ಕೆ.ಆರ್.ಪೇಟೆ-ಹರಿಹರಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

ಕೆ.ಆರ್.ಪೇಟೆ-ತಾಲ್ಲೂಕಿನ ಹರಿಹರಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ 1994-1997 ನೇ ಅವಧಿಯಲ್ಲಿ 8ರಿಂದ 10ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ತಮಗೆ ಪಾಠ ಕಲಿಸಿ ಉತ್ತಮ ಸ್ಥಾನಕ್ಕೆ ಹೋಗಲು ಮಾರ್ಗದರ್ಶನ ನೀಡಿದ ಶಿಕ್ಷಕರಿಗೆ ಗುರುವಂದನಾ ಕಾರ್ಯಕ್ರಮವು ಸಡಗರ ಮತ್ತು ಸಂಭ್ರಮದಿoದ ನಡೆಯಿತು.

ಮೂರು ದಶಕಗಳ ಹಿಂದೆ ಸ್ನೇಹಿತರಾಗಿ ಒಂದೇ ಶಾಲೆಯಲ್ಲಿ ಕಲಿತು ಈಗ ಬೇರೆ- ಬೇರೆ ಕಡೆ, ಬೇರೆ ಬೇರೆ ಉದ್ಯೋಗದಲ್ಲಿ ಬದುಕು ಕಟ್ಟಿಕೊಂಡಿರುವ ಐವತ್ತಕ್ಕೂ ಅಧಿಕ ವಿದ್ಯಾರ್ಥಿಗಳು ಒಂದೆಡೆ ಸೇರಿ ತಮ್ಮ ಹಳೆಯ ನೆನಪುಗಳನ್ನು ಬಿಚ್ಚಿಟ್ಟಿದ್ದಲ್ಲದೆ, ಪ್ರೌಢಶಾಲಾ ಅವಧಿಯಲ್ಲಿ ತಾವು ಮಾಡತ್ತಿದ್ದ ಹಾಸ್ಯ, ತುಂಟತನ, ಶಿಕ್ಷಕರು ಪಾಠ ಕಲಿಸಲು ತಮಗೆ ನೀಡುತ್ತಿದ್ದ ಶಿಕ್ಷೆಗಳನ್ನು ನೆನಪಿಸಿಕೊಂಡರು.

ಮೂರು ವರ್ಷಗಳ ಅವಧಿಯಲ್ಲಿ 8 ನೇತರಗತಿಯಿಂದ 10ನೇ ತರಗತಿಯವರೆವಿಗೆ ಅಕ್ಷರ ಕಲಿಸಿಕೊಟ್ಟು ಲೋಕದ ಜ್ಞಾನ ಹೇಳಿಕೊಟ್ಟು ಸನ್ಮಾರ್ಗವನ್ನು ಹೇಳಿಕೊಟ್ಟ ತಮ್ಮ ಶಿಕ್ಷಕರನ್ನು ತಳಿರು ತೋರಣಗಳಿಂದ ಸಿಂಗರಿಸಿದ ಎತ್ತಿನ ಬಂಡಿಯಲ್ಲಿ ಹರಿಹರಪುರ ಮುಖ್ಯ ರಸ್ತೆಯಲ್ಲಿ ಜಾನಪದ ಕಲಾತಂಡಗಳ ಕಲರವದೊಂದಿಗೆ ಮೆರವಣಿಗೆ ಮಾಡಿ ಶಾಲೆಗೆ ಕರೆತಂದು ಗುರುವಂದನೆ ಸಲ್ಲಿಸಿದರು.

ಗುರುಗಳ ಪಾದಕ್ಕೆ ದೀರ್ಘದಂಡ ನಮಸ್ಕಾರ ಮಾಡಿ ತಮಗೆ ಅಕ್ಷರದ ಜ್ಞಾನ ನೀಡಿ, ಉತ್ತಮ ಬದುಕಿಗೆ ಒಳ್ಳೆಯ ಮಾರ್ಗ ತೋರಿಸಿಕೊಟ್ಟಿದ್ದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಶಾಲೆಯ ಅವಧಿಯಲ್ಲಿ ಏನಾದರೂ ತಪ್ಪಾಗಿ ನಡೆದುಕೊಂಡಿದ್ದರೆ ದಯಮಾಡಿ ಕ್ಷಮಿಸಿ ಗುರುಗಳೇ ಎಂದು ತಮ್ಮನ್ನು ಇಂತಹ ಬೆಂಚ್ ವಿದ್ಯಾರ್ಥಿ, ಇಂತಹ ಊರಿನ ವಿದ್ಯಾರ್ಥಿ ಎಂದು ತಮ್ಮನ್ನು ಪರಿಚಯ ಮಾಡಿಕೊಂಡು ಕೇಳಿಕೊಂಡು, ಗುರುಗಳಿಗೆ ತಮ್ಮ ಹಳೆಯ ನೆನಪುಗಳನ್ನು ಮಾಡಿಕೊಟ್ಟಿದ್ದು ವಿಶೇಷವಾಗಿತ್ತು.

ಸಾಮೂಹಿಕವಾಗಿ ತಮ್ಮ ಗುರುಗಳಿಗೆ ಫಲತಾಂಬೂಲ ನೀಡಿ ಗೌರವಿಸುವ ಮೂಲಕ ಆಶೀರ್ವಾದ ಪಡೆದುಕೊಂಡರು. ವಿದ್ಯಾರ್ಥಿಗಳು ತಮ್ಮ ಸಹಪಾಠಿ ವಿದ್ಯಾರ್ಥಿನಿಯರಿಗೆ ಭಾಗೀನ ಅರ್ಪಣೆ ಮಾಡಿ ಸಹೋದರ-ಸಹೋದರಿಯ ಭಾಂದವ್ಯದೊoದಿಗೆ ಸಂಭ್ರಮಿಸಿದರು.

1994-1997 ರ ಅವಧಿಯಲ್ಲಿ ಹರಿಹರಪುರ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದ ಜೆ.ಜಿ.ರಾಜೇಗೌಡ, ಎಂ.ಎನ್.ನಾಗೇಶ್, ಬಿ.ಎನ್.ಪರಶಿವಮೂರ್ತಿ, ಸ್ವಾಮೀಗೌಡ, ಸುರೇಶ್ ಹಂಚಿನಾಳ್, ವೆಂಕಟರಾಮ್ ಮತ್ತು ಶ್ರೀನಿವಾಸಮೂರ್ತಿಯವರನ್ನು ಹರಿಹರಪುರ ಮುಖ್ಯ ರಸ್ತೆಯಿಂದ ವೇದಿಕೆವರೆಗೆ ತಳಿರು ತೋರಣಗಳಿಂದ ಸಿಂಗರಿಸಿದ ಎತ್ತಿನಗಾಡಿಯಲ್ಲಿ ಶಾಲೆಯ ಆವರಣದ ವರೆಗೆ ಜಾನಪದ ಕಲಾತಂಡಗಳ ಮೆರವಣಿಗೆಯ ಮೂಲಕ ವೇದಿಕೆಗೆ ಕರೆದುಕೊಂಡು ಬಂದ ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾದ್ಯಾಪಕ ಜಯಕೀರ್ತಿ ನೇತೃತ್ವದಲ್ಲಿ ಗುರುವಂದನೆ ಸಲ್ಲಿಸಿದರು.

ಕಾರ್ಯಕ್ರಮದ ಅಂಗವಾಗಿ ಇಡೀ ಶಾಲೆಯನ್ನು ತಳಿರು-ತೋರಣಗಳಿಂದ ಹಾಗೂ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಶಾಲೆಯು ನವ ವಧುವಿನಂತೆ ಸಿಂಗಾರಗೊಳಿಸಲಾಗಿತ್ತು. ಗುರುವಂದನಾ ಕಾರ್ಯಕ್ರಮವು ಹಬ್ಬದ ಮಾದರಿಯಲ್ಲಿ ಸಡಗರ ಸಂಭ್ರಮದಿಂದ ನಡೆದಿದ್ದು ವಿಶೇಷವಾಗಿತ್ತು.

ಸಮಾರಂಭದಲ್ಲಿ ಹಿರಿಯ ವಿದ್ಯಾರ್ಥಿಗಳಾದ ಜಯಕೀರ್ತಿ, ಪ್ರೇಮ್‌ಕುಮಾರ್, ಅಶ್ವಿನಿ, ಧನಂಜಯ, ಎಚ್.ಎಸ್.ಲೋಕೇಶ್,ಮೋಹನ್ ಕುಮಾರ್ , ಸಂತೋಷ್, ಡಿ.ಕೆ.ರಾಣಿ ಎಂ,ಎಸ್, ರಾಣಿ, ಎಂ.ಜೆ.ವೀರಭದ್ರ, ಸುನೀತ, ಕುಸುಮ, ಸೌಮ್ಯ , ಎನ್.ಜಿ. ಬಾಬು, ಎಂ.ಎಸ್.ಯೋಗೇಶ್, ಶಿವಕುಮಾರ, ಚಂದ್ರಶೇಖರ್, ಹರೀಶ್.ಡಿ.ಎಸ್, ರಾಘವೇಂದ್ರ, ಎಲ್.ಆರ್.ಕುಮಾರಾಚಾರಿ, ಪಾರ್ವತಿ, ಡಿ.ಎಂ.ಸೌಮ್ಯ. ಶೈಲಜಾ, ಕೆ.ಆರ್.ಸುಧಾಮಣಿ, ಎಂ.ಟಿ.ರೇವಣ್ಣ, ಧನಂಜಯ, ಎ.ಎಸ್, ಉಮೇಶ್, ಪ್ರಸಾದ್ ಟಿ. ಮಹೇಶ, ಟಿ.ಎಸ್.ಶ್ರೀನಿವಾಸ್, ಎಚ್.ಜೆ.ಸತೀಶ್, ಲೀಲಾವತಿ, ಕಾಂತಾಮಣಿ, ಎಂ.ಬಿ.ನಿoಗೇಗೌಡ, ರಘು, ಪ್ರಭಾಕರ, ನಟೇಶಬಾಬು, ಸುರೇಶ್, ಗೀತಾ.ಎಚ್.ಕೆ. ಗಿರಿಜ, ಡಿ.ಸಿ.ರೇವಣ್ಣ, ನಿತ್ಯಾನಂದ, ಪ್ರಸನ್ನ , ಮನೋಹರ್, ಬಾಲಸುಬ್ರಹ್ಮಣ್ಯ. ಸೇರಿದಂತೆ 1994-97ನೇ ಅವಧಿಯಲ್ಲಿನ ಕಲಿತ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

———–ಶ್ರೀನಿವಾಸ್ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?