ಕೆ.ಆರ್.ಪೇಟೆ-ಕನ್ನಡ ಭಾಷೆ ಹಾಗೂ ಸಂಸ್ಕೃತಿಗೆ ಧಕ್ಕೆ ಎದುರಾದರೆ ಯಾವುದೇ ರೀತಿಯ ಹೋರಾಟಕ್ಕೂ ನಾವುಗಳು ಸದಾ ಸಿದ್ದರಾಗಿರಬೇಕು ಎಂದು ಶಾಸಕ ಹೆಚ್.ಟಿ ಮಂಜು ಕರೆ ನೀಡಿದರು.
ಕೃಷ್ಣರಾಜಪೇಟೆ ಹಾಗೂ ಕಿಕ್ಕೇರಿಯ ಓಮಿನಿ ಕಾರು ಮಾಲೀಕರ ಸಂಘದ ವತಿಯಿಂದ ಪಟ್ಟಣದ ಟಿಬಿ ವೃತ್ತದ ಮೈಸೂರು-ಶಿವಮೊಗ್ಗ ರಸ್ತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ 3ನೇ ವರ್ಷದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಂಡ್ಯ ಜಿಲ್ಲೆಯಲ್ಲಿ ಕನ್ನಡ ಭಾಷೆಯು ಶ್ರೀಮಂತವಾಗಿದೆ,ಆದರೆ ನಮ್ಮ ರಾಜ್ಯದ ರಾಜಧಾನಿಯಾದ ಬೆಂಗಳೂರು ಮಹಾ ನಗರದಲ್ಲಿ ಅನ್ಯ ಭಾಷಿಕರ ಹಾವಳಿಯಿಂದ ಸೊರಗುತ್ತಿದೆ. ಕರವೇ, ಜಯಕರ್ನಾಟಕ ಸಂಘಟನೆ ಸೇರಿದಂತೆ ಕನ್ನಡ ಪರ ಹೋರಾಟಗಾರರ ಭಯದಿಂದಾಗಿ ಕನ್ನಡಿಗರ ಮೇಲೆ ದೌರ್ಜನ್ಯ ದಬ್ಬಾಳಿಕೆ ನಡೆಯುವುದು ಕಡಿಮೆಯಾಗಿದೆಯಾದರೂ ಕನ್ನಡಿಗರಾದ ನಾವು ಕನ್ನಡ, ನೆಲ-ಜಲ ಹಾಗೂ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಂಡು, ಭಾಷೆ ಹಾಗೂ ನಮ್ಮ ಸಂಸ್ಕೃತಿಗೆ ಧಕ್ಕೆ ಎದುರಾದರೆ ಯಾವುದೇ ರೀತಿಯ ಹೋರಾಟಕ್ಕೆ ಸದಾ ಸಿದ್ದರಾಗಿರಬೇಕು ಎಂದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕೆ.ಆರ್.ಪೇಟೆ ಪಟ್ಟಣ ಠಾಣೆ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಕೆ.ನವೀನ್, ಗ್ರಾಮಾoತರ ಠಾಣೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸುಬ್ಬಯ್ಯ ಹಾಗೂ ಸಮಾಜ ಸೇವಕರಾದ ಮೊಟ್ಟೆಮಂಜು, ಆರ್.ಟಿ.ಓ. ಮಲ್ಲಿಕಾರ್ಜುನ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಗಂಜಿಗೆರೆ ಮಹೇಶ್, ಜಿಲ್ಲಾ ಕರವೇ ಉಪಾಧ್ಯಕ್ಷ ಸಾಸಲು ಗುರುಮೂರ್ತಿ, ಕನ್ನಡ ಧ್ವಜಾರೋಹಣ ಮಾಡಿ ಕನ್ನಡ ತಾಯಿ ಭುವನೇಶ್ವರಿಯ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ತಾಲ್ಲೂಕು ಓಮಿನಿ ಕಾರು ಚಾಲಕರ ಸಂಘದ ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷ ಕಿಕ್ಕೇರಿ ರವಿ, ಗೌರವ ಅಧ್ಯಕ್ಷರಾದ ವಾಜಿದ್ ಪಾಷ, ವೆಂಕಟರೆಡ್ಡಿ, ಕಾರ್ಯದರ್ಶಿಗಳಾದ ಕುಪ್ಪಳ್ಳಿ ಕುಮಾರ್, ನಗರೂರು ದ್ಯಾವಯ್ಯ, ಗಂಗೇನಹಳ್ಳಿ ಚೇತನ್ ಕುಮಾರ್, ಸುರೇಶ್, ಸಾಸಲು ಗುರುಮೂರ್ತಿ, ಆರ್. ಶ್ರೀನಿವಾಸ್, ಸೈಯ್ಯದ್ ಖಲೀಲ್, ಹೆಮ್ಮನಹಳ್ಳಿ ಗಂಗೇಗೌಡ, ಸಾರಂಗಿ ಜಯರಂಗ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಲಾಪ್ರಿಯಾ ಗೋವಿಂದರಾಜು ಸಾಂಸ್ಕೃತಿಕ ತಂಡದಿಂದ ಗೀತ ಗಾಯನ ಕಾರ್ಯಕ್ರಮ ಹಾಗೂ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು.
——————–ಶ್ರೀನಿವಾಸ್ ಕೆ ಆರ್ ಪೇಟೆ