ಕೆ.ಆರ್.ಪೇಟೆ: ಜಲ ಜೀವನ್ ಮಿಷನ್ ಯೋಜನೆ ಗ್ರಾಮೀಣ ಭಾಗದ ಜನರ ಆರೋಗ್ಯಕ್ಕೆ ಸಹಕಾರಿಯಾಗಲಿದೆ ಎಂದು ಶಾಸಕ ಹೆಚ್.ಟಿ ಮಂಜು ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿಯ ಬಿ.ಬಿ ಕಾವಲು ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ 37. ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವ ಯೋಜನೆ ಮನೆ ಮನೆಗೂ ನೀರು ಕೊಡುವ ಜಲಜೀವನ್ ಮಿಷನ್ ಯೋಜನೆ 2024ರಲ್ಲಿ ಮುಕ್ತಾಯವಾಗಲಿದ್ದು ಗ್ರಾಮೀಣ ಭಾಗದ ಜನರ ಆರೋಗ್ಯಕ್ಕೆ ಪ್ರಮುಖ ಪಾತ್ರ ವಹಿಸುವ ಈ ಕಾಮಗಾರಿಯನ್ನು ಅಧಿಕಾರಿಗಳು ತ್ವರಿತಗೊಳಿಸಬೇಕು.
ಅಧಿಕಾರಿಗಳು ಯೋಜನೆ ನೀಲನಕ್ಷೆ, ಕ್ರಿಯಾಯೋಜನೆ ತಯಾರಿಸುವಾಗ ನೀತಿ ನಿಯಮಗಳಿಗೆ ಜೋತು ಬೀಳದೆ ಆಯಾ ಪ್ರದೇಶಕ್ಕೆ ಅನುಗುಣವಾಗಿ ಸ್ವಲ್ಪಮಟ್ಟಿನ ಬದಲಾವಣೆ ಮಾಡಿಕೊಳ್ಳಬೇಕು. ಕಾಮಗಾರಿ ಉತ್ತಮ ಗುಣಮಟ್ಟದಿಂದ ಕೂಡಿರಬೇಕು. ಗುಣಮಟ್ಟದ ಪೈಪ್ ಬಳಸಬೇಕು. ಖಾಸಗಿ ಸಂಸ್ಥೆಯಿಂದ ಕಾಮಗಾರಿಯ ಗುಣಮಟ್ಟದ ಪರೀಕ್ಷೆ ಮಾಡಿಸಲಾಗುತ್ತದೆ.ರಸ್ತೆ ತುಂಡುಮಾಡಿ ಪೈಪ್ ಅಳವಡಿಸಿದಾಗ ಮತ್ತೆ ರಸ್ತೆಯನ್ನು ಸರಿಪಡಿಸಬೇಕು. ಅಧಿಕಾರಿಗಳು ಸಮರ್ಪಕವಾಗಿ ಮೇಲ್ವಿಚಾರಣೆ ನಡೆಸಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಕುಪ್ಪಹಳ್ಳಿ ಜಯಲಕ್ಷ್ಮಿ ಅಣ್ಣಪ್ಪ, ಉಪಾಧ್ಯಕ್ಷೆ ಲಲಿತ ಜಯರಾಮ್, ಸದಸ್ಯರಾದ ಬಿ.ಬಿ ಕಾವಲ್ ಮೋಹನ್,ಬಂಡಿಹೊಳೆ ದರ್ಶನ್, ಪುಷ್ವ ಮಧು,ಜಯಮ್ಮ,ಕುಡಿಯುವ ನೀರು ಮತ್ತು ನೈರ್ಮಲ್ಯ ಸಹಾಯಕ ಇಂಜಿನಿಯರ್ ಪ್ರವೀಣ್,ಪಿಡಿಒ ಶಿವಕುಮಾರ್, ಗ್ರಾಮದ ಮುಖಂಡರಾದ ಗೋಪಾಲ್, ಸಿಂಗಯ್ಯ, ಕಾಳಯ್ಯ, ಡೊಂಕಯ್ಯ,ನಂಜಯ್ಯ, ದೇವರಾಜು,ನಂಜುಂಡ, ವೆಂಕಟಯ್ಯ,ಗುತ್ತಿಗೆದಾರ ಕೊರಟಿಕೆರೆ ನಂದೀಶ್, ಸೇರಿದಂತೆ ಉಪಸ್ಥಿತರಿದ್ದರು.
———————-ಮನು ಮಾಕವಳ್ಳಿ ಕೆ ಆರ್ ಪೇಟೆ