ಕೆ.ಆರ್.ಪೇಟೆ-ತಾಲೂಕಿನಾಧ್ಯಂತ ಹನುಮ ಜಯಂತಿ ಮಹೋತ್ಸವದ ಅಂಗವಾಗಿ ಪೂಜಾ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನಡೆದವು.ಹರಿಹರಪುರ,ಮಲ್ಕೋನಹಳ್ಳಿ,ಅಘಲಯ,ಮೋದೂರು,ಚಿಕ್ಕಸೋಮನಹಳ್ಳಿ ಹಾಗೂ ಪಟ್ಟಣದ ಪಡುವಲಬಾಗಿಲು ಆಂಜನೇಯ ದೇವಾಲಯ ಮತ್ತು ಹೊಸಹೊಳಲಿನ ಕೋಟೆ ಆಂಜನೇಯ ದೇವಾಲಯಗಲ್ಲಿ ಬೆಳಿಗ್ಗೆಯಿಂದ ಸಂಜೆಯವರೆವಿಗೂ ಭಕ್ತರು ಸರತಿಯ ಸಾಲಿನಲ್ಲಿ ನಿಂತು ಆಂಜನೇಯಸ್ವಾಮಿಯ ದರ್ಶನ ಪಡೆದರು.
ರಾಜ್ಯದ ಮಾಜಿಸಚಿವ ಡಾ.ನಾರಾಯಣಗೌಡ ಹೇಮಗಿರಿಯ ಬೆಟ್ಟದಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯ, ಹರಿಹರಪುರ ಗ್ರಾಮದ ಗ್ರಾಮ ರಕ್ಷಕ ಶ್ರೀ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ ಆಂಜನೇಯಸ್ವಾಮಿ ಉತ್ಸವಮೂರ್ತಿಯ ಅಡ್ಡಪಲ್ಲಕಿಯನ್ನು ಹೊತ್ತು ಗ್ರಾಮಸ್ಥ ರೊಂದಿಗೆ ಸಂಭ್ರಮಿಸಿದರು.
ಅಘಲಯ ಗ್ರಾಮದ ಪುರಾಣಪ್ರಸಿದ್ಧ ಹನುಮಂತರಾಯ ದೇವಾಲಯ,ಮಲ್ಕೋನಹಳ್ಳಿಯ ಶ್ರೀಪ್ರಸನ್ನ ಆಂಜನೇಯಸ್ವಾಮಿ ದೇವಾಲಯ ಹಾಗೂ ಹೊಸಹೊಳಲಿನ ಕೋಟೆ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಲೋಕಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಹೇಮಗಿರಿ ಶ್ರೀ ಕ್ಷೇತ್ರದಲ್ಲಿರುವ ಶ್ರೀ ಆಂಜನೇಯಸ್ವಾಮಿಗೆ ಆದಿಚುಂಚನಗಿರಿ ಹೇಮಗಿರಿ ಶಾಖಾ ಮಠದ ಡಾ.ಜೆ.ಎನ್.ರಾಮಕೃಷ್ಣೇಗೌಡ ಅವರ ನೇತೃತ್ವದಲ್ಲಿ ವಿಶೇಷ ಪೂಜೆ, ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆದವು. ಹನುಮ ಜಯಂತಿಯ ಅಂಗವಾಗಿ ಇಂದು ಹರಿಹರಪುರದಲ್ಲಿ ಸಂಭ್ರಮದ ರಥೋತ್ಸವವು ನಡೆಯಿತು.
ತಹಶೀಲ್ದಾರ್ ಅಶೋಕ್ ಶ್ರೀರಥದಲ್ಲಿ ವಿರಾಜಮಾನವಾಗಿದ್ದ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣಚಂದ್ರತೇಜಸ್ವಿ, ಹರಿಹರಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತಿಶ್ರೀಧರ್, ಉಪಾಧ್ಯಕ್ಷ ನಂದೀಶ್, ರಾಜಸ್ವ ನಿರೀಕ್ಷಕ ಜ್ಞಾನೇಶ್, ಮಂಡ್ಯ ಜಿಲ್ಲಾ ಗ್ರಾಮಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಹರೀಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ, ಅಘಲಯ ಶ್ರೀಧರ್, ಹರಿಹರಪುರ ಗ್ರಾ.ಪಂ ಅಧ್ಯಕ್ಷೆ ರತಿ ಶ್ರೀಧರ್, ಉಪಾಧ್ಯಕ್ಷ ನಂದೀಶ್, ಪಿಡಿಓ ನಾಯಿದಾ ಅಖ್ತರ್, ಕಾರ್ಯದರ್ಶಿ ಮಹದೇವ್, ಸದಸ್ಯರಾದ ಲತಾಹರೀಶ್, ವಿಜಯ, ಪರಮೇಶ್, ಸರೋಜಮ್ಮ, ಗಣೇಶ್,ಬಿ.ಸಿ.ಹರ್ಷ,ಜಯಾಮಣಿ,ದೇವಮ್ಮ,ಕುಸುಮ,ಸುಂದರಮ್ಮ,ಬಲರಾಮೇಗೌಡ,ದೇವರಾಜು,ಹರೀಶ್‌ಚಂದ್ರ, ನಾಗೇಗೌಡ, ರುಕ್ಮಿಣಿ, ಆಶಾ, ನರಸಿಂಹ,ಮುಖಂಡರಾದ ಹೆಚ್.ವೈ.ಜಯಕುಮಾರ್, ಮಹದೇವೇಗೌಡ, ಹ.ತಿ.ಶ್ರೀನಿವಾಸ್, ಮೋಹನ್,ಸುಬ್ಬೇಗೌಡ,ವೈದ್ಯಾಧಿಕಾರಿ ಮಧುಸೂದನ್, ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.
ಹನುಮ ಜಯಂತಿಯಲ್ಲಿ ಭಾಗವಹಿಸಿದ್ದ ಭಕ್ತಾಧಿಗಳಿಗೆ ಹೊಸಹೊಳಲು, ಮೋದೂರು, ಮಲ್ಕೋನಹಳ್ಳಿ ಹಾಗೂ ಅಘಲಯ ಗ್ರಾಮದಲ್ಲಿ ಸಾಮೂಹಿಕ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
——————-ಶ್ರೀನಿವಾಸ್ ಕೆ.ಆರ್ ಪೇಟೆ