ಕೆ.ಆರ್.ಪೇಟೆ: ಪಟ್ಟಣದ ಶಿಕ್ಷಕರ ಭವನದಲ್ಲಿ ಮಂಡ್ಯ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತ್, ತಾಲ್ಲೂಕು ತಾಲ್ಲೂಕು ಪಂಚಾಯಿತಿ ಕೆ.ಆರ್.ಪೇಟೆ, ಆಡಳಿತ ಇವರ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳೆಯರಿಗೆ ವಿವಿಧವಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ವಿವಿಧ ಕ್ರೀಡೆಗಳು, ರಂಗೋಲಿ ಸ್ಪರ್ದೆ, ವೆಜಿಟೇಬಲ್ ಕಾರ್ವಿಂಗ್,ಚಿತ್ರ ಬರೆಯುವ ಸ್ಪರ್ಧೆ, ರಾಗಿ ಬೀಸುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಕ್ರೀಡೆಯಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಯ ಮಹಿಳಾ ಚುನಾಯಿತ ಪ್ರತಿನಿಧಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಮ ಕಾಯಕಮಿತ್ರ, ಸ್ವ-ಸಹಾಯ ಸಂಘದ ಮಹಿಳೆಯರು, ಎನ್.ಆರ್.ಎಲ್.ಎಂ. ಯೋಜನೆಯ ಒಕ್ಕೂಟದ ಪದಾಧಿಕಾರಿಗಳು, ಮುಖ್ಯ ಪುಸ್ತಕ ಬರಹಗಾರರು, ಎಲ್.ಸಿ.ಆರ್.ಪಿಗಳು,ಕೃಷಿಸಖಿ,ಪಶುಸಖಿ,ಬಿಸಿಸಖಿಗಳು, ಸ್ಪರ್ದೆಯಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಅರುಣ್ ಕುಮಾರ್, ಸಹಾಯಕ ಶಿಶು ಅಭಿವೃದ್ದಿ ಅಧಿಕಾರಿ ಅಕ್ಕಮಹಾದೇವಿ, ಮೇಲ್ವಿಚಾರಕ ಪದ್ಮ,ಶಾಂತವ್ವ,ರೂಪ, ಪಾರ್ವತಿ,ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕ ಎನ್.ಪಿ.ಲೋಕೇಶ್,ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ಡಾ.ಆರ್.ಜಯರಾಮು, ಎಸ್. ಜೆ.ಮಂಜುನಾಥ, ವಿ.ಡಿ.ದೇವರಾಜು, ಸಹಾಯಕ ನಿರ್ದೇಶಕರು ಕೃಷಿ ಇಲಾಖೆ, ಸಂತೋಷ್ ಕುಮಾರ್.ಹೆ.ಜೆ, ಹಾಗೂ ಸಿಬ್ಬಂದಿಗಳು, ಸ್ಪರ್ದೆಯ ತೀರ್ಪುಗಾರರು ಲತಾ.ಆರ್.ಪಿ ಶಿಕ್ಷಕಿ ಕೆ.ಪಿ.ಎಸ್. ಶಾಲೆ, ಹಾಗೂ ಜ್ಞಾನದೇಗುಲ ಪ್ರೌಢಶಾಲೆ, ಹರಿಯಾಲದಮ್ಮ ದೇವಸ್ಥಾನ ಶಿಕ್ಷಕರು ಪುಟ್ಟೇಗೌಡ, ಅಜೀಂ ಪ್ರೇಮ್ ಜಿ ಪೌಡೇಷನ್ ವತಿಯಿಂದ ಶಿವಕುಮಾರ್ ಉಪಸ್ಥಿತರಿದ್ದರು.
-ಶ್ರೀನಿವಾಸ್ ಆರ್.