ಕೆ.ಆರ್.ಪೇಟೆ-ಕರವೇ-ಪ್ರತಿಭಟನೆ-ಕೆ.ಆರ್.ಪೇಟೆ-ಪುರಸಭೆ-ವಾಣಿಜ್ಯ- ಮಳಿಗೆ-ಹರಾಜು-ಪ್ರಕ್ರಿಯೆ-ಮುಂದೂಡಿಕೆ

ಕೆ.ಆರ್.ಪೇಟೆ: ಪಟ್ಟಣದಲ್ಲಿ ಪುರಸಭೆಗೆ ಸೇರಿದ ಸುಮಾರು 125ಕ್ಕೂ ಹೆಚ್ಚಿನ ವಾಣಿಜ್ಯ ಮಳಿಗೆಗಳು ಸೇರಿದಂತೆ ವಿವಿಧ ಬಾಬ್ತುಗಳ ಹರಾಜುಗಳ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸದೇ ಪುರಸಭೆಯ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ಹಣವನ್ನು ವಂಚಿಸಲಾಗುತ್ತಿದೆ. ಪುರಸಭೆಯ ಎಲ್ಲಾ ಆಡಳಿತ ವ್ಯವಹಾರಗಳು ಪಾರದರ್ಶಕವಾಗಿ ಬಹಿರಂಗವಾಗಿ ನಡೆಯಬೇಕು ಎಂದು ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕರವೇ ಕಾರ್ಯಕರ್ತರ ಹೋರಾಟದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಾಗಿದ್ದ ಕೆ.ಆರ್.ಪೇಟೆ ಪುರಸಭೆಯ ವಿವಿಧ ಬಾಬ್ತುಗಳ ಬಹಿರಂಗ ಹರಾಜು ಪ್ರಕ್ರಿಯೆಯನ್ನು ಅನಿರ್ದಿಷ್ಟಾವಧಿಗೆ ಮುಖ್ಯಾಧಿಕಾರಿ ನಟರಾಜ್ ಮುಂದೂಡಿದರು.

ಸAವಿಧಾನ ಬದ್ಧವಾಗಿ ಬಹಿರಂಗ ಹರಾಜು ನಡೆಸಿ, ಕರಪತ್ರಗಳನ್ನು ಹಂಚಿ, ದಿನಪತ್ರಿಕೆಗಳಲ್ಲಿ ಸಾರ್ವಜನಿಕ ಪ್ರಕಟಣೆ ಹೊರಡಿಸಿ ವಾಣಿಜ್ಯ ಮಳಿಗೆಗಳು ಸೇರಿದಂತೆ ವಿವಿಧ ಬಾಬುಗಳ ಹರಾಜು ಪ್ರಕ್ರಿಯೆ ನಡೆಸಬೇಕು. ಆದರೆ ಕೆ.ಆರ್. ಪೇಟೆ ಪುರಸಭೆಯಲ್ಲಿ ಕಳೆದ 25 ವರ್ಷಗಳಿಂದ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ನಡೆಸದೇ ಒಳಗೊಳಗೇ ಲಂಚದ ಹಣ ಪಡೆದುಕೊಂಡು ಪ್ರಸ್ತುತ ಅಂಗಡಿ ಮಳಿಗೆಗಳನ್ನು ಬಾಡಿಗೆಗೆ ಪಡೆದುಕೊಂಡಿರುವ ವರನ್ನೇ ಕಡಿಮೆ ಬಾಡಿಗೆಗೆ ಮುಂದುವರೆಸಲಾಗುತ್ತಿದೆ.

ಕಡಿಮೆ ದರಕ್ಕೆ ಬಾಡಿಗೆಗೆ ವಾಣಿಜ್ಯ ಮಳಿಗೆಗಳನ್ನು ಪಡೆದುಕೊಂಡಿರುವ ಪ್ರಭಾವಿಗಳು ಮಳಿಗೆಗಳನ್ನು ಸಬ್ ಲೀಸ್ ಮಾಡಿ ಹೆಚ್ಚಿನ ಬಾಡಿಗೆ ಹಣವನ್ನು ತಮ್ಮ ಜೇಬಿಗೆ ಇಳಿಸಿಕೊಂಡು ಪುರಸಭೆಗೆ ವಂಚಿಸುತ್ತಿರು ವುದರಿಂದ ನಟರಾಜ್ ಅವರು ಹರಾಜು ಪ್ರಕ್ರಿಯೆಯನ್ನು ಮುಂದೂಡಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ವೇಣು ಆಗ್ರಹಿಸಿದಾಗ, ಅಧ್ಯಕ್ಷೆ ಪಂಕಜಾ ಅವರ ನಿರ್ದೇಶನದಂತೆ ಇಂದು ನಿಗಧಿಯಾಗಿದ್ದ ಪುರಸಭೆಯ ಎಲ್ಲಾ ಬಾಬುಗಳ ಹರಾಜು ಪ್ರಕ್ರಿಯೆಯನ್ನು ಅನಿರ್ದಿಷ್ಟಾವಧಿಗೆ ಚೀಫ್ ಆಫೀಸರ್ ನಟರಾಜ್ ಮುಂದೂಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಮಂಡ್ಯ ಜಿಲ್ಲಾಧ್ಯಕ್ಷ ಡಿ.ಎಸ್.ವೇಣು, ಕರವೇ ತಾಲೂಕು ಘಟಕದ ಅಧ್ಯಕ್ಷ ಟೆಂಪೋ ಶ್ರೀನಿವಾಸ್, ಕರವೇ ಪದವೀಧರ ವಿಭಾಗದ ಜಿಲ್ಲಾ ಉಪಾಧ್ಯಕ್ಷ ಚೇತನ್ ಕುಮಾರ್, ಯುವ ಘಟಕದ ಅಧ್ಯಕ್ಷ ಆನಂದ್, ಕಾರ್ಯದರ್ಶಿ ಮನು, ಕರವೇ ಪದಾಧಿಕಾರಿಗಳಾದ ಶಿವಪ್ರಸಾದ್, ಗೋಪಾಲ್, ಕರವೇ ನಗರ ಘಟಕದ ಅಧ್ಯಕ್ಷ ಮೊಬೈಲ್ ಮದನ್, ಸಂಘಟನಾ ಕಾರ್ಯದರ್ಶಿ ಸ್ವಾಮಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಆರ್.ರವೀಂದ್ರಬಾಬು, ಪುರಸಭಾ ಸದಸ್ಯರಾದ ಡಿ.ಪ್ರೇಮ್ ಕುಮಾರ್, ಕೆ.ಬಿ. ಪ್ರಕಾಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

  • ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *

× How can I help you?