ಕೆ.ಆರ್.ಪೇಟೆ– ಕೆರೆ ಕಟ್ಟೆಗಳು ಸೇರಿದಂತೆ ಜಲ ಮೂಲಗಳನ್ನು ಉಳಿಸದೇ ಇದ್ದರೆ ಮುಂದಿನ ದಿನಗಳಲ್ಲಿ ನೀರಿಗಾಗಿ ವಿಶ್ವ ಮಹಾಯುದ್ದ ನಡೆಯುವ ಅಪಾಯ ಇದೆ. ಹಾಗಾಗಿ ಕೆರೆ ಕಟ್ಟೆಗಳನ್ನು ಉಳಿಸುವಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ. ಕೆರೆ ಸಂರಕ್ಷಣೆಗೆ ಶ್ರೀ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರಹೆಗ್ಗಡೆಯವರು ನಾಡಿನಾದ್ಯಂತ ಸಾವಿರಾರು ಕೆರೆಗಳ ಅಭಿವೃದ್ಧಿಗೆ ಮುಂದಾಗಿರುವುದು ಶ್ಲಾಘನೀಯವಾದುದು ಎಂದು ಜಿಲ್ಲಾ ಜನ ಜಾಗೃತಿ ಅಧ್ಯಕ್ಷರು ಹಾಗೂ ಸಮಾಜ ಸೇವಕರಾದ ಆರ್.ಟಿ.ಓ ಮಲ್ಲಿಕಾರ್ಜುನ್ ಹೇಳಿದರು.
ಅವರು ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಸಾಕ್ಷಿಬೀಡು ಗ್ರಾಮದ ಕೆರೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸಾಕ್ಷಿಬೀಡು ಕೆರೆ ಅಭಿವೃದ್ಧಿ ಸಮಿತಿ ವತಿಯಿಂದ ಪುನಶ್ಚೇತನಗೊಂಡ 779 ನೇ ಕೆರೆಯ ನಾಮಫಲಕ ಅನಾವರಣಗೊಳಿಸಿ ಕೆರೆಯನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿ ಮಾತನಾಡಿದರು.

ನಮ್ಮ ಪೂರ್ವಜರ ಕಾಲದಲ್ಲಿ ತೆರೆದ ಬಾವಿ, ಮಗನ ಕಾಲಕ್ಕೆ ಕೊಳವೆಬಾವಿ, ಮೊಮ್ಮಕ್ಕಳ ಕಾಲಕ್ಕೆ ಖಾಲಿ ಬಾವಿ. ಪರಿಸ್ಥಿತಿ ಹೀಗೇ ಮುಂದುವರೆದಲ್ಲಿ ಭೂಮಿಯಲ್ಲಿರುವ ನೀರಿನ ಪ್ರಮಾಣ ಕ್ಷೀಣಿಸಿ ಮನುಷ್ಯ ತನ್ನ ನೀರಿನ ದಾಹವನ್ನು ನೀಗಿಸಿಕೊಳ್ಳಲು ಮಾತ್ರೆಗಳನ್ನು ಬಳಸಬೇಕಾಗುತ್ತದೆ. ಇದೊಂದು ನೀರಿಗಾಗಿ ವಿಶ್ವ ಮಹಾಯುದ್ದವೇ ನಡೆದರೂ ಆಶ್ಚರ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ರಾಜ್ಯ ಎಲ್ಲೆಡೆ ಕೆರೆಗಳ ಅಭಿವೃದ್ಧಿಗೆ ಸ್ಥಳೀಯ ಜನರ ಸಹಕಾರದೊಂದಿಗೆ ಕೆಲಸ ಮಾಡುತ್ತಿದೆ.
ಈ ಕೆರೆ ಅಭಿವೃದ್ಧಿ ಕಾಮಗಾರಿಯಿಂದ ಕೆರೆ ಅಚ್ಚಕಟ್ಟು ಭಾಗದ ರೈತರ ಜಮೀನುಗಳಿಗೆ ನೀರು ಸಿಗುತ್ತದೆ. ಕೃಷಿ ಹಾಗೂ ಕುಡಿಯುವ ನೀರಿನ ಕೊಳವೆ ಬಾವಿಗಳಲ್ಲಿ ಅಂತರ್ಜಲ ವೃದ್ದಿಯಾಗುತ್ತದೆ. ಇಂತಹ ಸಾರ್ವಜನಿಕರಿಗೆ ಅನುಕೂಲವಾಗುವ ಕಾರ್ಯಗಳಿಗೆ ನಮ್ಮ ಪಂಚಾಯಿತಿ ಸದಾ ಸಹಕಾರ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಧರ್ಮಸ್ಥಳ ಸಂಸ್ಥೆಯವರು ಯೋಜನೆ ಮಾಡುವ ಎಲ್ಲ ಕಾರ್ಯಕ್ರಮಗಳು ಸಮಾಜಮುಖಿ ಕಾರ್ಯಕ್ರಮಗಳು ಜನರ ಏಳಿಗೆಗಾಗಿ ಇವೆ. ಆದರೆ ಕೆಲವರು ಎಂದೋ ನಡೆದ ಒಂದು ಘಟನೆಗೆ ಶ್ರೀ ಧರ್ಮಸ್ಥಳ ಸಂಸ್ಥೆಯ ಹೆಸರನ್ನು ಸೋಷಿಯಲ್ ಮೀಡಿಯಾಗಳಲ್ಲಿ ಉಲ್ಲೇಖ ಮಾಡುತ್ತಾ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಮಲ್ಲಿಕಾರ್ಜುನ್ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮೈಸೂರು ಪ್ರಾದೇಶಿಕ ನಿರ್ದೇಶಕರಾದ ಜಯರಾಮ್ ನೆಲ್ಲಿತ್ತಾಯ ಕೆರೆಗಳು ಗ್ರಾಮೀಣ ರೈತರ ಜೀವನಾಡಿ ಅವುಗಳನ್ನು ಉಳಿಸಿಕೊಂಡರೆ ಸಮೃದ್ಧಿ ಎಂಬ ಆಶಯದಿಂದ ಕೆರೆಗಳನ್ನು ಪುನಃಶ್ಚೇತನ ಮಾಡುವ ಯೋಜನೆಯಡಿ ಈ ಕೆರೆಗೆ ಶ್ರೀಗಳು ನೀಡಿದ ಅನುದಾನ 12.60 ಲಕ್ಷ, ಮಂಜೂರು ನೀಡಿದ್ದು, ಗ್ರಾಮಸ್ಥರ ಪಾಲು 11 ಲಕ್ಷ, ಒಟ್ಟು 23.68 ಲಕ್ಷ ಖರ್ಚಾಗಿದ್ದು. 24ಎಕರೆ ವಿಸ್ತೀರ್ಣವುಳ್ಳ ಈ ಕೆರೆಯು ನೂರಾರು ರೈತರಿಗೆ ಅನುಕೂಲವಾಗಲಿದೆ. ಈಗ ಬಹಳ ಸುಂದರವಾಗಿ ಈ ಕೆರೆಯನ್ನು ರೂಪಿಸಲಾಗಿದೆ. ಈ ಕೆರೆಯಲ್ಲಿ ಇರುವಂತಹ ಜೀವಿಗಳ ಜೀವನಾಡಿಯಾಗಿದೆ.
ಕೆರೆಯಿಂದ ಜನರು ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ಮತ್ತು ಕೆರೆಯ ಸುತ್ತ-ಮುತ್ತಲಿನ ಕೃಷಿ ಜಮೀನುಗಳಿಗೆ ಅಂತರ್ಜಾಲ ಹೆಚ್ಚಾಗುತ್ತೆದೆ,ಇವೆಲ್ಲವು ಜೀವಂತವಾಗಿ ಇರಬೇಕಾದರೆ ನಾವು ನಮ್ಮ ಊರಿನಲ್ಲಿ ಇರುವ ನಮ್ಮಕೆರೆಗಳನ್ನು ನಾವು ಶುಚಿಯಾಗಿಟ್ಟುಕೊಂಡು ಕೆರೆಯನ್ನು ನಾವುಕಾಪಾಡಿದಾಗ ಮಾತ್ರ ಕೆರೆಯನ್ನು ನಮ್ಮ ಮುಂದಿನಪೀಳಿಗೆಗೂ ರಕ್ಷಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಜಿಲ್ಲಾ ಜನ ಜಾಗೃತಿ ವೇದಿಕೆಯ ನಿರ್ದೇಶಕ ಎ.ಆರ್ ರಘು ಸಮಾಜದಲ್ಲಿ ನಾವೆಲ್ಲರೂ ಸ್ವಾರ್ಥಿಗಳಾಗಿ ಬದುಕುತ್ತಿದ್ದೇವೆ. ಇದರ ಪರಿಣಾಮ ಪ್ರಕೃತಿಯಲ್ಲಿ ಹಲವು ಬದಲಾವಣೆ ಕಾಣಬಹುದಾಗಿದೆ.ಕೆರೆಗಳಲ್ಲಿ ಹೂಳು ತೆಗೆದು ನೀರು ಇಂಗಿಸುವ ಬದಲು ಊರಿನ ಕಸ ಮತ್ತು ತ್ಯಾಜ್ಯ ಹಾಕಲು ಕೆರೆಗಳನ್ನು ಉಪಯೋಗಿಸಿ ಕೊಳ್ಳಲಾಗುತ್ತಿದೆ. ಈ ಕಾರಣದಿಂದಾಗಿ ಕೆರೆಗಳು ತಮ್ಮ ಇರುವಿಕೆಯನ್ನೇ ಕಳೆದುಕೊಳ್ಳುತ್ತಿವೆ ಎಂದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆ ಅವರು ಸ್ವಚ್ಛತೆ, ಪಾವಿತ್ರ‍್ಯತೆ ಎಂಬುದು ಕೇವಲ ಧರ್ಮಸ್ಥಳಕ್ಕೆ ಸೀಮಿತವಾಗದೇ ಈ ಯೋಜನೆಯ ಸಮರ್ಪಕ ಅನುಷ್ಠಾನದಿಂದಾಗಿ ಸುಂದರ ಸಮಾಜ ನಿರ್ಮಾಣದ ಕನಸು ಕಂಡವರು ಈ ಮೂಲಕ ಸಮಾಜದ ಕಳೆ ಮತ್ತು ಕೊಳೆಯನ್ನು ತೊಳೆಯುವಂಥ ಕೆಲಸದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೆಲಸ ಮಾಡುತ್ತಿದೆ ಎಂದರು.
ಈ ವೇಳೆ ಸಾಕ್ಷಿಬೀಡು ಕೆರೆ ಸಮಿತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸಮಿತಿಯ ಸರ್ವ ಸದಸ್ಯರಿಂದ ಗ್ರಾಮ ಪಂಚಾಯಿಗೆ ಕೆರೆ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮೈಸೂರು ಪ್ರಾದೇಶಿಕ ನಿರ್ದೇಶಕರಾದ ಜಯರಾಮ್ ನೆಲ್ಲಿತ್ತಾಯ, ಜಿಲ್ಲಾ ಜನ ಜಾಗೃತಿ ವೇದಿಕೆಯ ನಿರ್ದೇಶಕ ಎ.ಆರ್ ರಘು, ಜಿಲ್ಲಾ ಜನ ಜಾಗೃತಿ ಮಾಜಿ ಅಧ್ಯಕ್ಷ ಜಯರಾಮ್ ತೋಟಿ, ಜಿಲ್ಲಾ ನಿರ್ದೇಶಕ ಕೇಶವ್ ದೇವಾಂಗ, ಬೀರುವಳ್ಳಿ ಗ್ರಾ.ಪಂ ಅಧ್ಯಕ್ಷೆ ಎಂ.ಜಿ.ಸುಜಾತನಾಗರಾಜು, ಗ್ರಾ.ಪಂ.ಸದಸ್ಯ ಎಸ್.ಎನ್.ಮಂಜೇಗೌಡ, ಕೆ.ಆರ್.ಪೇಟೆ ತಾಲೂಕು ಯೋಜನಾಧಿಕಾರಿ ತಿಲಕ್‌ರಾಜ್, ಕಿಕ್ಕೇರಿ ವಿಭಾಗದ ಯೋಜನಾಧಿಕಾರಿ ವೀರೇಶಪ್ಪ, ಕೆರೆ ಸಮಿತಿ ಅಧ್ಯಕ್ಷ ರಾಮಕೃಷ್ಣೇಗೌಡ, ವಕೀಲ ಎಸ್.ಆರ್.ನವೀನ್‌ಕುಮಾರ್, ಕೆರೆ ಸಮಿತಿ ಉಪಾಧ್ಯಕ್ಷ ಎಸ್ ಎನ್ ಜವರೇಗೌಡ, ಕಾರ್ಯದರ್ಶಿ ಮಂಜೇಗೌಡ,ಕೆರೆ ಅಭಿವೃದ್ದಿ ಸಮಿತಿ ಸದಸ್ಯ ಪ್ರಭುದೇವೇಗೌಡ, ಸತೀಶ್,ಗಣೇಶ್ ಎಸ್.ಎನ್, ಉದಯ್, ಶಂಕರ್, ನಾಗರಾಜು, ಅಶೋಕ್, ಶಿವಲಿಂಗೇಗೌಡ,ಮಹದೇವ್ ಎಸ್ ಎನ್, ನವೀನ್ ಕುಮಾರ್, ಮೋಹನ್,ಮೇಲ್ವಿಚಾರಕರಾದ ಶಿಲ್ಪಾ, ಮಂಜುನಾಥ್, ಟಿ.ಎನ್ ರಘು, ಸೇವಾಪ್ರತಿನಿಧಿಗಳು ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
-ಶ್ರೀನಿವಾಸ್ ಆರ್. ಕೆ.ಆರ್.ಪೇಟೆ