ಕೆ.ಆರ್.ಪೇಟೆ:ಹೆಮ್ಮನಹಳ್ಳಿ ಗ್ರಾಮದಲ್ಲಿ ಕನ್ನಡ ಪ್ರೇಮಿ ಗಂಗೇಗೌಡರ ನೇತೃತ್ವದಲ್ಲಿ ನಡೆದ ಅದ್ದೂರಿ ಕನ್ನಡ ರಾಜ್ಯೋತ್ಸವ

ಕೆ.ಆರ್.ಪೇಟೆ:ನಾಡಿನಲ್ಲಿ ಕನ್ನಡ ಭಾಷಿಗರ ಸಂಖ್ಯೆ ಇಳಿಮುಖವಾಗುತ್ತಿರುವ ಸಂದರ್ಭದಲ್ಲಿ ಕನ್ನಡ ಪ್ರೇಮವನ್ನು ಕನ್ನಡಿಗರಲ್ಲಿ ಹೆಚ್ಚಿಸುವ ಕೆಲಸವನ್ನು ಕನ್ನಡ ಅಭಿಮಾನಿ ಹೆಮ್ಮನಹಳ್ಳಿ ಗಂಗೆಗೌಡ ಮಾಡುತ್ತಿದ್ದು ಇವರ ಕನ್ನಡ ಸೇವೆ ಅವರ್ಣನೀಯವಾದದ್ದು ಎಂದು ಮನ್ಮುಲ್ ನಿರ್ದೇಶಕ ಡಾಲು ರವಿ ಹೇಳಿದರು.

ಅವರು ತಾಲ್ಲೂಕಿನ ಕಸಬಾ ಹೋಬಳಿಯ ಹೆಮ್ಮನಹಳ್ಳಿ ಗ್ರಾಮದಲ್ಲಿ ಗ್ರಾಮದ ಹಿರಿಯ ಮುಖಂಡ ಹೆಚ್.ಎಸ್ ಗಂಗೇಗೌಡ ನೇತೃತ್ವದಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಹೆಮ್ಮನಹಳ್ಳಿ ಗಂಗೆಗೌಡರು ಗ್ರಾಮದಲ್ಲಿ ತಮ್ಮ ನೇತೃತ್ವದಲ್ಲಿ 24ವರ್ಷಗಳಿಂದ ನಿರಂತರವಾಗಿ ಕನ್ನಡ ರಾಜ್ಯೋತ್ಸವ ಆಯೋಜಿಸಿವ ಮೂಲಕ ಕನ್ನಡ ಮೇಲಿನ ಅಭಿಮಾನವನ್ನು ಇನ್ನು ಗಟ್ಟಿಗೊಳಿಸುವ ಕಾಯಕಕ್ಕೆ ಮುಂದಾಗಿದ್ದಾರೆ .ಪ್ರಸ್ತುತ ಇಂಗ್ಲೀಷ್ ಭಾಷೆ ವ್ಯಾಮೋಹದಲ್ಲಿ ಕನ್ನಡ ತನ್ನ ಸ್ವಂತಿಕೆಯನ್ನು ಕಳೆದುಕೊಳ್ಳುತ್ತಿದೆ. ನಿತ್ಯ ಬಳಸುವ ಅನೇಕ ಪದಗಳು ಕನ್ನಡದಲ್ಲಿ ನುಡಿ ಬೆರಕೆಯಾಗಿವೆ. ಕನ್ನಡ ಉತ್ಸವಗಳು ತೋರಿಕೆಗಷ್ಟೇ ನಡೆಯಬಾರದು, ಸ್ವಾಭಿಮಾನದ ಸಂಕೇತವಾಗಿ ಆಚರಿಸಬೇಕು ಎಂದರು.

ಕನ್ನಡ ಪ್ರೇಮಿ ಹೆಮ್ಮನಹಳ್ಳಿ ಹೆಚ್.ಎಸ್ ಗಂಗೇಗೌಡ ಮಾತನಾಡಿ, ನಮ್ಮ ಗ್ರಾಮದ ಕನ್ನಡ ಪ್ರೇಮಿಗಳು ಹಾಗೂ ಸಮಾಜ ಸೇವಕರ ಸಹಾಯದಿಂದ ಸತತವಾಗಿ 24 ವರ್ಷಗಳಿಂದ ನಮ್ಮ ಮಾತೃಭಾಷೆ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದೇವೆ. ಮುಂಬರುವ ನಾಡ ಹಬ್ಬವನ್ನು ಅದ್ದೂರಿಯಾಗಿ ಮಾಡಲು ಚಿಂತಿಸಿದ್ದೇವೆ.ಆದರೆ ನಾವು ಕನ್ನಡ ಹಬ್ಬದ ಆಚರಣೆಗಷ್ಟೇ ಸಿಮಿತರಾಗಬಾರದು.ಮುಂದಿನ ಯುವ ಪೀಳಿಗೆಗೆ ಮಾದರಿಯಾಗಿ ಕನ್ನಡ ನಾಡು, ನುಡಿ, ಚಿಂತನೆ, ಭಾಷಾ ಶಿಕ್ಷಣದ ಬೆಳವಣಿಗೆಗೆ ಹೆಚ್ಚು ಒಟ್ಟು ನೀಡಬೇಕಾಗಿದೆ ಎಂದರು.

ಬಳಿಕ ಮಾತನಾಡಿದ ಸಮಾಜ ಸೇವಕ ಆರ್. ಟಿ ಓ ಮಲ್ಲಿಕಾರ್ಜುನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಗಂಜೀಗೆರೆ ಮಹೇಶ್, ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ನಮ್ಮ ಭಾಷೆಗೆ ಏಂಟು ಜ್ಞಾನಪೀಠ ಪ್ರಶಸ್ತಿಗಳು ದೊರೆತಿವೆ. ಭಾಷಾವಾರು ಪ್ರಾಂತ್ಯವಾಗಿ ಉದಯಿಸಿ, ಭೌಗೋಳಿಕ ಹಾಗೂ ಸಾಂಸ್ಕೃತಿಕವಾಗಿ ವಿಶಿಷ್ಠತೆ ಹೊಂದಿದೆ. ಸಂಸ್ಕೃತಿ ಮತ್ತು ಕಲೆಗಳಿಂದ ನಾಡು ಶ್ರೀಮಂತಗೊಂಡಿರುವ ಕನ್ನಡ ಭಾಷೆಯ ಉಳಿವಿಗೆ ಇಳಿ ವಯಸ್ಸಿನಲ್ಲೂ ಗಂಗೆಗೌಡರು ಕನ್ನಡದ ಮೇಲೆ ಇಟ್ಟಿರುವ ಅಪಾರ ಪ್ರೇಮಕ್ಕೆ ನಮಗೆಲ್ಲರಿಗೂ ಸ್ಪೂರ್ತಿಯಾಗಿ ಯುವಕರಿಗೂ ಮಾದರಿಯಾಗಿದ್ದಾರೆ ತಿಳಿಸಿದರು.

ಕನ್ನಡದ ಇತಿಹಾಸದ ಬಗ್ಗೆ ಶಾಲಾ ಮಕ್ಕಳು ಏಕ ಪಾತ್ರಾಭಿನಯ ಹಾಗೂ ಕನ್ನಡ ಪರಂಪರೆಯ ಇತಿಹಾಸವುಳ್ಳ ಭಾವಗೀತೆ,ಭಕ್ತಿಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತುಂಬಿದರು.

ತೆಂಡೇಕೆರೆ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಎಂ.ಎಸ್.ಮಹದೇವಪ್ಪ ಕಾರ್ಯಕ್ರಮ ಕುರಿತು ಪ್ರಧಾನ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಅಶೋಕ್, ಸಹ ಶಿಕ್ಷಕರಾದ ಪ್ರಭುಸ್ವಾಮಿ, ಎಂ.ಎಸ್.ಮಹದೇವಪ್ಪ, ತಾ.ಪಂ ಮಾಜಿ ಅಧ್ಯಕ್ಷ ಜಯರಂಗ ,ಗ್ರಾ.ಪಂ ಮಾಜಿ ಸದಸ್ಯ ಹೆಚ್.ಜಿ ಕೃಷ್ಣೇಗೌಡ,ಮುಖಂಡ ಹೆಚ್.ಜೆ ರವಿ,ಗ್ರಾ.ಪಂ ಉಪಾಧ್ಯಕ್ಷೆ ಪುಷ್ಪಾ ತಮ್ಮಣ್ಣ,ಕರ್ನಾಟಕ ರಕ್ಷಣ ವೇದಿಕೆ ಸ್ವಾಭಿಮಾನಿ ಸೇನೆ ಅಧ್ಯಕ್ಷ ಸಮೀರ್,ಆಟೋ ಘಟಕದ ಅಧ್ಯಕ್ಷ ವಾಸು, ಪ್ರಧಾನ ಕಾರ್ಯದರ್ಶಿ ಸಂತೆಬಾಚಹಳ್ಳಿ ಮಂಜುನಾಥ್, ಕಾರ್ಮಿಕ ಘಟಕದ ಅಧ್ಯಕ್ಷ ದಯಾನಂದ ರಾವ್, ಆಟೋ ಜಾವಿದ್, ಆಟೋ ಅಜ್ಜು,ಸೇರಿದಂತೆ ಹೆಮ್ಮನಹಳ್ಳಿ ಗ್ರಾಮಸ್ಥರಿದ್ದರು.

———ವರದಿ-ಶ್ರೀನಿವಾಸ್ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?