ಕೆ.ಆರ್.ಪೇಟೆ-ಗ್ರಾಮೀಣ-ಪ್ರದೇಶಗಳಲ್ಲಿ-ಹೆಚ್ಚೆಚ್ಚು-ಪೌರಾಣಿಕ- ನಾಟಕಗಳನ್ನು-ಪ್ರದರ್ಶನ-ಮಾಡುತ್ತಿರುವುದೇ-ಸಾಕ್ಷಿ-ನಟ-ಶಿವರಾಜ್ ಕೆ.ಆರ್.ಪೇಟೆ

ಕೆ.ಆರ್.ಪೇಟೆ- ಪೌರಾಣಿಕ ನಾಟಕಗಳು ಇನ್ನೂ ಜೀವಂತವಾಗಿವೆ ಎಂಬುದಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚೆಚ್ಚು ಪೌರಾಣಿಕ ನಾಟಕಗಳನ್ನು ಪ್ರದರ್ಶನ ಮಾಡುತ್ತಿರುವುದೇ ಸಾಕ್ಷಿಯಾಗಿದೆ. ಅದರಲ್ಲೂ ಶಿಕ್ಷಿತ ಸಮುದಾಯದ ವರ್ಗದವರು ಅಭಿನಯ ಮಾಡುತ್ತಿದ್ದು ಅದಕ್ಕೆ ಕಲಾಭಿಮಾನಿಗಳು ಕಲಾವಿದರನ್ನು ಪ್ರೋತ್ಸಾಹ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದು ನಮ್ಮ ತಾಲ್ಲೂಕಿನ ಉತ್ತಮ ಪ್ರತಿಭೆ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಸ್ಯನಟ ಹಾಗೂ ಚಲನಚತ್ರ ನಟ ಶಿವರಾಜ್ ಕೆ.ಆರ್.ಪೇಟೆ ಅವರು ಅಭಿಪ್ರಾಯಪಟ್ಟರು.


ಅವರು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ತಾಲ್ಲೂಕಿನ ರಾಜಘಟ್ಟ ಗ್ರಾಮದ ಸಂಗೀತ ವಿದ್ವಾನ್ ಹಾಗೂ ಹಾರ್ಮೋನಿಯಂ ಡ್ರಾಮಾ ಮಾಸ್ಟರ್ ದಿವಂಗತ ರಾಮೇಗೌಡ ಸ್ಮರಣಾರ್ಥ ಶ್ರೀ ಆಂಜನೇಯ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ಆಯೋಜಿಸಿದ್ದ ತ್ರಿಮೋಕ್ಷ ಜನ್ಮ ಮೋಕ್ಷ ಅಥವಾ ಜಯ-ವಿಜಯರ ಶಾಪ ವಿಮೋಚನೆ ಎಂಬ ಪೌರಾಣಿಕ ನಾಟಕದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಪೌರಾಣಿಕ ನಾಟಕಗಳಲ್ಲೂ ಅಭಿನಯಿಸುವ ಕಲಾವಿದರು ಏನನ್ನು ಅಪೇಕ್ಷೆ ಮಾಡದೇ ಉಚಿತವಾಗಿ ಕಲಾವಿದರನ್ನು ರಂಜಿಸುತ್ತಾರೆ. ಅಂತಹ ಕಲಾವಿದರನ್ನು ಗುರುತಿಸಿ ಅವರಿಗೆ ಗೌರವ ಕೊಡುವ ಕೆಲಸವನ್ನು ನಾವೆಲ್ಲರೂ ಬದ್ದರಾಗಿರಬೇಕು. ಮೂರ್ನಾಲ್ಕು ತಿಂಗಳು ಕಾಲ ಅಭ್ಯಾಸ ಮಾಡಿರುತ್ತಾರೆ.. ಆದ್ದರಿಂದ ರಾತ್ರಿಯೆಲ್ಲಾ ಅವರ ಪಾತ್ರಗಳನ್ನು ನೋಡುವ ಮೂಲಕ ಕಲಾಭಿಮಾನಿಗಳು ಪ್ರೋತ್ಸಾಹ ಮಾಡಬೇಕು ಎಂದು ಮನವಿ ಮಾಡಿದರು.


ಸಮಾಜ ಸೇವಕ ಆರ್‌ಟಿಓ ಮಲ್ಲಿಕಾರ್ಜುನ್ ಮಾತನಾಡಿ ತಾಲ್ಲೂಕಿನ ಪ್ರಸಿದ್ಧ ಡ್ರಾಮಾ ಮಾಸ್ಟರ್ ದಿವಂಗತ ರಾಮೇಗೌಡ ಅವರ ಸ್ಮರಣಾರ್ಥ ನಾಟಕ ಅಭಿನಯಿಸುತ್ತಿರುವುದು ಸಂತಸದ ಸಂಗತಿಯೆAದರೆ ತಪ್ಪಾಗಲಾರದು.ಬದುಕಿದ್ದಾಗ ನೆನಪು ಮಾಡಿಕೊಳ್ಳುವುದಕ್ಕಿಂತ ಅವರು ಕಾಲವಾದ ನಂತರ ನೆನಪು ಮಾಡಿಕೊಳ್ಳುವುದು ಹೆಮ್ಮೆಯ ವಿಷಯವಾಗಿದೆ. ದಿವಂಗತ ರಾಮೇಗೌಡ ಅವರು ನಮ್ಮೆಲ್ಲರನ್ನು ಬಿಟ್ಟು ಹೋದರೂ ಕರ್ನಾಟಕದ ಮನೆಮಾತಾಗಿರುವ ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ ಅವರಿಗೆ ಜನ್ಮ ಕೊಟ್ಟಿರುವುದರಿಂದ ನಮ್ಮ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ ಎಂಬುದು ಖುಷಿಯ ವಿಚಾರವಾಗಿದೆ.ಕೆ ಆರ್ ಪೇಟೆ ಶಿವರಾಜ್ ಅವರಿಗೆ ಮುಂದಿನ ದಿನಗಳಲ್ಲಿ ಉತ್ತಮ ಅವಕಾಶ ಸಿಕ್ಕುವ ಮೂಲಕ ದೊಡ್ಡ ಬೆಳ್ಳಿ ಪರದೆಯ ಮೇಲೆ ವಿಜೃಂಭಿಸಿ ನಮ್ಮ ತಾಲ್ಲೂಕಿಗೆ ಉತ್ತಮ ಹೆಸರು ತರುವಂತೆ ಆಶಯ ವ್ಯಕ್ತಪಡಿಸಿದರು.


ಮನ್‌ಮುಲ್ ನಿರ್ದೇಶಕರು ಹಾಗೂ ಸಮಾಜ ಸೇವಕರಾದ ಡಾಲು ರವಿ ಕಲಾವಿದರಿಗೆ ಹಿತವಚನ ಹೇಳುತ್ತಾ ನಮ್ಮ ತಾಲ್ಲೂಕಿನಲ್ಲಿ ಪೌರಾಣಿಕ ನಾಟಕಗಳನ್ನು ಅಭಿನಯಿಸುವವರ ಸಂಖ್ಯೆ ಜಾಸ್ತಿಯಾಗಿದೆ. ಆದರೆ ಚನ್ನಾಗಿ ಅಭ್ಯಾಸ ನಾಟಕ ಪ್ರದರ್ಶನ ಮಾಡಬೇಕು. ವರ್ಷಕ್ಕೆ ಹೆಚ್ಚು ನಾಟಕ ಮಾಡುವುದಕ್ಕಿಂತ ಚನ್ನಾಗಿ ಅಭ್ಯಾಸ ಮಾಡಿ ಕಡಿಮೆ ನಾಟಕ ಪ್ರದರ್ಶನ ಮಾಡಿ ಚನ್ನಾಗಿ ಪ್ರದರ್ಶನ ಮಾಡಿದರೆ ಪೌರಾಣಿಕ ನಾಟಕದತ್ತ ಹೆಚ್ಚು ಕಲಾ ಪ್ರೇಕ್ಷಕರನ್ನು ಸೆಳೆಯಬಹುದು ಎಂದರು.


ಈ ಸಂದರ್ಭದಲ್ಲಿ ಇದೇ ಸಂದರ್ಭದಲ್ಲಿ ಕಲಾ ಪೋಷಕರಾದ ಜೈ ಭುವನೇಶ್ವರಿ ಕಲಾ ಸಂಘದ ಅಧ್ಯಕ್ಷ ಕೆ.ಎನ್.ತಮ್ಮಯ್ಯ, ಉಪಾಧ್ಯಕ್ಷ ಚಟ್ಟೇನಹಳ್ಳಿ ನಾಗರಾಜು, ಕಲಾ ಪೋಚಕರಾದ ಶಿವಲಿಂಗೇಗೌಡ, ಟೆಂಪೋ ಗಣೇಶ್, ನಿವೃತ್ತ ಶಿಕ್ಷಕ ಮೋದೂರು ನಾಗರಾಜು ಅವರನ್ನು ಶಿವರಾಜ್ ಕೆ.ಆರ್.ಪೇಟೆ ಅವರು ಸನ್ಮಾನಿಸಿ ಗೌರವಿಸಿದರು.


ಉದ್ಘಾಟನಾ ಕಾರ್ಯಕ್ರಮದಲ್ಲಿ ಮನ್‌ಮುಲ್ ನಿರ್ದೇಶಕ ಡಾಲು ರವಿ, ಶಾಸಕ ಹೆಚ್.ಟಿ.ಮಂಜು ಸಹೋದರ ಹೆಚ್.ಟಿ.ಲೋಕೇಶ್, ಹಾರ್ಮೋನಿಯಂ ಮತ್ತು ನಾಟಕದ ನಿರ್ದೇಶಕ ಡಾ.ಪುನೀತ್ ರಾಜ್ ಕುಮಾರ್ ಕಲಾ ಸಂಘದ ಅಧ್ಯಕ್ಷ ಸಿಂಗನಹಳ್ಳಿ ರಾಜು, ಕಲಾವಿದರಾದ ಸಾವಿತ್ರಮ್ಮ ರಾಮೇಗೌಡ, ಡಾ.ಕೆ.ಎನ್.ತಮ್ಮಯ್ಯ, ಚಟ್ಟೇನಹಳ್ಳಿ ಸಿ.ಹೆಚ್.ನಾಗರಾಜು. ಹೆಚ್.ಕೆ.ಸಿದ್ದರಾಜು, ಶಬೀರ್‌ಅಹಮದ್, ಆಟೋ ವಾಸುದೇವ್, ಕಡ್ಲೆಕಾಯಿ ಕೃಷ್ಣ ಕಟ್ಟಹಳ್ಳಿ ಲಿಂಗಪ್ಪ, ಬಣ್ಣದ ದೇವರಾಜು, ಪುಟ್ಟರಾಜು, ಕೆ.ಆರ್.ನೀಲಕಂಠ, ಆರ್.ಶ್ರೀನಿವಾಸ್, ಹೊಸಹೊಳಲು ದೇವರಾಜು, ಮಂಜುನಾಥ್, ಪಾಪಣ್ಣ, ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

  • ಶ್ರೀನಿವಾಸ, ಕೆ.ಆರ್.ಪೇಟೆ

Leave a Reply

Your email address will not be published. Required fields are marked *

× How can I help you?