿನಂದಿಸಿದರು.ಬಳಿಕ ಮಾತನಾಡಿದ ಅವರು ನೂತನ ಅಧ್ಯಕ್ಷರು ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕು.ಪ್ರಮುಖವಾಗಿ ಕುಡಿಯುವ ನೀರು, ಬೀದಿ ದೀಪ, ಚರಂಡಿ ಸ್ವಚ್ಚತೆ, ಮತ್ತು ರಾಷ್ಟ್ರೀಯ ಮಹಾತ್ಮ ಗಾಂಧಿ ಯೋಜನೆ ಕೆಲಸಗಳ ಬಗ್ಗೆ ಹೆಚ್ಚು ಒತ್ತು ನೀಡಿ ಗ್ರಾಮಗಳ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವಂತೆ ಸಲಹೆ ನೀಡಿದರು.
ನೂತನ ಅಧ್ಯಕ್ಷೆ ರುಕ್ಮಿಣಿ ಮಾತನಾಡಿ ನನ್ನ ಅಧಿಕಾರದ ಅವಧಿಯಲ್ಲಿ ಆನೆಗೊಳ ಗ್ರಾಮ ಪಂಚಾಯಿತಿಯ ಎಲ್ಲಾ ಗ್ರಾಮಗಳ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ.ಪ್ರಮುಖವಾಗಿ ನರೇಗಾ ಯೋಜನೆಯ ಮೂಲಕ ಜಾನುವಾರು ಕೊಟ್ಟಿಗೆ ನಿರ್ಮಾಣ,ಕೃಷಿ ಹೊಂಡ,ಮಳೆಕೊಯ್ಲು,ಚೆಕ್ ಡ್ಯಾಂ ನಿರ್ಮಾಣ,ಕೆರೆ ಕಟ್ಟೆಗಳ ಹೂಳೆತ್ತುವುದು, ಬಂಡಿ ರಸ್ತೆ ಅಭಿವೃದ್ಧಿ,ಸಿಸಿ ಚರಂಡಿ,ಸಿಸಿ ರಸ್ತೆ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೊಳ್ಳಲು ಕ್ರಮ ವಹಿಸಲಾಗುವುದು ಇದಕ್ಕೆ ಗ್ರಾಮ ಪಂಚಾಯತಿಯ ಎಲ್ಲಾ ಸದಸ್ಯರು ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಹೇಮಾವತಿ ಸಕ್ಕರೆ ಕಾರ್ಖಾನೆಯ ಮಾಜಿ ಉಪಾಧ್ಯಕ್ಷರಾದ ಬಿ.ಎಸ್ ಮಂಜುನಾಥ್,ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷರಾದ ಐನೋರಹಳ್ಳಿ ಮಲ್ಲೇಶ್,ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೋಳಿ ವೆಂಕಟೇಶ್, ಮುಖಂಡರಾದ ಶಿಶುಪಾಲು,ಚಿಕ್ಕತರಹಳ್ಳಿ ರಾಮಕೃಷ್ಣ,ಡಾಣಶೇಖರ್,ವಿಶ್ವನಾಥ್, ಗ್ರಾಮ ಪಂಚಾಯತಿ ಉಪಾಧ್ಯಕ್ಷ ನಂಜೇಶ್,ಮಾಜಿ ಉಪಾದ್ಯಕ್ಷರಾದ ರಮೇಶ್,ಸದಸ್ಯರುಗಳಾದ ಜಗನ್ನಾತ್,ಮಹಾಲಕ್ಷ್ಮಿ,ಅನುಸೂಯ,ಧನಲಕ್ಷ್ಮಿ,ರಂಜಿತ,ನಾಗಮ್ಮ,ರಕ್ಷಿತ್,ಪ್ರಕಾಶ್,ಗಂಗಾಧರ್,ಯೋಗೇಶ್,ಭಾಗ್ಯಮ್ಮ,ಮಂಜುಶೆಟ್ಟಿ,ಲಕ್ಷ್ಮಿ,ಕುಮಾರಿ,ಗ್ರಾಮ ಪಂಚಾಯಿತಿ ಪಿಡಿಓ ವಿ.ಎಂ. ರವಿ ಕುಮಾರ್,ಸೇರಿದಂತೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಲವು ಮುಖಂಡರು ಉಪಸ್ಥಿತರಿದ್ದರು.
———————ಶ್ರೀನಿವಾಸ್ ಕೆ ಆರ್ ಪೇಟೆ