ಕೆ.ಆರ್.ಪೇಟೆ-ಶಾಸಕರ ಆಪ್ತ ಸಹಾಯಕರಿಗೆ’ಲಂಚದ ಬೇಡಿಕೆ’ಇಟ್ಟ ನೌಕರ-ರೈತರ,ಸಾರ್ವಜನಿಕರ ಬಳಿ ಗಿಂಬಳಕ್ಕೆ ಬೇಡಿಕೆ ಇಟ್ಟರೆ ನಿರ್ದಾಕ್ಷಿಣ್ಯ ಕ್ರಮ

ಕೆ.ಆರ್.ಪೇಟೆ-ಅನ್ನದಾತರ,ಸಾರ್ವಜನಿಕರ ಬಳಿ ಲಂಚಕ್ಕೆ ಕೈ ಒಡ್ಡಿದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಶಾಸಕ ಹೆಚ್ ಟಿ ಮಂಜು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಅವರು ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಲಂಚಕ್ಕೆ ಬೇಡಿಕೆ ಇಟ್ಟು ಫೈಲ್‌ಗಳನ್ನು ವಿಲೇವಾರಿ ಮಾಡದೇ ರೈತರನ್ನು ಪೀಡಿಸಿದರೆ ನಾನು ಸಹಿಸುವುದಿಲ್ಲ.ನಿಗಧಿತ ಅವಧಿಯಲ್ಲಿ ಕಡತವನ್ನು ವಿಲೇವಾರಿ ಮಾಡದೇ ಹಣದ ಆಸೆಯಿಂದ ಫೈಲ್‌ಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿರುವುದು ಕಂಡು ಬಂದರೆ ಸಂಬoಧಪಟ್ಟ ಅಧಿಕಾರಿ ಅಥವಾ ನೌಕರರನ್ನು ಕಡ್ಡಾಯ ವರ್ಗಾವಣೆ ಮಾಡಿಸಬೇಕಾಗುತ್ತದೆ.ಅಂತಹ ಅಧಿಕಾರಿಗಳಿಗೆ ನನ್ನ ಕ್ಷೇತ್ರದಲ್ಲಿ ಜಾಗವಿಲ್ಲ. ಹಾಗಾಗಿ ಬಹಳ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.

ಆರ್.ಟಿ.ಸಿ ತಿದ್ದುಪಡಿಗೆ ಅರ್ಜಿ ಸ್ವೀಕಾರ ಮಾಡಲು ಶಾಸಕರ ಆಪ್ತ ಸಹಾಯಕ ಪ್ರದೀಪ್ ಅವರ ಬಳಿಯೇ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದ,ಅರ್ಜಿ ಸ್ವೀಕಾರ ವಿಭಾಗದ ನೌಕರ ಸತೀಶ್‌ಕುಮಾರ್ ಅವರನ್ನು ಸಭೆಗೆ ಕರೆಸಿ, ತೀವ್ರ ತರಾಟೆಗೆ ತೆಗೆದುಕೊಂಡ ಶಾಸಕ ಹೆಚ್.ಟಿ.ಮಂಜು ನನ್ನ ಆಪ್ತ ಸಹಾಯಕನ ಬಳಿಯೇ ಲಂಚ ಕೇಳುವ ನೀವು ಸಾಮಾನ್ಯ ಜನರ ಬಳಿ ಇನ್ನೆಷ್ಟು ಲಂಚ ಕೇಳುತ್ತೀರಿ ಎಂದು ಕಿಡಿಕಾರಿದರು.

ಇದಕ್ಕೆ ಸಮಜಾಯಿಸಿ ನೀಡಲು ಬಂದ ಗ್ರೇಡ್-2 ತಹಸೀಲ್ದಾರ್ ಅವರ ವಿರುದ್ದವೂ ಕೆಂಡಾಮಂಡಲವಾದರೂ.ನೌಕರರು ಉತ್ತಮವಾಗಿ ಕೆಲಸ ಮಾಡಿದರೆ ಜನಪ್ರತಿನಿಧಿಗಳಿಗೆ ಒಳ್ಳೆಯ ಹೆಸರು ಬರುತ್ತದೆ.ಆದರೆ ಕೆಲವು ಅಧಿಕಾರಿಗಳ ಲಂಚಬಾಕತನದಿoದ ಇಡೀ ಕಂದಾಯ ಇಲಾಖೆಗೆ ಕೆಟ್ಟು ಹೆಸರು ಜೊತೆಗೆ ಜನಪ್ರತಿನಿಧಿಗಳಾದ ನಮಗೂ ಕೆಟ್ಟ ಬರುತ್ತದೆ.ಇದಕ್ಕೆ ಅವಕಾಶ ನೀಡದೇ ಜನರ ತೆರಿಗೆ ಹಣದಲ್ಲಿ ತಮಗೆ ನೀಡುವ ಸಂಬಳಕ್ಕೆ ತಕ್ಕಂತೆ ಉತ್ತಮ ಸೇವೆ ಸಲ್ಲಿಸಿ ಒಳ್ಳೆಯ ಹೆಸರು ಪಡೆದುಕೊಳ್ಳಿರಿ ಎಂದು ಸಲಹೆ ನೀಡಿದರು.

ತಾಲ್ಲೂಕಿನಲ್ಲಿ ವಿವಿಧ ಕಾರಣಗಳಿಂದ ಸುಮಾರು 13ಸಾವಿರಕ್ಕೂ ಅಧಿಕ ಮಂದಿಗೆ ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳಿಗೆ ಹಣ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿಲ್ಲ ಎಂದರೆ ಏನು ಅರ್ಥ ಅಧಿಕಾರಿಗಳು ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ ಶಾಸಕರು,ಈ ಬಗ್ಗೆ ಸಂಬoಧಪಟ್ಟವರ ಬಳಿ ಕಂದಾಯ ಇಲಾಖೆಯ ಅಧಿಕಾರಿಗಳು ಹೋಗಿ ಏಕೆ ಮಾಸಾಶನ ಬರುತ್ತಿಲ್ಲ ಎಂಬುದನ್ನು ಪರಿಶೀಲನೆ ಮಾಡಿ ಮುಂದಿನ ಸಭೆಯೊಳಗೆ ಎಲ್ಲರಿಗೂ ಮಾಸಾಶನ ತಲುಪುವಂತೆ ನೋಡಿಕೊಳ್ಳಬೇಕು ಎಂದು ಶಾಸಕರು ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ತಹಸೀಲ್ದಾರ್ ಡಾ.ಕೆ.ಯು.ಅಶೋಕ್, ಗ್ರೇಡ್-2 ತಹಸೀಲ್ದಾರ್ ಲೋಕೇಶ್, ಉಪತಹಸೀಲ್ದಾರ್ ಗೌರಮ್ಮ, ವೀಣಾ, ಜಯಕುಮಾರ್, ಶಿರಸ್ತೇದಾರ್ ರವಿ ಸೇರಿದಂತೆ ಎಲ್ಲಾ ಕಂದಾಯ ಇಲಾಖೆಯ ನೌಕರರು, ರಾಜಸ್ವ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು, ಸೇರಿದಂತೆ ವಿವಿಧ ವಿಭಾಗದ ನೌಕರರು ಉಪಸ್ಥಿತರಿದ್ದು ತಮ್ಮ ತಮ್ಮ ವ್ಯಾಪ್ತಿಯ ಪ್ರಗತಿಯ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದರು.

ನಾನು ಒಬ್ಬ ಸಾಮಾನ್ಯ ರೈತ ಕುಟುಂಬದಿಂದ ಬಂದಿರುವ ವ್ಯಕ್ತಿ.ಅಧಿಕಾರಿಗಳು ಹೇಗೆಲ್ಲ ಲಂಚಕ್ಕಾಗಿ ಜನರನ್ನು ಪೀಡಿಸುತ್ತಾರೆಂಬ ಅರಿವಿದೆ.

ನನ್ನ ಕ್ಷೇತ್ರದಲ್ಲಿ ಲಂಚಬಾಕ ನೌಕರರಿಗೆ ಅವಕಾಶವಿಲ್ಲ.ಸಾರ್ವಜನಿಕರು ಕಟ್ಟುವ ತೆರಿಗೆ ಹಣದಿಂದಲೇ ತಮ್ಮ ಬದುಕು ನಡೆಸುವ ಸರಕಾರಿ ನೌಕರ ವರ್ಗ ಮತ್ತೆ ಅವರಿಂದಲೇ ಲಂಚವನ್ನು ಕೇಳುವುದು ಯಾವ ನ್ಯಾಯ?

ಅಂತಹ ಕೆಲಸ ಮಾಡಲು ಅವರ ಮನಃಸಾಕ್ಷಿಯಾದರು ಹೇಗೆ ಒಪ್ಪುತ್ತದೆ ಎಂಬುದೇ ನನಗೆ ಇಂದಿಗೂ ಅರ್ಥವಾಗದ ಪ್ರಶ್ನೆ.

ನಾನು ಎಲ್ಲ ಶಾಸಕರಗಳ ಹಾಗಲ್ಲ.ಪ್ರಮಾಣೀಕರಿಗಷ್ಟೇ ನನ್ನ ಕ್ಷೇತ್ರದಲ್ಲಿ ಜಾಗ.ಅಪ್ರಾಮಾಣಿಕವಾಗಿಯೇ ನಾನು ಬದುಕುವುದು ಎಂಬ ಅಧಿಕಾರಿಗಳಿದ್ದರೆ ಅವರು ಬೇರೆಡೆ ವರ್ಗಾವಣೆ ಪಡೆದು ಹೋಗಲಿ.

——————ಶಾಸಕ ಹೆಚ್ ಟಿ ಮಂಜು

—————-ವರದಿಶ್ರೀನಿವಾಸ್ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?