ಕೆ.ಆರ್.ಪೇಟೆ: ಪಟ್ಟಣದ ಹೇಮಾವತಿ ಬಡಾವಣೆಯಲ್ಲಿ ಇರುವ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಎಲ್ಲಾ 12 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ ಸಂಘದ ಹಾಲಿ ಅಧ್ಯಕ್ಷ ಕೆ.ಪುರುಷೋತ್ತಮ್ ಮತ್ತು ತಾಲ್ಲೂಕು ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕ ಕೆ.ಟಿ.ಚಕ್ರಪಾಣಿ ನೇತೃತ್ವದ ತಂಡದ ಎಲ್ಲಾ ನಿರ್ದೇಶಕರನ್ನು ಮಂಡ್ಯ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅವರು ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಮಾತನಾಡಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅವರು ಕಳೆದ 15ವರ್ಷಗಳಿಂದ ಸಂಘದ ಅಧ್ಯಕ್ಷರಾಗಿರುವ ಕೆ.ಪುರುಷೋತ್ತಮ್ ಅವರು ಸಂಘದ ಸಮಗ್ರ ಅಭಿವೃದ್ದಿಗೆ ಶ್ರಮಿಸಿದ್ದಾರೆ.
ಸುಮಾರು 3ಕೋಟಿ ವೆಚ್ಚದಲ್ಲಿ ಸಂಘದ ನೂತನ ನಿರ್ಮಿಸಿ, ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ಕರೆಸಿ ಉದ್ಘಾಟನೆ ಮಾಡಿಸುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಮತ್ತೊಮ್ಮೆ ಅವರ ತಂಡವೇ ಎಲ್ಲಾ ಸ್ಥಾನಗಳನ್ನು ಗೆದ್ದಿರುವುದು ಶ್ಲಾಘನೀಯವಾದುದು. ಇದೇ ಈ ಬಾರಿ ಆಯ್ಕೆಯಾಗಿರುವ ಎಲ್ಲಾ ನಿರ್ದೇಶಕರು ಒಗ್ಗಟ್ಟಿನಿಂದ ಕೆಲಸ ಮಾಡಿ ಸಂಘದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ದುಡಿಯುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಆರ್.ರವೀಂದ್ರಬಾಬು, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಮಂಜುನಾಥ್, ತಾಲ್ಲೂಕು ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕ ಕೆ.ಟಿ.ಚಕ್ರಪಾಣಿ, ಸಂಘದ ಹಾಲಿ ಅಧ್ಯಕ್ಷ ಕೆ.ಪುರುಷೋತ್ತಮ್ ,ಸಂಘದ ನೂತನ ನಿರ್ದೇಶಕರಾದ ಕೆ.ಟಿ.ಚಕ್ರಪಾಣಿ, ಕೆ.ಕೆಪುರುಷೋತ್ತಮ್, ಥಿಯೇಟರ್ ಚಂದ್ರಣ್ಣ, ರಾಜಾನಾಯಕ್, ಕೆ.ಎನ್.ಕಾಳೇಗೌಡ, ನಂದೀಶ್, ಹಿರೀಕಳಲೆ ಬಲರಾಂ, ತೇಗನಹಳ್ಳಿ ಟಿ.ಜೆ.ನಾಗೇಶ್, ಕೋಮಲ ಮಂಜೇಗೌಡ, ಗಂಗನಹಳ್ಳಿ ಗಂಗಾದೇವಿ, ಹಿರೀಕಳಲೆ ಹೆಚ್.ಜೆ.ಸೋಮಶೇಖರ್. ಯೋಗನಿಂಗಯ್ಯ ಇತರರು ಉಪಸ್ಥಿತರಿದ್ದರು.
- ಶ್ರೀನಿವಾಸ್ ಆರ್.