ಕೆ.ಆರ್.ಪೇಟೆ : ಇದೇ ಫೆ.08ರಂದು ನಡೆಯುವ ಕೆ.ಆರ್.ಪೇಟೆ ಪಿ.ಎಲ್.ಡಿ ಬ್ಯಾಂಕ್ ಚುನಾವಣೆಯಲ್ಲಿ 14ನೇ ವೃತ್ತದ ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಮಹಮದ್ ಸಲಾವುದ್ದೀನ್ ಮನವಿ ಮಾಡಿದರು.
ಅವರು ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾವು ಸ್ಪರ್ಧಿಸಿರುವ 14ನೇ ವೃತ್ತದ ಸಾಲಗಾರರಲ್ಲದ ಕ್ಷೇತ್ರದ ತಮ್ಮ ಪ್ರಚಾರದ ಕರಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ನಮ್ಮ ತಂದೆ 2005ರಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಇದೇ ಹಾದಿಯಲ್ಲಿ ತಾವು ಸಹ ತಾಲ್ಲೂಕಿನ ಜನರ ಸೇವೆ ಮಾಡಬೇಕೆಂಬ ಹಂಬಲದಿಂದ ಸ್ಪರ್ಧೆ ಮಾಡಿದ್ದೇನೆ. ಈಗಾಗಲೇ ತಾಲ್ಲೂಕಿನ ಎಲ್ಲಾ ಮತದಾರರನ್ನು ಭೇಟಿ ಮಾಡಿ ಮತಯಾಚನೆ ಮಾಡಿದ್ದೇನೆ ಎಲ್ಲರಿಂದಲೂ ಉತ್ತಮ ಸ್ಪಂಧನೆ ವ್ಯಕ್ತವಾಗಿದೆ ಹಾಗಾಗಿ ಫೆ.8ರಂದು ನಡೆಯುವ ಚುನಾವಣೆಯಲ್ಲಿ ನನ್ನ ಕ್ರಮ ಸಂಖ್ಯೆ-6ರ ಟಿಲ್ಲರ್ ಗುರುತಿಗೆ ತಮ್ಮ ಅಮೂಲ್ಯವಾದ ಮತ ನೀಡಿ ನನ್ನನ್ನು ಗೆಲ್ಲಿಸಿಕೊಡುವ ಮೂಲಕ ತಮ್ಮಗಳ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡುವಂತೆ ಸಲಾವುದ್ದೀನ್ ಮತದಾರರಲ್ಲಿ ಮನವಿ ಮಾಡಿದರು.

ವಕೀಲರಾದ ನಯಾಜ್ ಪಾಷ ಅವರು ಮಾತನಾಡಿ ಕೆ.ಆರ್.ಪೇಟೆ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮಹಮ್ಮದ್ ಸಲಾವುದ್ದೀನ್ ರವರು ಸ್ಪರ್ಧಿಸಿದ್ದಾರೆ ಅವರು ಬೇರೆ ಅಭ್ಯರ್ಥಿಗಳಿಗಿಂತ ಅರ್ಹ ವ್ಯಕ್ತಿ ಆಗಿದ್ದಾರೆ ತಪ್ಪಾಗಲಾರದು. ಇವರು ಕೊರೋನಾ ಸಂದರ್ಭದಲ್ಲಿ ಜಾತಿ ಭೇದ ಮಾಡದೇ ಎಲ್ಲಾ ಸಂಘಟನೆಗಳ ಸಹಕಾರದಿಂದ ತಾಲೂಕಿನಾಧ್ಯಂತ ಶವ-ಸಂಸ್ಕಾರ ಮಾಡಲು ಪೂರ್ಣ ಸಹಕಾರ ನೀಡಿದ್ದಾರೆ.
ಕೋವಿಡ್‌ಗೆ ತುತ್ತಾದವರಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಶ್ರಮಿಸಿದ್ದಾರೆ. ಹೀಗೆ ಯಾವುದೇ ಜಾತಿ-ಬೇದವಿಲ್ಲದೇ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಸಮಾಜಸೇವೆ ಮಾಡುವ ಮಾತೃ ಹೃದಯವನ್ನು ಹೊಂದಿರುವ ಮಹಮ್ಮದ್ ಸಲಾವುದ್ದೀನ್ ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರ 14ನೇ ವೃತ್ತದಿಂದ ಸ್ವರ್ಧಿಸಿದ್ದು ಕ್ರಮ ಸಂಖ್ಯೆ 6 ಟಿಲ್ಲರ್ ಗುರುತಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡುವ ಮೂಲಕ ಜಯಶೀಲಾರನ್ನಾಗಿ ಮಾಡಿ ರೈತರ ಮತ್ತು ಜನಸಾಮಾನ್ಯರ ಸೇವೆ ಮಾಡಲು ಅವಕಾಶ ಕಲ್ಪಿಸಿ ಕೊಡಬೇಕೆಂದು ಮನವಿ ಮಾಡಿದರು.

ದಲಿತ ಮುಖಂಡ ಜಿ.ಡಿ.ಎಸ್.ಗಂಗಾಧರ್ ಮಾತನಾಡಿ ಸಹಕಾರಿ ಚುನಾವಣೆಯ ಮಹತ್ವ ಜನ ಸಾಮಾನ್ಯರಿಗೆ ಅರಿವಿಲ್ಲ, ತಳ ಸಮುದಾಯ ಹಾಗೂ ಅಲ್ಪ ಸಂಖ್ಯಾತರು ಹೆಚ್ಚಿನದಾಗಿ ರಾಜಕೀಯ ಮಾಡಿಲ್ಲ ಇದನ್ನೇ ಬಂಡವಾಳ ಮಾಡಿಕೊಂಡ ಉಳ್ಳವರು ಹಾಗೂ ಬಲಿಷ್ಠ ಸಮುದಾಯದವರು ಅಧಿಕಾರದಲ್ಲಿ ಇದ್ದಾರೆ ಅವರಿಂದ ಜನ ಸಾಮಾನ್ಯರ ಅಭಿವೃದ್ಧಿ ಕುಂಠಿತವಾಗಿದೆ ಆದ್ದರಿಂದ ಜನ ಸಮುದಾಯದಕ್ಕೆ ತುಂಬಾ ಹತ್ತಿರ ವಾಗಿರುವ ಜನ ಹಿತ ಬಯಸುವ ವ್ಯಕ್ತಿಗೆ ದಯವಿಟ್ಟು ಮತ ಕೊಟ್ಟು ಗೆಲ್ಲಿಸಿ ಸೇವೆ ಮಾಡುವುದಕ್ಕೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನಾಸೀರ್ ಪಾಷಾ, ವಕೀಲ ನಾಸಿರ್‌ಪಾಷ, ಅಭ್ಯರ್ಥಿ ಮಹಮ್ಮದ್ ಸಲಾವುದ್ದೀನ್, ಜಿ.ಡಿ.ಎಸ್.ಗಂಗಾಧರ್, ನಯಾಜ್, ಪ್ರದೀಪ್, ಅವಿನಾಶ್, ಸೈಯದ್ ರೋಷನ್, ವಿನು, ಸಲ್ಮಾನ್,ವಾಸೀರ್, ಬಷೀರ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
-ಶ್ರೀನಿವಾಸ್