
ಕೆ.ಆರ್.ಪೇಟೆ-ಡಾ.ಬಿ.ಆರ್.ಅಂಬೇಡ್ಕರ್ ನಿಗಮದ ವತಿಯಿಂದ ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ಮೋಟರ್ ಪಂಪ್ ಹಾಗೂ ಪರಿಕರ ಗಳನ್ನು ಪಡೆದಿರುವ ಎಲ್ಲಾ ಫಲಾನುಭವಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಭಲರಾಗಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಶಾಸಕ ಹೆಚ್.ಟಿ.ಮಂಜು ಹೇಳಿದರು.
ಪಟ್ಟಣದಲ್ಲಿರುವ ಪ್ರವಾಸಿ ಮಂದಿರ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಆಯ್ಕೆಯಾದ 20 ಫಲಾನುಭವಿಗಳಿಗೆ ಕೃಷಿ ಪರಿಕರಗಳನ್ನು ವಿತರಿಸಿ ಮಾತನಾಡಿ, ಹಲವಾರು ವರ್ಷಗಳಿಂದ ಈ ಸೌಲಭ್ಯವನ್ನು ಹಿಂದುಳಿದ ವರ್ಗಗಳ ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ವಿತರಣೆ ಮಾಡಲಾಗುತ್ತಿದೆ.ಪ್ರತಿವರ್ಷವೂ ಸಹ ಅರ್ಹ ರೈತ ಫಲಾನುಭವಿಗಳು ಸರ್ಕಾರದ ಈ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಈ ಹಿಂದೆ 300 ರಿಂದ 400 ಅಡಿಗಳಿಗೆ ಭೂಮಿಯಲ್ಲಿ ನೀರು ಸಿಗುತ್ತಿತ್ತು. ಆದರೆ ಕೆಲವು ವರ್ಷಗಳಿಂದ ಅಂತರ್ಜಲ ಮಟ್ಟ ಕುಸಿದು 800 ಅಡಿಗಳಷ್ಟು ಕೊರೆದರೂ ನೀರು ಸಿಗುತ್ತಿಲ್ಲ ಎಂದು ವಿಷಾದಿಸಿ, ರೈತರು ಇರುವ ನೀರನ್ನು ವಿನಾಕಾರಣ ಪೋಲು ಮಾಡದೆ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ತಾಲೂಕಿನ ಫಲಾನುಭವಿಗಳಿಗೆ ಲಕ್ಷಾಂತರ ಬೆಲೆಬಾಳುವ ಕೃಷಿ ಪಂಪ್‌ಸೆಟ್ ಮತ್ತು ಇತರೆ ಸಲಕರಣೆಗಳನ್ನು ನೀಡಲಾಗಿದ್ದು,ರೈತ ಸಮು ದಾಯದ ಇದರ ಪೂರ್ಣ ಪ್ರಮಾಣದ ಉಪಯೋಗವನ್ನು ಪಡೆದುಕೊಳ್ಳಬೇಕು. ಸರ್ಕಾರ ನೀಡುವ ಸವಲತ್ತು ದುರ್ಬಳಕೆಯಾಗದಂತೆ ಎಚ್ಚರಿಕೆ ವಹಿಸಿಬೇಕು ಎಂದು ಶಾಸಕರು ಹೇಳಿದರು.
ಈ ಸಂದರ್ಭದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಸುಧಾಮಣಿ, ಕೆ.ಎಸ್, ಇಂಜಿನಿಯರ್ ಮನೋಹರ್, ತಾಲ್ಲೂಕು ಸಹಾಯಕ ಅಧಿಕಾರಿ ದರ್ಶನ್ ಪಟೇಲ್, ಗ್ರಾ.ಪಂ ಸದಸ್ಯ ಬಲ್ಲೇನಹಳ್ಳಿ ಯೋಗೇಂದ್ರ, ಮುಖಂಡರಾದ ಬಂಡಿಹೊಳೆ ಕೃಷ್ಣಮೂರ್ತಿ, ನರಸಿಂಹ, ನಾಟನಹಳ್ಳಿ ರಮೇಶ್, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್, ಸೇರಿದಂತೆ ಫಲಾನುಭವಿಗಳಿದ್ದರು.
———-ಶ್ರೀನಿವಾಸ್ ಆರ್