ಕೆ.ಆರ್.ಪೇಟೆ-ನಮ್ಮ ದೇಹದ ಪಂಚೇoದ್ರಿಯಗಳಲ್ಲಿ ಕಣ್ಣು ಬಹಳ ಮಹತ್ವ ಹೊಂದಿದೆ. ಏಕೆಂದರೆ ಮನುಷ್ಯ ದೇಹವು ಸಹ ಒಂದು ಯಂತ್ರದoತೆ ಆದರೆ ದೇಹದ ಎಲ್ಲಾ ಅಂಗಾoಗಗಳನ್ನು ನಾವು ಕೃತಕ ಜೋಡಣೆ ಮಾಡಬಹುದು.ಆದರೆ ಕಣ್ಣಿನ ದೃಷ್ಟಿಯನ್ನು ಒಮ್ಮೆ ಕಳೆದುಕೊಂಡರೆ ಮತ್ತೆ ಕೃತಕವಾಗಿ ಜೋಡಣೆ ಸಾಧ್ಯವಿಲ್ಲ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಕೇಶವ್ ದೇವಾಂಗ ತಿಳಿಸಿದರು.
ಅವರು ತಾಲ್ಲೂಕಿನ ಬೂಕನಕೆರೆ ಹೋಬಳಿಯ ಗಂಜಿಗೆರೆ ಗ್ರಾಮದಲ್ಲಿ ತಾಲ್ಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಶಿವಶಕ್ತಿ ಐಕೇರ್ ಸಂಸ್ಥೆ ಇವರ ಸಹಯೋಗದೊಂದಿಗೆ,ಕಾವೇರಿ ಜ್ಞಾನ ವಿಕಾಸ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ‘ಉಚಿತ ಕಣ್ಣಿನ ತಪಾಸಣೆ ಹಾಗು ಆರೋಗ್ಯ ತಪಾಸಣಾ’ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ನಾವು ಸತ್ತ ನಂತರವು ನಮ್ಮ ದೇಹ ಮಣ್ಣಲ್ಲಿ ಮಣ್ಣಾಗುವ ಮೊದಲು ನಾವು ನೇತ್ರ ದಾನ ಮಾಡಬೇಕು.ಪ್ರಪಂಚದಲ್ಲಿ ಎಷ್ಟೋ ಜನ ಹುಟ್ಟು ಕುರುಡರು ಇದ್ದು, ಅವರು ಪ್ರಪಂಚವನ್ನು ನೋಡಲಾಗದ ಸ್ಥಿತಿಯಲ್ಲಿದ್ದಾರೆ.ವರನಟ ಡಾ.ರಾಜ್‌ಕುಮಾರ್, ಯುವನಟ ಡಾ.ಪುನೀತ್‌ರಾಜ್‌ಕುಮಾರ್ ಅವರು ನೇತ್ರ ದಾನ ಮಾಡುವ ಮೂಲಕ ನಾಲ್ವರು ಅಂಧರ ಬಾಳಿಗೆ ಬೆಳಕಾಗಿದ್ದಾರೆ.ಇಂತಹ ಉದಾರ ಗುಣವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು.ಇಂದೇ ತಮ್ಮ ನೇತ್ರ ದಾನ ಮಾಡುವ ಕಾರ್ಯಕ್ಕೆ ಹೆಸರು ನೋಂದಾಯಿಸಿಕೊoಡು ಮಾದರಿಯಾಗಬೇಕು ಎಂದು ಮನವಿ ಮಾಡಿದರು.
ತಾಲ್ಲೂಕು ಯೋಜನಾಧಿಕಾರಿ ತಿಲಕ್‌ರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ನೇತ್ರ ತಜ್ಞ ಸಹಾಯಕರು ದರ್ಶನ್, ಕುಮಾರ್ , ಲ್ಯಾಬ್ ಟೆಕ್ನಿಷಿಯನ್ ಶ್ರೀಧರ್ ರವರು , ಗ್ರಾಮ ಪಂಚಾಯಿತಿ ಅಧ್ಯಕ್ಷ ಮುದುಗೆರೆ ಪರಮೇಶ್ ಗ್ರಾ.ಪಂ.ಸದಸ್ಯರಾದ ರೇಣುಕಾಪ್ರಸನ್ನ, ವಲಯದ ಮೇಲ್ವಿಚಾರಕ ಮಿಥುನ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಅನಿತ, ವಲಯದ ಸೇವಾಪ್ರತಿನಿಧಿಗಳಾದ ಮಹದೇವಪ್ಪ , ಶೃತಿ , ನಿರ್ಮಲ, ಸುಧಾಮಣಿ, ರೂಪ , ತಾರಾಮಣಿ , ಮಮತ , ಹರ್ಷಿತ , ರಾಣಿ , ಸೇರಿದಂತೆ ಜ್ಞಾನವಿಕಾಸ ಕೇಂದ್ರದ ಸದಸ್ಯರು ಹಾಗೂ ಗ್ರಾಮದ ಮುಖಂಡರು, ಯುವಕರು, ಉಪಸ್ಥಿತರಿದ್ದರು.
ಸುಮಾರು 300ಕ್ಕೂ ಹೆಚ್ಚು ಮಂದಿ ಆರೋಗ್ಯ ತಪಾಸಣೆಯ ಪ್ರಯೋಜನ ಪಡೆದುಕೊಂಡರು.
——-ಶ್ರೀನಿವಾಸ್ ಕೆ ಆರ್ ಪೇಟೆ