ಕೆ.ಆರ್.ಪೇಟೆ;ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ತಾಲೂಕು ಒಕ್ಕಲಿಗ ಮಹಿಳಾ ಸಂಘ ಆಗ್ರಹ

ಕೆ.ಆರ್.ಪೇಟೆ;ಮಹಿಳೆಯರು ಮತ್ತು ಒಕ್ಕಲಿಗ ಸಮುದಾಯದ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿರುವ ಶಾಸಕ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ತಾಲೂಕು ಒಕ್ಕಲಿಗ ಮಹಿಳಾ ಸಂಘ ಆಗ್ರಹಿಸಿದೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ತಾಲೂಕು ಒಕ್ಕಲಿಗ ಸಂಘಟನೆಯ ಒಕ್ಕೂಟದ ಮಹಿಳಾ ಘಟಕದ ಸದಸ್ಯರು ಶಾಸಕ ಮುನಿರತ್ನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲಿ ಮಹಿಳೆಯರನ್ನು ಗೌರವಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸಿದ್ದಾರೆ ಎಂದು ನಂಬಿರುವ ದೇಶ ನಮ್ಮದು. ಒಕ್ಕಲಿಗ ಸಮುದಾಯ ನಾಡಿಗೆ ಅನ್ನ ನೀಡುವ ಸಮುದಾಯ.ಎಲ್ಲಾ ಜಾತಿ, ಧರ್ಮ ಮತ್ತು ಸಂಸ್ಕೃತಿಯನ್ನು ಗೌರವಿಸಿ ನಡೆಯುತ್ತಿರುವರರು ಒಕ್ಕಲಿಗ ಸಮುದಾಯದ ಜನ.ಶಾಂತಿ ಮತ್ತು ಸಹಬಾಳ್ವೆಯಿಂದ ಬದುಕುತ್ತಿರುವ ಒಕ್ಕಲಿಗ ಸಮಾಜವನ್ನು ಶಾಸಕ ಮುನಿರತ್ನ ಅವಹೇಳನಕಾರಿಯಾಗಿ ನಿಂದಿಸಿದ್ದಾನೆ.ಜನಾಂಗ ನಿಂದನೆ ಮಾಡಿರುವ ಮುನಿರತ್ನ ಶಾಸಕನಾಗಿರುಲು ಯೋಗ್ಯನಲ್ಲ.ರಾಜ್ಯ ವಿದಾನ ಸಭೆಯ ಸ್ಪೀಕರ್ ಅವರು ತಕ್ಷಣವೇ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು.ಮುನಿರತ್ನ ಅವರ ಪರ ನಿಲ್ಲುವ ಬದಲು ರಾಜ್ಯ ಬಿಜೆಪಿ ಮುಖಂಡರು ಪಕ್ಷದ ಹಿತದೃಷ್ಠಿಯಿಂದ ಮುನಿರತ್ನ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಒಕ್ಕಲಿಗ ಮಹಿಳಾ ಸಂಘಟನೆಯ ಕಾರ್ಯಕರ್ತೆಯರು ಆಗ್ರಹಿಸಿದರು.

ಅಭಿನಂದನೆ:

ಪುರಸಭಾ ಚುನಾವಣೆಯಲ್ಲಿ ಜಯಗಳಿಸಿ ಪಟ್ಟಣ ಪುರಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪಂಕಜ ಪ್ರಕಾಶ್ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂಧಿಸಲಾಯಿತು.ಬಹಳ ವರ್ಷಗಳ ಅನಂತರ ಒಕ್ಕಲಿಗ ಸಮುದಾಯದ ಮಹಿಳೆಯೊಬ್ಬರು ಪುರಸಬೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಮುದಾಯ ಮತ್ತು ಸ್ತ್ರೀ ಕುಲಕ್ಕೆ ಸಂತಸದ ವಿಷಯ.ನೂತನ ಅಧ್ಯಕ್ಷರು ತಮ್ಮ ಕಾರ್ಯವೈಕರಿಯ ಮೂಲಕ ಮಹಿಳಾ ಸಮುದಾಯದ ಘನತೆ ಮತ್ತು ಗೌರವಗಳನ್ನು ಹೆಚ್ಚಿಸಲಿ ಎಂದು ಒಕ್ಕಲಿಗ ಮಹಿಳಾ ಸಂಘದ ಪದಾಧಿಕಾರಿಗಳು ಆಶಿಸಿ ಪುರಸಭೆಯ ನೂತನ ಅಧ್ಯಕ್ಷೆ ಪಂಕಜ ಪ್ರಕಾಶ್ ಅವರನ್ನು ಅಭಿನಂಧಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘಗಳ ಒಕ್ಕೂಟದ ಅಧ್ಯಕ್ಷ ಎನ್.ಎಸ್.ಗಂಗಾಧರ್, ತಾಲೂಕು ಒಕ್ಕಲಿಗ ಮಹಿಳಾ ಸಂಘನೆಯ ಮುಖಂಡರಾದ ರುಕ್ಮಿಣಿಚಂದ್ರು, ನೇತ್ರಾ, ಮಂಜುಳಮ್ಮ, ಲಕ್ಷ್ಮಮ್ಮ, ಅಶ್ವಥ್ ಲಕ್ಷ್ಮೀ, , ಐಶ್ವರ್ಯ, ಜಯಮ್ಮ, ತಾಲೂಕು ಒಕ್ಕಲಿಗರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಬೋರೇಗೌಡ, ನಾಟನಹಳ್ಳಿ ಗಂಗಾಧರ್ ಮತ್ತಿತರರಿದ್ದರು.

————–—ಶ್ರೀನಿವಾಸ್ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?