ಕೆ.ಆರ್.ಪೇಟೆ-ಗ್ಯಾರಂಟಿ ಪರಿಶೀಲನಾ ಸಭೆ-ಗ್ರಹಲಕ್ಷ್ಮಿ ಯೋಜನೆಗೆ ಅರ್ಜಿಸಲ್ಲಿಸಲು ಇನ್ನು ಅವಕಾಶ-ಯೋಜನೆಗಳಲ್ಲಿನ ಸಮಸ್ಯೆಗಳ ಶೀಘ್ರ ಸರಿಪಡಿಸಲು-ಎ.ಬಿ.ಕುಮಾರ್ ಸೂಚನೆ

ಕೆ.ಆರ್.ಪೇಟೆ-ಪಟ್ಟಣದ ತಾಲ್ಲೂಕು ಪಂಚಾಯತ್ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲ್ಲೂಕು ಸಮಿತಿಯ ಅಧ್ಯಕ್ಷರಾದ ಅಗ್ರಹಾರಬಾಚಹಳ್ಳಿ ಎ.ಬಿ.ಕುಮಾರ್ ನೇತೃತ್ವದಲ್ಲಿ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷರಾದ ಎ.ಬಿ.ಕುಮಾರ್ ಅವರು ನಮ್ಮ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಸಂಬoಧಪಟ್ಟ ಇಲಾಖೆಗಳ ಅಧಿಕಾರಿಗಳು ಜವಾಬ್ದಾರಿಯುತವಾಗಿ ಫಲಾನುಭವಿಗಳಿಗೆ ಸೌಲಭ್ಯಗಳು ದೊರೆಯುವಂತೆ ನೋಡಿಕೊಳ್ಳಬೇಕು. ಯಾವುದಾದರೂ ಲೋಪವಿದ್ದರೆ ಅದನ್ನು ಸರಿಪಡಿಸಿಕೊಡಬೇಕು. ಗೃಹಲಕ್ಷ್ಮೀ ಹಣವು ಖಾತೆಗೆ ಜಮಾ ಆಗುವಲ್ಲಿ ಬ್ಯಾಂಕ್ ಸಮಸ್ಯೆ ಇದ್ದರೆ ಅದನ್ನು ಸರಿಪಡಿಸ ಬೇಕು. ಸಾರಿಗೆ ಬಸ್ಸಿನಲ್ಲಿ ಪೋನ್ ಪೇ, ಗೂಗಲ್ ಪೇ ಮೂಲಕ ಹಣ ಪಾವತಿಸಿ ಪ್ರಯಾಣಿಸಲು ಪುರುಷರಿಗೆ ಅವಕಾಶ ಇದೆ. ಮಹಿಳೆಯರು ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಇನ್ನು ಅವಕಾಶವಿದೆ. ರೇಷನ್ ಕಾರ್ಡ್ ತಿದ್ದುಪಡಿಗೆ ಜನವರಿ 30ವರೆಗೆ ಅವಕಾಶವಿದೆ. ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ಮಾಡಿಸಿಕೊಳ್ಳುವಂತೆ ಎ.ಬಿ.ಕುಮಾರ್ ಮನವಿ ಮಾಡಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಲ್ಲಿ ಪ್ರಮುಖವಾಗಿ ವಿದ್ಯುತ್ ಸಮಸ್ಯೆ, ಗೃಹಲಕ್ಷ್ಮೀ ಫಲಾನುಭವಿಗಳಿಗೆ ಸಮಸ್ಯೆ, ಸಾರಿಗೆ ಸಮಸ್ಯೆ, ಪಡಿತರ ಚೀಟಿ ಸಮಸ್ಯೆ, ಯುವನಿಧಿ ಅನುಷ್ಠಾನದಲ್ಲಿನ ಸಮಸ್ಯೆ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಅರುಣ್‌ಕುಮಾರ್ ಆಗಸ್ಟ್ 2023ರಿಂದ ಆಗಸ್ಟ್ 2024ರವರೆಗೆ ತಾಲ್ಲೂಕಿನಲ್ಲಿ ಅರ್ಹ ಫಲಾನುಭವಿಗಳ ಸಂಖ್ಯೆ 70,041 ಇರುತ್ತದೆ. ಧನ ಸಹಾಯ ಪಡೆಯುತ್ತಿರುವವರು 67,675 ಆಗಿರುತ್ತದೆ. ಶೇ.96.62ರಷ್ಟು ಸಾಧನೆ ಮಾಡಲಾಗಿದೆ ಎಂದರು.

ಚೆಸ್ಕಾo ಇಂಜಿನಿಯರ್ ಪುಟ್ಟಸ್ವಾಮಿ ಮಾತನಾಡಿ ತಾಲ್ಲೂಕಿನಲ್ಲಿ ಗೃಹಜ್ಯೋತಿ ಯೋಜನೆಗೆ 34,224ಮಂದಿ ನೊಂದಾಯಿಸಿಕೊoಡಿರುತ್ತಾರೆ. ಶಾಲಾ-ಕಾಲೇಜು ಹಾಗೂ ಅಂಗನವಾಡಿ ಕೇಂದ್ರಗಳಿಗೆ ಉಚಿತವಾಗಿ ಗೃಹಜ್ಯೋತಿ ಅಡಿಯಲ್ಲಿ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇನ್ನೂ ನೊಂದಣಿ ಮಾಡಿಸದೇ ಇರುವ ಫಲಾನುಭವಿಗಳು ನೊಂದಾಯಿಸಿಕೊಳ್ಳಲು ಅವಕಾಶ ಇದೆ ಇದನ್ನು ಅರ್ಹರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಆಹಾರ ಇಲಾಖೆಯ ಶಿರಸ್ತೇದಾರ್ ಪೂರ್ಣಿಮ ಮಾತನಾಡಿ ನಮ್ಮ ತಾಲ್ಲೂಕಿನಲ್ಲಿ 4106 ಅಂತ್ಯೋದಯ,62523 ಬಿಪಿಎಲ್ ಕಾರ್ಡುದಾರರಿಗೆ ಪ್ರತಿ ಸದಸ್ಯರಿಗೆ 170ರೂ ನಂತೆ ಪಾವತಿಯಾಗುತ್ತಿದೆ. ಕಾರಣಾಂತರಗಳಿoದ 2033ಕಾರ್ಡುಗಳಿಗೆ ಡಿ.ಬಿಟಿ ಮೂಲಕ ಹಣ ಜಮೆ ಆಗುತ್ತಿಲ್ಲ ಅಂತಹ ಫಲಾನುಭವಿಗಳು ನಮ್ಮ ಆಹಾರ ಶಾಖೆಗೆ ಬಂದರೆ ನಿಖರವಾದ ಕಾರಣ ತಿಳಿಸಲಾಗುವುದು ಎಂದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೆ.ಆರ್.ಪೇಟೆ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯ ಕಾರ್ಯದರ್ಶಿ ತಾ.ಪಂ.ಇಓ ಕೆ.ಸುಷ್ಮ, ಅಧಿಕಾರಿಗಳಾದ ತಾ.ಪಂ.ಸಹಾಯಕ ನಿರ್ದೇಶಕ ಡಾ.ನರಸಿಂಹರಾಜು, ಮಹಿಳಾ ಮತ್ರು ಮಕ್ಕಳ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿ ಅರುಣ್ ಕುಮಾರ್, ಆಹಾರ ಇಲಾಖೆಯ ಶಿರಸ್ತೇದಾರ್ ಪೂರ್ಣಿಮಾ, ಚೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಪುಟ್ಟಸ್ವಾಮಿ, ಬಸ್ ಡಿಪೋ ಮ್ಯಾನೇಜರ್ ರವಿಕುಮಾರ್, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರುಗಳಾದ ಸಿ.ಆರ್.ಪಿ.ಕುಮಾರ್, ಶ್ಯಾಮಣ್ಣ, ಬೊಮ್ಮೇನಹಳ್ಳಿ ಶಿವಮ್ಮ, ಕೆ.ಎಸ್.ಆರ್.ಟಿ.ಸಿ ಶಿವಣ್ಣ, ಲತಾಹರೀಶ್, ಶಿವಲಿಂಗಪ್ಪ, ಬಂಡಿಹೊಳೆ ಉಮೇಶ್, ಡಿ.ಎನ್.ಸೋಮಶೇಖರ್, ಹಫೀಜ್‌ಉಲ್ಲಾ, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ವಿಷಯ ನಿರ್ವಾಹಕಿ ಚೈತ್ರಾ.ಕೆ. ಸೇರಿದಂತೆ ಎಲ್ಲಾ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

—–ಶ್ರೀನಿವಾಸ್ ಆರ್

Leave a Reply

Your email address will not be published. Required fields are marked *

× How can I help you?