ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಮತ್ತಿಘಟ್ಟ ಗ್ರಾಮದ ಕುಮಾರ ಎಂಬವರಿಗೆ ಸೇರಿದ ಒಂಬತ್ತು ಮೇಕೆಗಳ ಮೇಲೆ ಬೀದಿ ನಾಯಿಗಳು ಅಟ್ಟಹಾಸ ಮೆರೆದು ಎಂಟು ಮೇಕೆಗಳು ಸ್ಥಳದಲ್ಲೇ ಸಾವಿಗಿಡಾಗಿರುವ ಘಟನೆ ಹಿನ್ನೆಲೆಯಲ್ಲಿ,ಘಟನಾ ಸ್ಥಳಕ್ಕೆ ಸಮಾಜ ಸೇವಕ ಆರ್‌ಟಿಓ ಮಲ್ಲಿಕಾರ್ಜುನ್ ಭೇಟಿ ನೀಡಿ ರೈತ ಕುಮಾರ್ ರವರಿಗೆ ಆರ್ಥಿಕ ಧನ ಸಹಾಯದ ಜೊತೆಗೆ ಆತ್ಮಸ್ಥೈರ್ಯ ತುಂಬುವ ಮೂಲಕ ಮಾನವೀಯತೆ ಮೆರೆದರು.
ಗ್ರಾಮದ ಮುಖಂಡ ಬಸವೇಗೌಡ ಮಾತನಾಡಿ,ಹಲವು ವರ್ಷಗಳಿಂದ ನಮ್ಮ ಗ್ರಾಮದ ಕುಮಾರ್ ಅವರು ಮೇಕೆ ಸಾಗಾಣಿಕೆ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಆದರೆ ಬೀದಿ ನಾಯಿಗಳ ಹಾವಳಿಯಿಂದ ಎಂಟು ಮೇಕೆಗಳು ಸಾವಿಗೀಡಾಗಿ ಸಂಕಷ್ಟಕ್ಕೆ ಸಿಲುಕಿರುವ ಅವರ ಕುಟುಂಬಕ್ಕೆ ಸಮಾಜ ಸೇವಕರಾದ ಆರ್.ಟಿ.ಓ ಮಲ್ಲಿಕಾರ್ಜುನ್ ರವರು ಧನಸಹಾಯ ನೀಡುವ ಮೂಲಕ ಮಾದರಿಯಾಗಿದ್ದಾರೆ. ಅವರ ನಿರಂತರ ಸಮಾಜಮುಖಿ ಕಾರ್ಯಕ್ಕೆ ನಿಜಕ್ಕೂ ಶ್ಲಾಘನೀಯ ಎಂದರು.
ಗ್ರಾಮದಲ್ಲಿ ಪದೇ ಪದೇ ರೈತರ ಜಾನುವಾರುಗಳು ಬೀದಿ ನಾಯಿಗಳ ಹಾವಳಿಯಿಂದ ಸಾವಿಗೀಡಾಗುತ್ತಿವೆ.ಸಂಬಂಧಪಟ್ಟ ಅಧಿಕಾರಿಗಳು ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಿ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗ್ರಾ.ಪಂ ಸದಸ್ಯೆ ರಮ್ಯ ಸುರೇಶ್,ಮಾಜಿ ಸದಸ್ಯೆ ಲತಾ ವಿಶ್ವನಾಥ್,ಕುಮಾರ್, ಬಸವೇಗೌಡ,ರಾಜೇಗೌಡ,ರಂಗೇಗೌಡ,ಕುಮಾರ್ ಗೌಡ,ಸತೀಶ್,ಗೌರಮ್ಮ, ರಾಜೇಗೌಡ, ಮಹೇಶ್,ರೈತ ಕುಮಾರ್, ಆರ್ ಟಿ ಓ ಮಲ್ಲಿಕಾರ್ಜುನ್ ಅಭಿಮಾನಿಗಳ ಬಳಗದ ಅಧ್ಯಕ್ಷ ಗಂಜಿಗೆರೆ ಮಹೇಶ್,ಸೇರಿದಂತೆ ಉಪಸ್ಥಿತರಿದ್ದರು.
——————- ಮನು ಮಾಕವಳ್ಳಿ ಕೆ ಆರ್ ಪೇಟೆ