ಕೆ.ಆರ್.ಪೇಟೆ-ತಾಲೂಕಿನ ಹರಿಹರಪುರ ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ಟಿ.ಆರ್.ನಂದೀಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾಮ ಪಂಚಾಯಿತಿಯ ಈ ಹಿಂದಿನ ಉಪಾಧ್ಯಕ್ಷರಾದ ಬಲರಾಮೇಗೌಡ ಅವರ ರಾಜೀ ನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಿಗಧಿಯಾಗಿತ್ತು.ಉಪಾಧ್ಯಕ್ಷ ಸ್ಥಾನ ಬಯಸಿ ಟಿ.ಆರ್ ನಂದೀಶ್ ಹೊರತುಪಡಿಸಿ ಉಳಿದ ಯಾವ ಸದಸ್ಯರು ನಾಮಪತ್ರ ಸಲ್ಲಿಸದೇ ಇರುವ ಕಾರಣ ಅವಿರೋಧ ಆಯ್ಕೆ ನಡೆಯಿತು.
ಚುನಾವಣಾ ಅಧಿಕಾರಿಯಾಗಿ ತೋಟಗಾರಿಕೆ ಸಹಾಯಕ ನಿರ್ದೇಶಕ ಡಾ.ಲೋಕೇಶ್ ಕರ್ತವ್ಯ ನಿರ್ವಹಿಸಿದರು.ಸಹ ಚುನವಣಾಧಿಕಾರಿಯಾಗಿ ತಾ.ಪಂ.ವ್ಯವಸ್ಥಾಪಕ ಅನಿಲ್‌ಬಾಬು,ಪಿಡಿಓ ನಾಯಿದಾ ಅಖ್ತರ್ ಕಾರ್ಯನಿರ್ವಹಿಸಿದರು.
ನೂತನ ಉಪಾಧ್ಯಕ್ಷ ಟಿ.ಆರ್.ನಂದೀಶ್ ಮಾತನಾಡಿ, ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲಾ ಸದಸ್ಯರಿಗೆ ಹಾಗೂ ಅಧ್ಯಕ್ಷರಿಗೆ,ಮುಖಂಡರಿಗೆ ನಾನು ಆಭಾರಿಯಾಗಿದ್ದೇನೆ. ನನಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಸದಸ್ಯರ ಸಹಕಾರದೊಂದಿಗೆ ಎಲ್ಲಾ ಗ್ರಾಮಗಳ ಕುಡಿಯುವ ನೀರು, ಬೀದಿ ದೀಪ, ಸ್ವಚ್ಛತೆ ಸೇರಿದಂತೆ ಸರ್ಕಾರದಿಂದ ಸಾರ್ವಜನಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನೂ ಜನರಿಗೆ ಮುಟ್ಟಿಸುವ ಜೊತೆಗೆ ನರೇಗಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ನೂತನ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಮುಖಂಡ ಗ್ರಾಮ ಪಂಚಾಯಿತಿ ಸದಸ್ಯ ಬೊಮ್ಮೇನಹಳ್ಳಿ ಹರ್ಷ, ಗ್ರಾಮ ಪಂಚಾಯಿತಿಯ ಸಮಗ್ರ ಅಭಿವೃದ್ಧಿಗೆ ಅಧ್ಯಕ್ಷರು ಸದಸ್ಯರು ಹಾಗೂ ಗ್ರಾಮದ ಹಿರಿಯರನ್ನು ಒಗ್ಗೂಡಿಸಿಕೊಂಡು ಹಗಲಿರುಳು ಶ್ರಮಿಸಿ ಪಕ್ಷ ಭೇದ ಮರೆತು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಗ್ರಾಮಗಳ ಅಭಿವೃದ್ಧಿ ಪಡಿಸಲಿ ಎಂದು ಸಲಹೆ ನೀಡಿದರು.
ಬಳಿಕ ಗ್ರಾಮಸ್ಥರು ಸರ್ವ ಸದಸ್ಯರು,ಬೆಂಬಲಿಗರು,ಹಿರಿಯರು,ಗ್ರಾ.ಪಂ ಸಿಬ್ಬಂದಿಗಳು ಹಾರ ತುರಾಯಿಗಳನ್ನು ಹಾಕಿ ಸಿಹಿ ಹಂಚಿ ಪಟಾಕಿ ಸಿಡಿಸುವ ಮೂಲಕ ಅವಿರೋಧವಾಗಿ ಆಯ್ಕೆಯಾದ ನೂತನ ಉಪಾಧ್ಯಕ್ಷರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ರತಿ ಶ್ರೀಧರ್, ಗ್ರಾ.ಪಂ.ಸದಸ್ಯರಾದ ಬಿ.ಸಿ.ಹರ್ಷ, ಬಲರಾಮೇಗೌಡ, ಕತ್ತರಘಟ್ಟ ಪರಮೇಶ್, ಹರೀಶ್, ಆಶಾ, ಸರೋಜಮ್ಮ, ವಿಜಿಯಮ್ಮ, ದೇವಮ್ಮ, ಲತಾ, ಕುಸುಮ, ನಾಗೇಗೌಡ, ರುಕ್ಮಿಣಿ, ಜಯಮಣಿ, ಸುಂದ್ರಮ್ಮ, ದೇವರಾಜ್, ನರಸಿಂಹಮೂರ್ತಿ, ಗಣೇಶ್, ಗ್ರಾ.ಪಂ ಮಾಜಿ ಸದಸ್ಯ ಹರಿಹರಪುರ ಶ್ರೀಧರ್, ಮುಖಂಡರಾದ ಶ್ರೀಧರ್, ರಮೇಶ್, ರಾಜೇಗೌಡ, ಅಶೋಕ್,ಯಳವಯ್ಯ, ಹರಿಹರಪುರ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಮೋಹನ್, ಬಸವರಾಜ್, ಲೋಕೇಶ್,ರವಿ, ಉಮೇಶ್, ಮಂಜುನಾಥ್, ಸೇರಿದಂತೆ ಹಲವು ಮುಖಂಡರು, ಯುವಕ ಮಿತ್ರರು ಉಪಸ್ಥಿತರಿದ್ದರು.
——-——–ಶ್ರೀನಿವಾಸ್ ಕೆ.ಆರ್ ಪೇಟೆ