ಕೆ.ಆರ್.ಪೇಟೆ-ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಉಚಿತ ಬಸ್ ವ್ಯವಸ್ಥೆ-ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ-ಹೆಚ್.ಆರ್ .ಪೂರ್ಣಚಂದ್ರ ತೇಜಸ್ವಿ ಕರೆ

ಕೆ.ಆರ್.ಪೇಟೆ,-ಇದೇ ಡಿಸೆಂಬರ್ 20, 21 ಮತ್ತು 22 ರಂದು ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ಎಲ್ಲರಿಗೂ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ ಹಾಗಾಗಿ ತಾಲೂಕಿನ ಪ್ರತಿಯೊಬ್ಬರ ಕನ್ನಡಾಭಿಮಾನಿಗಳು. ವಿದ್ಯಾರ್ಥಿಗಳು, ಆಜೀವ ಸದಸ್ಯರು ಎಲ್ಲರೂ ತಪ್ಪದೇ ಸಮ್ಮೇಳನದಲ್ಲಿ ತಪ್ಪದೇ ಭಾಗವಹಿಸುವ ಮೂಲಕ 30ವರ್ಷಗಳ ನಂತರ ನಡನೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹೆಚ್.ಆರ್.ಪೂರ್ಣಚಂದ್ರತೇಜಸ್ವಿ ಮನವಿ ಮಾಡಿದರು.

ಗಂಜಿಗೆರೆ ಮತ್ತು ಬಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಪ್ರಚಾರ ರಥ ಯಾತ್ರೆಯ ಸಮಾರೋಪ ಹಾಗು ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಮಹಾ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ,ಗೊ.ರು.ಚನ್ನಬಸಪ್ಪ ಅವರು ಆಯ್ಕೆಯಾಗಿರುವುದು ಎಲ್ಲರಿಗೂ ಸಂತೋಷ ತಂದಿದೆ.

ಡಿ.20, 21. 22ರಂದು ಮಂಡ್ಯ ನಗರದ ಅಮರಾವತಿ ಹೋಟೆಲ್ ಸಮೀಪ ನಡೆಯುವ ಸಾಹಿತ್ಯ ಸಮ್ಮೇಳನವು ಸುಮಾರು 150ಎಕರೆ ಪ್ರದೇಶದಲ್ಲಿ ನಡೆಯಲಿದೆ. ದೇಶ-ವಿದೇಶಗಳಿಂದ ಲಕ್ಷಾಂತರ ಕನ್ನಡಾಭಿಮಾನಗಳು, ಸಾಹಿತಿಗಳು, ಆಜೀವ ಸದಸ್ಯರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ಮಂಡ್ಯ ಮಣ್ಣಿನ ಸೊಗಡಿನಿಂದ ಕೂಡಿದ ಸಮ್ಮೇಳನದಲ್ಲಿ ಬರುವ ಎಲ್ಲರಿಗೂ ಬೆಲ್ಲದ ಸವಿರುಚಿ ಸಿಗಲಿದೆ. ಮೂರು ದಿನಗಳ ಕಾಲ ವೈಭೋಗದ ಊಟೋಪಚಾರ, ಕವಿಗೋಷ್ಠಿಗಳು, ಚುಟುಕು ಗೋಷ್ಠಿಗಳು, ವಿಚಾರ ಸಂಕಿರಣಗಳು, ಕನ್ನಡ ಭಾಷೆ ಉಳಿವಿಗೆ, ಕನ್ನಡ ನಾಡಿನ ಉಳಿವಿಗೆ ಕೈಗೊಳ್ಳಬೇಕಾದ ಹಲವಾರು ನಿರ್ಣಯಗಳನ್ನು ಸಮ್ಮೇಳನವು ಕೈಗೊಳ್ಳಲಿದೆ.

30ವರ್ಷಗಳ ನಂತರ ಮಂಡ್ಯದ ನೆಲದಲ್ಲಿ ಸಾಹಿತ್ಯ ಜಾತ್ರೆಯು ನಡೆಯುತ್ತಿದೆ. ಮಂಡ್ಯ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಕನ್ನಡ ಸಾಹಿತ್ಯಾಭಮಾನಿಗಳನ್ನು ಕರೆ ತರಲು ತಾಲ್ಲೂಕು ಕೇಂದ್ರ, ಹೋಬಳಿ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ಕೇಂದ್ರಗಳಿಗೆ ಉಚಿತವಾಗಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಗಾಗಿ ತಾಲ್ಲೂಕಿನ ಪ್ರತಿಯೊಬ್ಬ ಕನ್ನಡಭಾಭಿಮಾನಗಳು ಕಡ್ಡಾಯವಾಗಿ ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಪೂರ್ಣಚಂದ್ರತೇಜಸ್ವಿ ಮನವಿ ಮಾಡಿದರು.

ಕಳೆದ 1ವಾರದಿಂದ ಸಾಹಿತ್ಯ ಸಮ್ಮೇಳನದ ಪ್ರಚಾರದ ಜೊತೆಗೆ ಆಗಮಿಸಿ ಉತ್ತಮವಾಗಿ ಕಲಾಪ್ರದರ್ಶನದ ಮೂಲಕ ಸಮ್ಮೇಳನಕ್ಕೆ ಎಲ್ಲರನ್ನು ಸ್ವಾಗಿತಿಸಿದ ಮಂಡ್ಯದ ಕಲಾತಂಡದ ಸದಸ್ಯರಿಗೆ ತಾಲ್ಲೂಕಿನ ಪರವಾಗಿ ಹೃದಯ ತುಂಬಿದ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತೇಜಸ್ವಿ ತಿಳಿಸಿದರು.

ಗಂಜಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುದುಗೆರೆ ಪರಮೇಶ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೀತಾ, ಮುಖಂಡರಾದ ಮುದುಗೆರೆ ಯೋಗಣ್ಣ, ನೇತಾಜಿ ಕಾನ್ವೆಂಟ್ ಕಾರ್ಯದರ್ಶಿ ನಿರಂಜನ್, ಗಂಜಿಗೆರೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪ್ರವೀಣ್‌ಕುಮಾರ್, ಶಿಕ್ಷಕರಾದ ರಾಘವೇಂದ್ರ, ಮಹೇಶ್, ಬಸವರಾಜು, ನಂಜುoಡ. ಬಲರಾಂ, ಗಿರೀಗೌಡ, ಲಿಯಾಖತ್, ಅಂಕೇಗೌಡ, ಸೇರಿದಂತೆ ಸರ್ಕಾರಿ ಪ್ರೌಢಶಾಲೆ, ಪ್ರಾಥಮಿಕ ಶಾಲೆ ಹಾಗೂ ನೇತಾಜಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿ ಕನ್ನಡ ಸಾಹಿತ್ಯ ಸಮ್ಮೇಳನ ರಥವನ್ನು ಭವ್ಯವಾಗಿ ಸ್ವಾಗತಿಸಿ ಬೀಳ್ಕೊಟ್ಟರು.

ಬಲ್ಲೇನಹಳ್ಳಿ ಗ್ರಾಮಕ್ಕೆ ಆಗಮಿಸಿದ ಸಾಹಿತ್ಯ ಸಮ್ಮೇಳನದ ರಥವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೂತನ್ ನೇತೃತ್ವದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಗ್ರಾಮ ಪಂಚಾಯಿತಿ ಸದಸ್ಯರಾದ ನಂದೀಶ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಅಗ್ರಹಾರಬಾಚಹಳ್ಳಿ ಶ್ರೀನಿವಾಸ್, ಸಂತೇಬಾಚಳ್ಳಿ ಹೋಬಳಿ ಕಸಾಪ ಘಟಕದ ಅಧ್ಯಕ್ಷರಾದ ಪಿ.ಬಿ.ನಾಗರಾಜು, ನಿವೃತ್ತ ಪೊಲೀಸ್ ರಮೇಶ್, ನಿವೃತ್ತ ಶಿಕ್ಷಕ ಮರಿಸ್ವಾಮೀಗೌಡ, ಸೋಮನಹಳ್ಳಿ ಶ್ರೀ ಸಂಗಮೇಶ್ವರ ಅನುಧಾನಿತ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶಾಂತರಾಜು, ಸೋಮನಹಳ್ಳಿ ಸಿ.ಆರ್.ಪಿ ಮಹೇಶ್, ಸೋಮನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯ ಶಿಕ್ಷಕ ಶ್ರೀಧರ್ ಸೇರಿದಂತೆ ನೂರಾರು ಕನ್ನಡಾಭಿಮಾನಿಗಳು, ಗ್ರಾ.ಪಂ.ಸಿಬ್ಬoದಿ ವರ್ಗದವರು, ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು, ಬಲ್ಲೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯವರು, ಬಲ್ಲೇನಹಳ್ಳಿ, ಗಂಜಿಗೆರೆ, ಸೋಮನಹಳ್ಳಿ ವ್ಯಾಪ್ತಿಯ ಅಂಗನವಾಡಿ, ಆಶಾ ಕಾರ್ಯಕರ್ತೆಯರಯ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು, ಯಜಮಾನರು ಸೇರಿದಂತೆ ನೂರಾರು ಕನ್ನಡಾಭಿಮಾನಿಗಳು ಭಾಗವಹಿಸಿ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ರಥವನ್ನು ಸ್ವಾಗತಿಸಿ, ಕೆ.ಆರ್.ಪೇಟೆ ತಾಲ್ಲೂಕಿನಿಂದ ಪಾಂಡವಪುರ ತಾಲ್ಲೂಕಿಗೆ ಬೀಳ್ಕೊಟ್ಟರು.

—-ಶ್ರೀನಿವಾಸ್ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?