ಕೆ.ಆರ್.ಪೇಟೆ:ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಕಂದಾಯ ಇಲಾಖೆಯ ಭೂ ದಾಖಲೆಗಳ ಕ್ಷೇತ್ರ ಸಿಬ್ಬಂದಿ ವಿಭಾಗದಿಂದ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಿದ್ದ ಗ್ರಾಮ ಆಡಳಿತಾಧಿಕಾರಿ ಹರೀಶ್ 79 ಮತಗಳನ್ನು ಪಡೆದು ಭರ್ಜರಿ ವಿಜಯ ಸಾಧಿಸಿದ್ದಾರೆ.
ಪ್ರತಿಸ್ಪರ್ಧಿಯಾಗಿ ಸ್ಪರ್ಧಿಸಿದ್ದ ಜಗದೀಶ್ ಕೇವಲ 10 ಮತ ಗಳಿಸಿ ನಿರಾಶೆ ಅನುಭವಿಸಿದರು.
ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ನೂತನ ನಿರ್ದೇಶಕ ಹರೀಶ್, ಇದು ನನ್ನ ಗೆಲುವಲ್ಲ. ಕಂದಾಯ ಇಲಾಖೆಯ ಪ್ರತಿಯೊಬ್ಬರ ನೌಕರರ ಗೆಲುವಾಗಿದೆ. ನನ್ನ ಮೇಲೆ ಅಪಾರ ನಂಬಿಕೆ ಇಟ್ಟು ಒಂದು ಜವಾಬ್ದಾರಿ ಸ್ಥಾನಕ್ಕೆ ಅಲಂಕರಿಸಲು ಸಹಕಾರ ನೀಡಿರುವ ಪ್ರತಿಯೊಬ್ಬರಿಗೂ ಋಣಿಯಾಗಿ ನನ್ನ ಅವಧಿಯಲ್ಲಿ ಪ್ರಾಮಾಣಿಕತೆಯಿಂದ ಸರ್ಕಾರಿ ನೌಕರರ ಅಭಿವೃದ್ಧಿಗೆ ಶ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ,ಕೆ.ಆರ್.ಪೇಟೆ ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ದಶರಥ ಪೂಜಾರಿ,ನಿರ್ದೇಶಕರಾದ ಮುರುಕನಹಳ್ಳಿ ಸುಧಾಕರ್, ಮಾದಾಪುರ ವೃತ್ತದ ಸುನಿಲ್ ಗಾಣಿಗೇರ್, ಅಗ್ರಹಾರಬಾಚಹಳ್ಳಿ ಸುನಿಲ್,ಮಧು ಕುಮಾರ್, ಸುನಿಲ್, ರಾಘವೇಂದ್ರ, ಪ್ರಶಾಂತ್, ಈರಣ್ಣ, ಈಲ್ಲಿಗಾರ್, ಕೆಂಚಪ್ಪ, ಸುಮನ್, ಆನಂದ್, ಶಿವಶಂಕರ, ಶಶಿ, ರೋಹಿತ್, ಸ್ಟಿಫಾನ್, ಮುಕ್ತರ್ ಪಾಷ, ಮಲಕಜ್ ಮಡಿವಾಳ್,ಲೋಹಿತ್ ವಾಲ್ಮೀಕಿ,ಸೇರಿದಂತೆ ನೂರಾರು ನೌಕರರು ಉಪಸ್ಥಿತರಿದ್ದರು.
———————ಶ್ರೀನಿವಾಸ್ ಕೆ ಆರ್ ಪೇಟೆ