ಕೆ.ಆರ್.ಪೇಟೆ-ವಿಜ್ಞಾನ-ತಂತ್ರಜ್ಞಾನ-ಕ್ಷೇತ್ರದಲ್ಲಿ-ಸಾಧನೆ-ಮಾಡಿದರೆ- ದೇಶ-ಅಭಿವೃದ್ಧಿಯಾಗಲಿದೆ-ಆರ್.ಟಿ.ಓ.-ಮಲ್ಲಿಕಾರ್ಜುನ್


ಕೆ.ಆರ್.ಪೇಟೆ– ವಿಜ್ಞಾನ ನಮ್ಮ ವ್ಯಕ್ತಿತ್ವ ಹಾಗೂ ವಿಕಾಸದ ಪ್ರತೀಕವಾಗಿದೆ. ವಿದ್ಯಾರ್ಥಿಗಳು ಹಾಗೂ ಯುವ ಜನರು ವಿಜ್ಞಾನದ ಆವಿಷ್ಕಾರಗಳ ಫಲವನ್ನು ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಬಳಕೆ ಮಾಡಿಕೊಂಡು ಮುಂದೆ ಸಾಗಿ ಸಾಧನೆ ಮಾಡಬೇಕು ಎಂದು ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷರು ಹಾಗೂ ಸಮಾಜ ಸೇವಕರಾದ ಆರ್.ಟಿ.ಓ ಮಲ್ಲಿಕಾರ್ಜುನ್ ಹೇಳಿದರು.


ಅವರು ಕೆ.ಆರ್.ಪೇಟೆ ಪಟ್ಟಣದ ಬಿಜಿಎಸ್ ಶಾಲೆಯಲ್ಲಿ ವಿಜ್ಞಾನ ದಿನದ ಅಂಗವಾಗಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟನೆ ಮಾಡಿ ಮಾತನಾಡಿದರು.


ದೇಶದ ಖ್ಯಾತ ವಿಜ್ಞಾನಿಗಳಾದ ಸರ್ ಸಿ.ವಿ.ರಾಮನ್ ಅವರ ಹುಟ್ಟುಹಬ್ಬದ ದಿನವನ್ನು ಭಾರತ ದೇಶದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಯುವಜನರು ಹಾಗೂ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸಲು ವಿಜ್ಞಾನದ ವಿವಿಧ ಮಾದರಿಗಳನ್ನು ತಯಾರಿಸಿ ವಸ್ತು ಪ್ರದರ್ಶನದಲ್ಲಿರಿಸಿ ಅವುಗಳಿಂದ ಆಗುವ ಲಾಭ ಮತ್ತು ಸಂಶೋಧನೆಯಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿ ವೈಜ್ಞಾನಿಕ ಮನೋಭಾವನೆ ಬೆಳೆಸಲು ಇಂತಹ ಕಾರ್ಯಕ್ರಮಗಳು ವರದಾನವಾಗಿವೆ. ಹೊಸ ಹೊಸದಾಗಿ ವಿನೂತನ ಕಾರ್ಯಕ್ರಮ ಆಯೋಜನೆಗೆ ಬಿಜಿಎಸ್ ಶಾಲೆಯು ರಚನಾತ್ಮಕವಾಗಿ ಕೆಲಸ ಮಾಡುತ್ತಿದೆ ಎಂದು ಮಲ್ಲಿಕಾರ್ಜುನ್ ಹೇಳಿದರು.


ಯುಗಯೋಗಿ, ಜಗದ್ಗುರು ಡಾ. ಶ್ರೀಶ್ರೀ ಬಾಲಗಂಗಾಧರಾನಾಥ ಸ್ವಾಮೀಜಿಗಳ ಪುತ್ಥಳಿಗೆ ವಿಶೇಷ ಪೂಜೆ ಸಲ್ಲಿಸಿದರು.
ಆದಿಚುಂಚನಗಿರಿ ಮಹಾ ಸಂಸ್ಥಾನದ ಹೇಮಗಿರಿ ಶಾಖಾ ಮಠದ ಗೌರವ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೊಡಗಹಳ್ಳಿ ವಿ.ಮಂಜೇಗೌಡ, ಕಸಾಪ ಮಾಜಿ ಅಧ್ಯಕ್ಷರಾದ ಎಂ.ಕೆ.ಹರಿಚರಣತಿಲಕ್, ಕೆ.ಆರ್.ನೀಲಕಂಠ, ಕಸಾಪ ತಾಲ್ಲೂಕು ಉಪಾಧ್ಯಕ್ಷ ಶ್ರೀನಿವಾಸ್ ಸಜ್ಜನ್, ವಿಶ್ರಾಂತ ಎಂಜಿನಿಯರ್ ಜವರೇಗೌಡ, ಪ್ರಾಂಶುಪಾಲ ಪ್ರಸಾದೇಗೌಡ, ಆನಂದ್, ಪ್ರಥಮ ದರ್ಜೆ ಸಹಾಯಕ ರಾಮಚಂದ್ರ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

  • ಶ್ರೀನಿವಾಸ, ಕೆ.ಆರ್.ಪೇಟೆ

Leave a Reply

Your email address will not be published. Required fields are marked *

× How can I help you?