ಕೆ.ಆರ್.ಪೇಟೆ-ಪಟ್ಟಣದ ಅಗ್ರಹಾರ ಬಡಾವಣೆಯಲ್ಲಿರುವ ಶ್ರೀ ಕನಕದಾಸ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 2025ನೇ ನೂತನ ವರ್ಷದ ದಿನದರ್ಶಿಕೆಗಳನ್ನು ಸಂಘದ ಅಧ್ಯಕ್ಷ ಕೆ.ಎಸ್.ಕುಮಾರ್ ಅಧ್ಯಕ್ಷತೆಯಲ್ಲಿ ಬಿಡುಗಡೆ ಮಾಡಲಾಯಿತು.
ಎಪಿಎಂಸಿ ಮಾಜಿ ಅಧ್ಯಕ್ಷ ಹೆಗ್ಗಡಿ ಕೃಷ್ಣೇಗೌಡ ಅವರು ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು,ಕನಕದಾಸ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ದಿನದರ್ಶಿಕೆಗಳನ್ನು ಬಿಡುಗಡೆ ಮಾಡುತ್ತಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ.ನೂತನ ವರ್ಷ ಎಲ್ಲರ ಬಾಳಲ್ಲಿ ನೆಮ್ಮದಿ,ಸಂತೋಷ,ಶಾಂತಿ, ರೈತರಿಗೆ ಸಕಾಲದಲ್ಲಿ ಮಳೆ ಬೆಳೆಯಾಗಿ ಎಲ್ಲರೂ ವರ್ಷಪೂರ್ತಿ ಆರೋಗ್ಯವಂತ ನೆಮ್ಮದಿಯಿಂದ ಜೀವನ ಸಾಗಿಸಲು ಕನಕದಾಸ ಸೇರಿದಂತೆ ಎಲ್ಲಾ ಮಹನೀಯರ ಅನುಗ್ರಹ ಹಾಗೂ ಭಗವಂತನ ಆಶೀರ್ವಾದ ಕರುಣಿಸುವಂತಾಗಲಿ ಎಂದು ಕೃಷ್ಣೇಗೌಡ ದೇವರಲ್ಲಿ ಪ್ರಾರ್ಥಿಸಿದರು.
ಸಂಘದ ಅಧ್ಯಕ್ಷ ಅಗ್ರಹಾರ ಕುಮಾರ್ ಮಾತನಾಡಿ, ಸತತವಾಗಿ ಏಳು ವರ್ಷಗಳಿಂದ ಶ್ರೀ ಕನಕದಾಸ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನೂತನ ವರ್ಷದ ಕ್ಯಾಲೆಂಡರ್, ಕನಕ ಜಯಂತಿ, ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದೇವೆ. ಅದೇ ರೀತಿ 2025ರ ನೂತನ ವರ್ಷದ ದಿನದರ್ಶಿಕೆಗಳನ್ನು ಸಮಾಜದ ಹಿರಿಯರು, ಸಂಘದ ಪದಾಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಮುಂದೆಯೂ ಸಹ ಅನೇಕ ಕಾರ್ಯಕ್ರಮಗಳನ್ನು ನಮ್ಮ ಸಂಘದ ವತಿಯಿಂದ ಹಮ್ಮಿಕೊಂಡು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕೆಂಬ ಹಂಬಲ ಬಲವಾಗಿದೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು.ನೂತನ ವರ್ಷ ಎಲ್ಲರಿಗೂ ಶುಭ ಉಂಟು ಮಾಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಯಜಮಾನ್ ಚಂದ್ರೇಗೌಡ, ಸಂಘದ ಅಧ್ಯಕ್ಷ ಅಗ್ರಹಾರ ಕೆ.ಎಸ್.ಕುಮಾರ್, ಉಪಾಧ್ಯಕ್ಷ ರಾಜೇಗೌಡ, ಖಜಾಂಚಿ ಸಂದೀಪ್, ತಾಂತ್ರಿಕ ಸಲಹೆಗಾರ ವಿಶ್ವನಾಥ್, ಕೆ.ಎನ್.ಕಾಳೇಗೌಡ, ಶ್ರೀನಿವಾಸ್, ಬಸವರಾಜು, ಮಂಜುನಾಥ್,ಉಮೇಶ್, ಶಿವಕುಮಾರ್, ಮಂಜುನಾಥ್, ರಾಜು, ಯೋಗೇಶ್, ತಾಲ್ಲೂಕು ಕಾಳಿದಾಸ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎನ್.ಕಾಳೇಗೌಡ, ಮುತ್ತುರಾಯಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಮುತ್ತುರಾಜ್, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
–————–ಶ್ರೀನಿವಾಸ್ ಆರ್