ಕೆ.ಆರ್.ಪೇಟೆ:ಹಾಲು ಉತ್ಪಾದಕರು ಅಮೃತ ಸಮಾನವಾದ ಹಾಲಿಗೆ ಕಲಬೆರಕೆ ಮಾಡಬಾರದು.ಕಲಬೆರಕೆ ಮಾಡಿರುವುದು ಕಂಡು ಬಂದರೆ ಭಾರತ ಆರೋಗ್ಯ ಸುರಕ್ಷತಾ ಕಾಯಿದೆ ಪ್ರಕಾರ ಕನಿಷ್ಠ 1ವರ್ಷ ಜೈಲು ಹಾಗೂ 1ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸುವ ಕಾನೂನು ಜಾರಿಯಲ್ಲಿದೆ.ಹಾಗಾಗಿ ಕಲಬೆರಕೆ ಮಾಡದೇ ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ತಮ್ಮ ಗ್ರಾಮದ ಡೇರಿ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಹಿರಿಯ ನಿರ್ದೇಶಕ ಡಾಲು ರವಿ ಅವರು ಸಲಹೆ ನೀಡಿದರು.
ಅವರು ತಾಲ್ಲೂಕಿನ ಚಿನ್ನೇನಹಳ್ಳಿ,ಗಾಣದಹಳ್ಳಿ ಹಾಗೂ ಊಗಿನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಗಳ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಅಚ್ಚ ಹಾಲಿಗೆ ಕಲಬೆರಕೆ ಮಾಡಬೇಡಿ ಅಂತ ಎಷ್ಟೇ ತಿಳುವಳಿಕೆ ಮೂಡಿಸಿದರೂ ಕೆಲವು ವ್ಯಕ್ತಿಗಳು ಹಾಲಿಗೆ ಕಲಬೆರಕೆ ಮಾಡುವುದರಿಂದ ಇಡೀ ಗ್ರಾಮದ ಹಾಲು ಹಾಳಾಗುತ್ತದೆ.ಇದರಿಂದ ಸಂಘಕ್ಕೆ ಹಾಗೂ ಉತ್ಪಾದಕರಿಗೆ ನಷ್ಟ ಉಂಟಾಗುತ್ತದೆ.ಜೊತೆಗೆ ಸರ್ಕಾರದ 5ರೂ ಪ್ರೋತ್ಸಾಹ ಧನವೂ ಸಹ ಸಿಗುವುದಿಲ್ಲ.ಈಗಾಗಲೇ ಸುಮಾರು 5ಲಕ್ಷ ರೂ ಮೌಲ್ಯದ ಕಲಬೆರಕೆಯನ್ನು ಕಂಡು ಹಿಡಿಯುವ ಯಂತ್ರವನ್ನು ಡೆನ್ಮಾರ್ಕ ದೇಶದಿಂದ ಆಮದು ಮಾಡಿಕೊಂಡು ಡೇರಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೆರವಿನೊಂದಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ.ಡೇರಿಯಲ್ಲಿ ಈ ಯಂತ್ರವನ್ನು ಅಳವಡಿಸಿದರೆ ಹಾಲಿಗೆ ನೀರು ಹಾಕಿದರೆ ವಾಟರ್ ಎಂದು,ಸಕ್ಕರೆ ಹಾಕಿದರೆ ಶುಗರ್ ಎಂದು,ಉಪ್ಪನ್ನು ಹಾಕಿದರೆ ಸಾಲ್ಟ್,ಹಾಗೂ ಇತರೆ ಬೇರೆ ಯಾವುದೇ ರೀತಿಯ ವಸ್ತುಗಳನ್ನು ಕಲಬೆರಕೆ ಮಾಡಿದರೆ ಕೆಮಿಕಲ್ಸ್ ಎಂದು ತಿಳಿಸುತ್ತದೆ.ಆದ್ದರಿಂದ ಹತ್ತಾರು ಜನರ ಮುಂದೆ ಗೌರವ ಕಳೆದುಕೊಳ್ಳದೇ ಗುಣಮಟ್ಟದ ಹಾಲು ಪೂರೈಕೆ ಮಾಡಬೇಕು. ಈ ಮೂಲಕ ಸಂಘದ ಹಾಗೂ ಹಾಲು ಒಕ್ಕೂಟದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಡಾಲು ರವಿ ಮನವಿ ಮಾಡಿದರು.
ಸಂಘದ ಅಧ್ಯಕ್ಷೆ ಸವಿತ ಪರಮೇಶ್ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. 2023-24ನೇ ಸಾಲಿನಲ್ಲಿ ಸಂಘಕ್ಕೆ ಹೆಚ್ಚು ಗುಣಮಟ್ಟದ ಹಾಲು ಪೂರೈಕೆ ಮಾಡಿದ ಉತ್ಪಾದಕರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಸಭೆಯಲ್ಲಿ ಮಾರ್ಗದ ವಿಸ್ತರಣಾಧಿಕಾರಿ ಹೆಚ್.ಸಿ.ಬಸವರಾಜು ಆಡಿಟ್ ವರದಿ ಮಂಡಿಸಿದರು. ಬಜೆಟ್ ಅನ್ನು ಓದಿ ಮಹಾಸಭೆಯ ಅನುಮೋದನೆ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಚಿನ್ನೇನಹಳ್ಳಿ ಡೇರಿ ಅಧ್ಯಕ್ಷೆ ಸವಿತ ಪರಮೇಶ್, ಉಪಾಧ್ಯಕ್ಷೆ ರಾಜಮ್ಮನರಿಸಿಂಹಚಾರಿ, ನಿರ್ದೇಶಕರುಗಳಾದ ನಾಗಮ್ಮಮಂಜೇಗೌಡ, ವಿಜಯಲಕ್ಷ್ಮೀ, ರಾಮಕೃಷ್ಣ, ಪಾರ್ವತಮ್ಮ, ಶಕುಮಣಿಮಂಜೇಗೌಡ, ಪ್ರೀತಿ ಮಂಜೇಗೌಡ, ಕಮಲಮ್ಮ ರಾಮೇಗೌಡ, ಪಲ್ಲವಿ ಈಶ್ವರ್,ಲಕ್ಷ್ಮಮ್ಮ ಅಣ್ಣೇಗೌಡ, ಹೇಮಾವತಿ, ಭಾಗ್ಯಮ್ಮ, ಸಂಘದ ಕಾರ್ಯದರ್ಶಿ ಸಿ.ಆರ್.ಭವ್ಯ ಸೇರಿದಂತೆ ನೂರಾರು ಶೇರುದಾರರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ಗಾಣದಹಳ್ಳಿ:
ಗಾಣದಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ನಡೆದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಮನ್‌ಮುಲ್ ನಿರ್ದೇಶಕ ಡಾಲು ರವಿ ಉದ್ಘಾಟಿಸಿ ಮಾತನಾಡಿದರು. ಸಂಘದ ಅಧ್ಯಕ್ಷ ಧರ್ಮರಾಜು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಾರ್ಗದ ವಿಸ್ತರಣಾಧಿಕಾರಿ ಬಸವರಾಜು, ಗ್ರಾ.ಪಂ.ಉಪಾಧ್ಯಕ್ಷೆ ಗೌರಮ್ಮಮಂಜಪ್ಪ, ಗಾಣದಹಳ್ಳಿ ಸ್ವಾಮಿ, ಅಶೋಕ್, ಗಣೇಶ್, ಕಾಳೇಗೌಡ, ಸಂಘದ ಉಪಾಧ್ಯಕ್ಷೆ ಭಾಗ್ಯಮ್ಮ, ನಿರ್ದೇಶಕರುಗಳಾದ ಎಂ.ಕೆ.ನಂಜುಂಡಸ್ವಾಮಿ, ಸ್ವಾಮಿ, ನಿಂಗರಾಜು, ವೆಂಕಟೇಶ್, ಪುಟ್ಟರಾಜೇಗೌಡ, ಜಿ.ಕೆ.ನಿಂಗರಾಜು, ಜಿ.ಕೆ.ರಘು, ತಾಯಮ್ಮ, ಸಂಘದ ಕಾರ್ಯದರ್ಶಿ ಸಚ್ಚಿನ್, ಹಾಲು ಪರೀಕ್ಷಕ ಜಿ.ಎಸ್.ಪುನೀತ್ ಸೇರಿದಂತೆ ಸಂಘದ ಶೇರುದಾರರು ಉಪಸ್ಥಿತರಿದ್ದರು.
ಊಗಿನಹಳ್ಳಿ:
ಊಗಿನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆವರಣದಲ್ಲಿ ನಡೆದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ವೀರಮ್ಮನಂಜಪ್ಪ ವಹಿಸಿದ್ದರು.ಮನ್‌ಮುಲ್ ನಿರ್ದೇಶಕ ಡಾಲು ರವಿ ಅವರು2023-24ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಾರ್ಗದ ವಿಸ್ತರಣಾಧಿಕಾರಿ ಬಸವರಾಜು ಸಂಘದ ಆಡಿಟ್ ವರದಿ ಮಂಡಿಸಿದರು. ಗ್ರಾ.ಪಂ.ಮಾಜಿ ಅಧ್ಯಕ್ಷ ಹೆಚ್.ಎನ್.ಮುರುಳೀಧರ್, ಗ್ರಾ.ಪಂ.ಸದಸ್ಯ ರಾಜಶೇಖರಮೂರ್ತಿ, ಸಂಘದ ಉಪಾಧ್ಯಕ್ಷೆ ಸಾಕಮ್ಮಮಹೇಶಗೌಡ, ನಿರ್ದೇಶಕರುಗಳಾದ ಶಾರದಮ್ಮ ಬಸವರಾಜು, ಕುಮಾರಮ್ಮ ಶಿವಪ್ಪ, ಹೇಮಲತಾ ಪರಮೇಶ್, ಶೈಲಮಾದಪ್ಪ, ಗೌರಮ್ಮಣ್ಣಿರಾಜೇಗೌಡ, ಸುನಂದಮ್ಮನಂಜುಂಡಪ್ಪ, ಜಯಮ್ಮರಾಜೇಗೌಡ, ಲಕ್ಷ್ಮಮ್ಮಸಣ್ಣೇಗೌಡ, ಸರೋಜಮ್ಮ ಮಂಜೇಗೌಡ, ಸಾಕಮ್ಮಕಾಳಯ್ಯ, ಸಂಘದ ಕಾರ್ಯದರ್ಶಿ ಜ್ಯೋತಿಶಿವರಾಜು, ಹಾಲು ಪರೀಕ್ಷಕಿ ಶಿವಮ್ಮ, ಪಾರ್ವತಮ್ಮ, ಸಾವಿತ್ರಮ್ಮ ಸೇರಿದಂತೆ ನೂರಾರು ಶೇರುದಾರರು, ಗ್ರಾ.ಪಂ.ಹಾಲಿ-ಮಾಜಿ ಸದಸ್ಯರುಗಳು ಹಾಗೂ ಹಲವು ಮುಖಂಡರು ಉಪಸ್ಥಿತರಿದ್ದರು.
—————–-ಶ್ರೀನಿವಾಸ್ ಕೆ ಆರ್ ಪೇಟೆ