ಕೆ.ಆರ್.ಪೇಟೆ-ತಾಲ್ಲೂಕಿನ ಕಿಕ್ಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025-30ನೇ ಸಾಲಿಗೆ 12ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 8 ಮಂದಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್ ನಾಯಕತ್ವದಲ್ಲಿ ಪ್ರಚಂಡ ಜಯಭೇರಿ ಬಾರಿಸಿ ಸತತ ಮೂರನೇ ಬಾರಿಗೆ ಗೆಲುವು ಸಾಧಿಸಿ, ಹ್ರಾಟ್ರಿಕ್ ಸಾಧನೆ ಮಾಡಿದ್ದಾರೆ.
ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಗಳು ಓರ್ವ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾದರೆ ಚುನಾವಣೆಯಲ್ಲಿ ಕೇವಲ 3 ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ರಾಜ್ಯದಲ್ಲಿಯೇ ಆದಾಯಗಳಿಕೆಯಲ್ಲಿ ಹಾಗೂ ವ್ಯವಹಾರದಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಕಿಕ್ಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆಯಾದ ಎಲ್ಲಾ 8ಮಂದಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಸದಸ್ಯ ಕಿಕ್ಕೇರಿ ಸುರೇಶ್, ಸತತವಾಗಿ ಹತ್ತು ವರ್ಷಗಳಿಂದ ಕಾಂಗ್ರೆಸ್ ಅಧಿಕಾರದಲ್ಲಿರಲು ಸಂಘದ ಮತದಾರರು ನಮ್ಮ ಪಕ್ಷದ ಮೇಲೆ ವಿಶ್ವಾಸವಿಟ್ಟು ಆಶೀರ್ವಾದ ಮಾಡಿದ್ದರು. ಈಗ ಮತ್ತೊಮ್ಮೆ ನಮ್ಮ ಮೇಲೆ ಅಪಾರ ನಂಬಿಕೆ ಇಟ್ಟು ಮೂರನೇ ಬಾರಿಗೂ ಪ್ರಬುದ್ಧ ಮತದಾರರು ಅವಕಾಶ ಮಾಡಿಕೊಟ್ಟಿದ್ದಾರೆ.ಅವರಿಗೆ ನನ್ನ ಕಡೆಯಿಂದ ಪಕ್ಷದ ವತಿಯಿಂದ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ಇದನ್ನು ಗೆಲುವು ಸಾಧಿಸಿರುವ ಅಭ್ಯರ್ಥಿಗಳು ಗಮನಿಸಬೇಕು.ಇದುವರೆಗೂ ನಮ್ಮ ಸಹಕಾರ ಸಂಘವು ರಾಜ್ಯದಲ್ಲಿಯೇ ಉತ್ತಮ ಹೆಸರು ಗಳಿಸಿದೆ. ಇದಕ್ಕೆ ಆಡಳಿತ ಮಂಡಳಿಯ ಹಾಗೂ ಸಂಘದ ನೌಕರರ ಪ್ರಾಮಾಣಿಕ ಸೇವೆಯೇ ಪ್ರಮುಖ ಕಾರಣವಾಗಿದೆ. ಮುಂದೆಯೂ ಸಹ ಸಂಘದ ಅಧ್ಯಕ್ಷರು ಹಾಗೂ ನಿರ್ದೇಶಕರು ಸಂಘದಲ್ಲಿ ರಾಜಕಾರಣ ಬೆರಸದೇ ಸಂಘದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು. ನಮ್ಮ ಸಂಘದಲ್ಲಿ ಇದುವರೆಗೂ ಚುನಾವಣೆ ಸಂದರ್ಭದಲ್ಲಿ ಬಿಟ್ಟರೆ ಉಳಿದ ಯಾವುದೇ ಸಮಯದಲ್ಲಿ ಸಂಘದಲ್ಲಿ ರಾಜಕಾರಣ ಬೆರಸಿಲ್ಲ. ಮುಂದೆಯೂ ಸಂಘದ ಹಾಗೂ ಶೇರುದಾರರಿಗೆ ಒಳಿತನ್ನು ಮಾಡುವ ಮೂಲಕ ಸಂಘವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವoತೆ ಕಿಕ್ಕೇರಿ ಸುರೇಶ್ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕಿಕ್ಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸಾಸಲು ಈರಪ್ಪ, ನಿವೃತ್ತ ಪ್ರಾಂಶುಪಾಲ ಜಾಣೇಗೌಡ, ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ದೇವರಹಳ್ಳಿ ಮಹೇಂದ್ರ, ಜಿಲ್ಲಾ ಕೆಡಿಪಿ ಸದಸ್ಯ ಉಜೈಫ್, ಪಿ.ಎಲ್.ಡಿ ನಿರ್ದೇಶಕ ಲಕ್ಷ್ಮೀಪುರ ಚಂದ್ರೇಗೌಡ, ಎಪಿಸಿಎಂಸಿ ಮಾಜಿ ಅಧ್ಯಕ್ಷ ಕೋಡಿಮಾರನಹಳ್ಳಿ ಮಂಜೇಗೌಡ, ಅಕ್ಷಯ್, ಡಿ.ಎಂ.ಮಹೇoದ್ರ, ತಿಮ್ಮೇಗೌಡರ ರಮೇಶ್, ಜಿ.ಪಂ.ಮಾಜಿ ಸದಸ್ಯ ಎಲ್.ಕೆ.ಮಂಜುನಾಥ್, ಡೇರಿ ಮಾಜಿ ಅಧ್ಯಕ್ಷ ರಮೇಶ್, ಎಲ್.ಎಲ್.ನಿಂಗರಾಜು, ಎಲ್.ಪಿ.ದೇವರಾಜು, ಸೊಸೈಟಿ ಮಾಜಿ ಅಧ್ಯಕ್ಷ ಕಾಯಿ ಸುರೇಶ್, ಹರೀಶ್ ಕೋಮಲಾಪುಟ್ಟೇಗೌಡ, ಮಹೇಂದ್ರ, ನೀಲಾಮಣಿ, ಅಕ್ಷಯ್, ಪಾಪೇಗೌಡ, ಮುರುಳೀಧರ್, ಶೇಖರ್, ಪುಟ್ಟರಾಜು, ಮಂಜುನಾಥ್, ಶಿವರಾಮೇಗೌಡ ಇದ್ದರು.
—————ಶ್ರೀನಿವಾಸ್ ಆರ್