ಕೆ.ಆರ್.ಪೇಟೆ-ತಾಲೂಕಿನ ಬೀರುವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಎನ್.ಧನಂಜಯ್ ,ಉಪಾಧ್ಯಕ್ಷರಾಗಿ ವಸಂತಮ್ಮ ಅವಿರೋಧವಾಗಿ ಚುನಾಯಿತರಾಗಿದ್ದಾರೆ.
ಸಂಘದ ಈ ಹಿಂದಿನ ಅಧ್ಯಕ್ಷರಾದ ಬಿ.ಎಲ್.ಬಲ್ಲೇಶ್ ಮತ್ತು ಉಪಾಧ್ಯಕ್ಷರಾದ ರುಕ್ಮಿಣಮ್ಮ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಇಂದು ಚುನಾವಣೆ ನಿಗಧಿಯಾಗಿತ್ತು. ಅಧ್ಯಕ್ಷ ಸ್ಥಾನ ಬಯಸಿ ಬಿ.ಎನ್.ಧನಂಜಯ ಮತ್ತು ಉಪಾಧ್ಯಕ್ಷ ಸ್ಥಾನ ಬಯಸಿ ವಸಂತಮ್ಮ ಅವರನ್ನು ಹೊರತು ಪಡಿಸಿ ಬೇರೆ ಯಾರೂ ಸಹ ನಾಮಪತ್ರ ಸಲ್ಲಿಸದೇ ಇರುವ ಕಾರಣ ಅವಿರೋಧ ಆಯ್ಕೆ ನಡೆಯಿತು. ಚುನಾವಣಾಧಿಕಾರಿಯಾಗಿ ತಾಲ್ಲೂಕು ಸಹಕಾರ ಅಭಿವೃದ್ದಿ ಅಧಿಕಾರಿ ಹೆಚ್.ಬಿ.ಭರತ್‌ಕುಮಾರ್, ಸಹ ಚುನಾವಣಾಧಿಕಾರಿಯಾಗಿ ಸಂಘದ ಸಿಇಓ ಬಿ.ಆರ್.ಯೋಗೇಶ್ ಕಾರ್ಯನಿರ್ವಹಿಸಿದರು.
ನೂತನ ಅಧ್ಯಕ್ಷ ಬಿ.ಎನ್.ಧನಂಜಯ ಅವರು ಮಾತನಾಡಿ, ನನ್ನನ್ನು ಅವಿರೋಧವಾಗಿ ಅಧ್ಯಕ್ಷರಾಗಲು ಸಹಕರಿಸಿದ ನಮ್ಮ ಗ್ರಾಮದ ಮುಖಂಡರು ಹಾಗೂ ಸಂಘದ ಎಲ್ಲಾ ನಿರ್ದೇಶಕರುಗಳಿಗೂ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸುವುದಾಗಿ ಹೇಳಿದರು.
ನನಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ಎಲ್ಲಾ ನಿರ್ದೇಶಕರು ಹಾಗೂ ಗ್ರಾಮದ ಮುಖಂಡರ ಸಹಕಾರದಿಂದ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ರೈತರ ಪಾಲಿಗೆ ಹೈನುವಾರಿಕೆ ವರದಾನವಾದ ಉಪಕಸುಬಾಗಿದೆ. ಮಳೆಯಿಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿ ನಷ್ಟಕಕ್ಕೆ ಒಳಗಾಗಬಹುದು ಆದರೆ ಹೈನುಗಾರಿಕೆಯಲ್ಲಿ ಯಾವುದೇ ನಷ್ಟವಾಗುವುದಿಲ್ಲ. ಬರಗಾಲದಲ್ಲಿಯೂ ರೈತರನ್ನು ಸಂಕಷ್ಟದಿoದ ಪಾರು ಮಾಡುವ ಹೈನುಗಾರಿಕೆಯನ್ನು ಉಳಿಸಬೇಕಾದರೆ ಹಾಲು ಉತ್ಪಾದಕರು ಡೇರಿಗೆ ಗುಣಮಟ್ಟದ ಹಾಲು ಪೂರೈಕೆ ಮಾಡಿ ಸಹಕಾರ ನೀಡಬೇಕು ಎಂದು ನೂತನ ಅಧ್ಯಕ್ಷ ಬಿ.ಎನ್.ಧನಂಜಯ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ವಸಂತಮ್ಮ, ನಿರ್ದೇಶಕರುಗಳಾದ ಬಿ.ಎಸ್.ಶಿವರಾಮೇಗೌಡ, ಬಿ.ಜೆ.ಶಶಿಧರ್, ಹೇಮಾದೇವರಾಜು, ಎ.ಬಿ.ವಿರೂಪಾಕ್ಷಪ್ಪ, ಬಲ್ಲೇಶ್.ಬಿ.ಎಲ್, ರುಕ್ಮಿಣಮ್ಮ, ದ್ಯಾವನಾಯಕ, ಸಾವಿತ್ರಮ್ಮ, ಸಂಘದ ಕಾರ್ಯದರ್ಶಿ ಬಿ.ಆರ್.ಯೋಗೇಶ್, ಹಾಲು ಪರೀಕ್ಷಕ ಬಿ.ಜಿ.ಯೋಗೇಂದ್ರ, ಸಹಾಯಕರಾದ ರಕ್ಷಿತ್, ಸಣ್ಣತಾಯಮ್ಮ, ಮುಖಂಡರಾದ ಲಕ್ಷ್ಮೇಗೌಡ , ಬಿ.ಎನ್.ಕುಮಾರ್, ಹರೀಶ್, ಬಿ.ಟಿ.ಕುಮಾರ್, ಯೋಗೇಶ್, ಪ್ರಕಾಶ್, ಎನ್.ಅಶ್ವಥ್, ಡಿ.ಚಂದ್ರು, ಬಿಜೆಪಿ ಕುಮಾರ್, ರಾಮಕೃಷ್ಣೇಗೌಡ, ಮಂಜುನಾಥ್, ಲೋಹಿತ್, ರುದ್ರೇಶ್, ಮೋಹನ್ ಸೇರಿದಂತೆ ಹಲವು ಗಣ್ಯರು, ಮುಖಂಡರು ಉಪಸ್ಥಿತರಿದ್ದರು.
————-ಶ್ರೀನಿವಾಸ್ ಕೆ ಆರ್ ಪೇಟೆ