ಕೆ.ಆರ್.ಪೇಟೆ-ಹಿಂದೂ-ಮುಸ್ಲಿo ಭಾವೈಕ್ಯತೆ ಹಾಗೂ ಕೋಮು ಸೌಹಾರ್ಧತೆಗೆ ಕೃಷ್ಣರಾಜಪೇಟೆ ತಾಲೂಕು ಮಾದರಿಯಾಗಿದೆ.ಮುಸ್ಲಿಂ ಭಾಂಧವರು ಆಚರಿಸುತ್ತಿರುವ ಊರ ಹಬ್ಬಕ್ಕೆ ಪಟ್ಟಣದ ಪುರ ಪ್ರಮುಖರು ಆಗಮಿಸಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಶುಭ ಹಾರೈಸಿ ತೆರಳಿದ್ದಾರೆ.ಹಾಲಿಗೆ ಸಕ್ಕರೆ ಬೆರೆತರೆ ಹಾಲಿನ ರುಚಿಯು ಹೆಚ್ಚಾಗುವಂತೆ ಮುಸ್ಲಿಂ ಭಾಂಧವರು ಹಿಂದೂಗಳು ಆಚರಿಸುವ ಗಣೇಶೋತ್ಸವ, ದೀಪಾವಳಿ, ಮೊಹರಂ ಕೊನೆಯ ದಿನ ಆಚರಿಸುವ ಬಾಬಯ್ಯನ ಹಬ್ಬ ಹಾಗೂ ಯುಗಾದಿ ಹಬ್ಬದಲ್ಲಿ ಪಾಲ್ಗೊಂಡು ಹಬ್ಬದ ಕಳೆಯನ್ನು ಹೆಚ್ಚಿಸುತ್ತಿದ್ದಾರೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಕೆ.ಗೌಸ್‌ಖಾನ್ ಹೇಳಿದರು.
ಅವರು ಪಟ್ಟಣದ ಹೊಸ ಮಸೀದಿ ಆವರಣದಲ್ಲಿ ಊರಹಬ್ಬದ ಅಂಗವಾಗಿ ಆಯೋಜಿಸಿದ್ದ ಧಾರ್ಮಿಕ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತದ ಮಾದರಿಯಲ್ಲಿ ಜಶ್ನೇಗೌಸುಲ್ವಾರ ಮತ್ತು ಜುಲೋಸೆ ಗೌಸಿಯಾ ಊರ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ.ಕೃಷ್ಣರಾಜಪೇಟೆ ಪಟ್ಟಣದ ಎಲ್ಲಾ ಜಾತಿ ವರ್ಗಗಳ ಜನರು ಅಲ್ಪಸಂಖ್ಯಾತನಾದ ನನ್ನನ್ನು ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿ ಭಾವೈಕ್ಯತೆಯ ಸಂದೇಶವನ್ನು ನಾಡಿಗೆ ನೀಡಿದ್ದರು. ಕೃಷ್ಣರಾಜಪೇಟೆ ತಾಲೂಕಿನ ಜನರ ಆಶೀರ್ವಾಧದ ಬಲದಿಂದಾಗಿ ನನ್ನ ಹಿರಿಯ ಸಹೋದರ ಕೆ.ರೆಹಮಾನ್‌ಖಾನ್ ಭಾರತ ಸರ್ಕಾರದ ರಾಜ್ಯಸಭೆಯ ಉಪಸಭಾಪತಿಯಾಗಿ, ಕೇಂದ್ರ ಸಚಿವರಾಗಿ ಕೆಲಸ ಮಾಡಿ ತಾಲೂಕಿನ ಕೀರ್ತಿಯನ್ನು ಬೆಳಗಿದ್ದಾರೆ ಎಂದರು.
ಹಿಂದೂ, ಮುಸ್ಲಿಂ, ಕ್ರೈಸ್ತ , ಸಿಖ್ ಸೇರಿದಂತೆ ಯಾವುದೇ ಧರ್ಮವು ಹಿಂಸೆಯನ್ನು ಪ್ರೋತ್ಸಾಹಿಸುವುದಿಲ್ಲ.ಎಲ್ಲಾ ಧರ್ಮಗಳು ಶಾಂತಿಯ ಸಂದೇಶದೊoದಿಗೆ ಭಾವೈಕ್ಯತೆಯ ಸಂದೇಶವನ್ನು ಕೊಡುಗೆಯಾಗಿ ನೀಡಿ ಶಾoತಿಯ ಸಂದೇಶ ನೀಡುತ್ತಿವೆ.ಮಾನವ ಧರ್ಮಕ್ಕಿಂತ ಮಿಗಿಲಾದ ಧರ್ಮವು ವಿಶ್ವದಲ್ಲಿಯೇ ಯಾವುದೂ ಇಲ್ಲ. ಖುರಾನ್ ಮಹಾ ಗ್ರಂಥದಲ್ಲಿ ತಿಳಿಸಿರುವಂತೆ, ಪ್ರವಾಧಿ ಮಹಮದ್ ಪೈಗಂಬರ್ ಅವರ ಆಶಯದಂತೆ ಕಷ್ಟದಲ್ಲಿರುವ ಜನರಿಗೆ ಕೈಲಾದ ಸಹಾಯ ಮಾಡಿ ನೊಂದವರ ಕಣ್ಣೀರನ್ನು ಒರೆಸಿ, ಆತ್ಮವಿಶ್ವಾಸ ತುಂಬುವುದೇ ನಿಜವಾದ ಧರ್ಮವಾಗಿದೆ. ಈ ದಿಕ್ಕಿನಲ್ಲಿ ಮುಸ್ಲಿಂ ಭಾಂಧವರು ಹೆಜ್ಜೆ ಹಾಕಿ ಮುನ್ನಡೆಯುತ್ತಿದ್ದಾರೆ ಎಂದು ಗೌಸ್‌ಖಾನ್ ಹೇಳಿದರು.
ಊರಹಬ್ಬದ ಅಂಗವಾಗಿ ಧರ್ಮಗುರುಗಳ ನೇತೃತ್ವದಲ್ಲಿ ಮುಸ್ಲಿಂ ಯುವಕರು ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಧಾರ್ಮಿಕ ಮೆರವಣಿಗೆ ನಡೆಸಿ ಹಿಂದೂ ಭಾಂದವರೊoದಿಗೆ ಶುಭಾಷಯಗಳನ್ನು ವಿನಿಮಯ ಮಾಡಿಕೊಂಡರು.
ಧರ್ಮಗುರುಗಳಾದ ಮೊಹಮ್ಮದ್ ಅಬೂಜಾಫರ್, ಜಾಮಿಯಾ ಮಸೀದಿ ಸಮಿತಿಯ ಕಾರ್ಯದರ್ಶಿ ಬಷೀರ್‌ಅಹಮದ್, ಸದಸ್ಯರಾದ ಹಾಫೀಜ್ ಅಹಮದ್, ಸೈಯ್ಯದ್ ಖಾದರ್, ಸೈಯ್ಯದ್ ಅಬೀದ್, ಹಾಫೀಜುಲ್ಲಾ ಷರೀಫ್, ಅಬ್ದುಲ್‌ಖಲೀಲ್, ಜಮೀರ್‌ಖಾನ್, ಸಾಬಿತ್‌ಖಾನ್, ರಿಯಾಜ್ ಅಹಮದ್, ಮುಜಾಹೀದ್ ಪಾಷ, ಜಮೀಲ್ ಅಹಮದ್, ಸೈಯ್ಯದ್ ಅಕ್ಬರ್, ಶಬ್ಬೀರ್ ಅಹಮದ್, ನವೀದ್ ಅಹಮದ್, ಫಯಾಜ್ ಅಹಮದ್, ಎಕ್ಬಾಲ್ ಅಹಮದ್, ಅಜ್ಮತ್ ಉಲ್ಲಾ ಷರೀಫ್, ಸಫೀರ್ ಅಹಮದ್, ಸೈಯ್ಯದ್ ಅಕ್ಬರ್, ಸೈಯ್ಯದ್ ಖಲೀಲ್, ನಯಾಜ್ ಪಾಶ, ಮಹಮದ್ ಯೂಸೂಫ್, ಸೇರಿದಂತೆ ನೂರಾರು ಜನರು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
——————--ಶ್ರೀನಿವಾಸ್ ಕೆ ಆರ್ ಪೇಟೆ