ಕೆ.ಆರ್.ಪೇಟೆ-ಸಹಕಾರಿ ಸಂಘಗಳು ಆರಂಭದಲ್ಲಿ ಕೇವಲ ಕೃಷಿಯೊಂದಿಗೆ ಸಂಬoಧ ಹೊಂದಿದ್ದವು.ಈ ಪರಿಕಲ್ಪನೆಯು ಈಗ ಇತರ ಕ್ಷೇತ್ರಗಳಿಗೆ ಹರಡಿದೆ.ಇದರಿಂದಾಗಿ ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕಾರಿಗಳ ಮಹತ್ವವನ್ನು ಹೆಚ್ಚಿಸಿದೆ ಎಂದು ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರು ಹೇಳಿದರು.
ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 75ನೇ ವರ್ಷದ ವಜ್ರ ಮಹೋತ್ಸವ ಹಾಗೂ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಜ್ಯೋತಿ ಬೆಳೆಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಹಕಾರ ಸಪ್ತಾಹ ಈ ಕಾರ್ಯಕ್ರಮವು ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಹರ್ಲಾಲ್ ನೆಹರು ಅವರ ಹುಟ್ಟು ಹಬ್ಬದ ದಿನದಿಂದ ಒಂದು ವಾರಗಳ ಕಾಲ ಇಡೀ ದೇಶಾದ್ಯಂತ ಆಚರಣೆ ಆಚರಣೆ ಮಾಡಲಾಗುತ್ತಿದೆ. ಏಕೆಂದರೆ ಸಹಕಾರ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ ದೇಶದ ಪ್ರಥಮ ಪ್ರಧಾನಿ ನೆಹರು ಅವರ ದೂರದೃಷ್ಠಿಯ ಪ್ರತಿಫಲವಾಗಿ ಇಂದು ಸಹಕಾರ ಕ್ಷೇತ್ರವು ಸಮೃದ್ದಿಯಾಗಿ ಬೆಳೆದಿದೆ.ಇನ್ನೂ ಹೆಚ್ಚು ಸಮೃದ್ದಿಯಾಗಿ ಬೆಳೆಯಬೇಕಾದರೆ ರಾಜಕೀಯ ಮುಕ್ತವಾಗಿರಬೇಕು ಎಂದು ಹೇಳಿದರು.
ರಾಜಕೀಯಕ್ಕಿಂತ ಸಹಕಾರ ಕ್ಷೇತ್ರ ಬಲಿಷ್ಠವಾಗಿದೆ.ಸಹಕಾರ ಕ್ಷೇತ್ರದಲ್ಲಿ ನಮ್ಮ ರಾಜಕಾರಣ ಬೆರೆಸಿದ ಕಾರಣ ಸ್ವಲ್ಪ ತನ್ನತನವನ್ನು ಕಳೆದುಕೊಂಡಿದೆ.ರೈತರಿಗೆ ಹಾಗೂ ಮಹಿಳಾ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸರ್ಕಾರ 3 ರಿಂದ 5 ಲಕ್ಷದ ವರೆಗೆ ಸಾಲ ನೀಡುತ್ತಿದೆ.ಮಂಡ್ಯ ಜಿಲ್ಲೆಯಲ್ಲಿ ಸುಮಾರು 1000ಕೋಟಿಯಷ್ಟು ಸಾಲವನ್ನು ರೈತರಿಗೆ ನೀಡಲಾಗಿದೆ ಎಂದರು.
ಸ್ಥಳೀಯ ರೈತರಿಗೆ ಕೃಷಿ ವಿಚಾರವಾಗಿ ಯಾವುದೇ ಸಮಸ್ಯೆ ಉಂಟಾಗದoತೆ ಮಾಡಬೇಕು. ಈ ಸಹಕಾರ ಸಂಘವನ್ನು ಹೆಚ್ಚು ಶಕ್ತಿಯುತವಾಗಿ ಬೆಳೆಸಿಕೊಂಡು ಹೋಗಬೇಕು. ಸರ್ಕಾರ ಹಲವಾರು ಯೋಜನೆಗಳನ್ನ ಜಾರಿಗೆ ತಂದಿದೆ5 ಗ್ಯಾರಂಟಿ ಕೊಟ್ಟಿದ್ದೆವೆ.ಕಳೆದ ವರ್ಷ ಬರಗಾಲದಿಂದ ಬೆಳೆಯಾಗಿರಲಿಲ್ಲ.
ಈ ವರ್ಷ ರೈತರು 87ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಲವಾರು ಬೆಳೆ ಬೆಳೆದಿದ್ದು ಒಂದುವರೆ ಲಕ್ಷ ಹೆಕ್ಟೇರ್ ಮಳೆಯಿಂದ ನಷ್ಟ ಆಗಿದೆ.ನಮ್ಮ ಜಿಲ್ಲೆಯಲ್ಲಿ ರಾಗಿ, ಉರುಳಿ, ಭತ್ತ, ಕಬ್ಬು ಯಥೇಚ್ಛವಾಗಿ ಬೆಳೆದಿದ್ದೇವೆ. ಸುಮಾರು 2130 ಕೋಟಿ ರೂ ಬೆಳೆವಿಮೆ ಮಾಡಿದೆ. ಸರ್ಕಾರದಿಂದ ರೈತರಿಗೆ ಸಾಲ ಸಿಗುತ್ತದೆ. ಹಲವಾರು ಸಬ್ಸಿಡಿ ಕೊಟ್ಟಿದ್ದೇವೆ.ರೈತರು ಆಧುನಿಕ ಕೃಷಿ ಅಳವಡಿಸಿಕೊಳ್ಳಬೇಕು ಇದರಿಂದ ನಿಮ್ಮ ವ್ಯವಸಾಯ ಖರ್ಚು ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಸೇರಿದಂತೆ ಭಾರತ ದೇಶಾಧ್ಯಂತ ಸಹಕಾರ ಚಳುವಳಿಯು ವಿಸ್ತರಿಸಿದ್ದು ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯವಾಗಿ ಬೇಕಾದ ಬಿತ್ತನೆ ಬೀಜಗಳು,ರಾಸಾಯನಿಕ ಗೊಬ್ಬರಗಳು ಹಾಗೂ ಔಷಧಿಗಳನ್ನು ರಿಯಾಯಿತಿ ದರದಲ್ಲಿ ಸಕಾಲಕ್ಕೆ ನೀಡುತ್ತಿವೆ. ಕೃಷಿ ಚಟುವಟಿಕೆಗಳನ್ನು ನಡೆಸಲು ಬೇಕಾದ ಸಾಲಸೌಲಭ್ಯವನ್ನು ಕಡಿಮೆ ಬಡ್ಡಿ ದರದಲ್ಲಿ ನೀಡಿ ರಾಷ್ಟ್ರೀಕೃತ ಬ್ಯಾಂಕುಗಳು ಮಾಡದ ಕೆಲಸವನ್ನು ಸಹಕಾರ ಸಂಘಗಳು ಮಾಡುತ್ತಾ ರೈತರ ಬೆನ್ನುಲುಬಾಗಿ ಸದೃಡವಾಗಿ ನಿಂತಿವೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಹೆಚ್.ಟಿ.ಮಂಜು, ಭಾರತದ ಸಹಕಾರ ಚಳವಳಿಯ ಆರೋಗ್ಯಕರ ಬೆಳವಣಿಗೆಗೆ ಹಲವಾರು ನಾಯಕರು ಶ್ರಮಿಸಿದ್ದಾರೆ. ತಮ್ಮ ತನು, ಮನವನ್ನು ಸಮರ್ಪಿಸಿದ್ದಾರೆ. ಅಂತಹವರಲ್ಲಿ ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಪಂಡಿತ ಜವಹರಲಾಲ್ ನೆಹರೂ ಅವರು ಅಗ್ರಗಣ್ಯರೆನಿಸಿಕೊಂಡಿದ್ದಾರೆ. ಸಹಕಾರ ತತ್ವ ಆಚರಣೆಯಲ್ಲಿ ನೆಹರೂ ಅವರಿಗೆ ಅಪಾರವಾದ ನಂಬಿಕೆ ಮತ್ತು ನಿಷ್ಠೆ ಇದ್ದಿತು. ಆದ್ದರಿಂದ ಅವರು ಭಾರತವನ್ನು ಆರ್ಥಿಕವಾಗಿ ಸದೃಢಗೊಳಿಸಲು ಸಹಕಾರ ತತ್ವದ ಮೊರೆ ಹೋದರು. ರಾಷ್ಟ್ರದಲ್ಲಿ ಸಹಕಾರ ಚಳವಳಿ ಪ್ರಗತಿಪಥದಲ್ಲಿ ಸಾಗಲು ಕ್ರಮಗಳನ್ನು ಕೈಗೊಂಡರು. ಅವರ ದೂರದೃಷ್ಟಿಯ ಫಲದಿಂದ ಇಂದು 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಆಚರಣೆ ಮಾಡುತಿದ್ದೆವೆ ಎಂದು ಹೇಳಿದರು.
ಅಕ್ಕಿಹೆಬ್ಬಾಳು ಕೃಷಿ ಪತ್ತಿನ ಸಹಕರ ಸಂಘದ ಅಧ್ಯಕ್ಷ ಎಸ್.ಆರ್.ನವೀನ್ ಕುಮಾರ್ ಮಾತನಾಡಿ, ಗ್ರಾಮೀಣ ಜನರು ಸ್ವಾಭಿಮಾನದ ಬದುಕು ಕಾಣಲು ಸಹಕಾರ ಕ್ಷೇತ್ರದಿಂದ ಸಾಧ್ಯವಾಗಿದೆ. ಹಿರಿಯರ ತ್ಯಾಗ, ನಿಸ್ವಾರ್ಥ ಸೇವೆಯಿಂದ ಸಹಕಾರ ಕ್ಷೇತ್ರ ಎತ್ತರಕ್ಕೆ ಬೆಳೆದು ನಿಂತಿದೆ. ಸಮಾಜದ ಆರ್ಥಿಕ ಸಬಲೀಕರಣಕ್ಕೆ ಕಾರಣವಾಗಿರುವ ಸಹಕಾರ ಕ್ಷೇತ್ರದಲ್ಲಿ ದುಡಿಯುವವರ ಸಮಸ್ಯೆಗೂ ಸ್ಪಂದಿಸಬೇಕಾಗಿದೆ. ಸಹಕಾರ ಸಂಘಗಳ ನೌಕರರ ಪ್ರೋತ್ಸಾಹಧನವನ್ನು ಸರ್ಕಾರ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.
ಅಕ್ಕಿಹೆಬ್ಬಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕರ ಸಂಘದ ಅಧ್ಯಕ್ಷ ಎಸ್.ಆರ್. ನವೀನ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಘದ ವಜ್ರ ಮಹೋತ್ಸವದ ಅಂಗವಾಗಿ ಮೈಸೂರಿನ ಸುಯೋಗ್ ಮಂಡ್ಯದ ಜೈನ್ ಆಸ್ಪತ್ರೆಯ ವತಿಯಿಂದ ಸಾರ್ವಜನಿಕರಿಗೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಮೈಷುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಂಡ್ಯ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಕಾಡೇನಹಳ್ಳಿ ರಾಮಚಂದ್ರು, ಪಿ.ಎಲ್.ಡಿ.ಬ್ಯಾಂಕ್ ಮಾಜಿ ನಿರ್ದೇಶಕರು ಹಾಗೂ ಹಿರಿಯ ಸಹಕಾರಿ ಧುರೀಣರಾದ ಅಕ್ಕಿಹೆಬ್ಬಾಳು ಎ.ಆರ್.ರಘು, ಅಕ್ಕಿಹೆಬ್ಬಾಳು ಕೃಷಿ ಪತ್ತಿನ ಸಹಕರ ಸಂಘದ ಅಧ್ಯಕ್ಷ ಎಸ್.ಆರ್. ನವೀನ್ಕುಮಾರ್, ಉಪಾಧ್ಯಕ್ಷ ಎ.ಜೆ.ಕುಮಾರ್, ಎಂ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಅಶೋಕ್, ಜಿ.ಪಂ.ಮಾಜಿ ಸದಸ್ಯ ಬಿ.ನಾಗೇಂದ್ರಕುಮಾರ್, ವಿ.ಮಂಜೇಗೌಡ, ತಾಲ್ಲೂಕು ಕಾಂಗ್ರೆಸ್ ಉಸ್ತುವಾರಿ ಚಿನಕುರಳಿ ರಮೇಶ್, ಟಿಎಪಿಸಿಎಂಸ್ ಬಿ.ಎಲ್.ದೇವರಾಜು, ನಿರ್ದೇಶಕ ಕೊರಟೀಕೆರೆ ದಿನೇಶ್, ಬೊಮ್ಮೇನಹಳ್ಳಿ ಮಂಜುನಾಥ್, ಶಶಿಧರ್ ಸಂಗಾಪುರ, ರಾಜನಾಯಕ್, ಅಕ್ಕಿಹೆಬ್ಬಾಳು ಗ್ರಾಪಂ ಅಧ್ಯಕ್ಷ ಹರೀಶ್, ಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕಿ ಆರ್.ಜೆ.ರೂಪಶ್ರೀ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕಿ ಪ್ರಮೋದಿನಿ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಆದಿಲ್ ಪಾಷ, ಆಲಂಬಾಡಿಕಾವಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎ.ಎಂ.ಸoಜೀವಪ್ಪ, ಸಂಘದ ಉಪಾಧ್ಯಕ್ಷ ಎ.ಜೆ.ಕುಮಾರ್, ನಿರ್ದೇಶಕರುಗಳಾದ ಕುಮಾರ್, ಉದಯಕುಮಾರ್, ಎಲ್.ಚಂದ್ರಪ್ಪ, ಕೋಮಲಾ, ಲಲಿತಾ, ಎಸ್.ಎಂ.ರಾಮೇಗೌಡ, ಟಿ.ಎನ್.ರಾಜೇಶ್, ನಂಜುoಡಯ್ಯ, ಕೆ.ಹರೀಶ್, ಸಂಘದ ಸಿಇಓ ಎಂ.ಎನ್.ಸತೀಶ್, ಸಿಬ್ಬಂದಿಗಳಾದ ಮಂಜುನಾಥ್, ಎ.ಎಸ್.ಶ್ರೀಧರ್, ಭೈರೇಗೌಡ ಸೇರಿದಂತೆ ತಾಲ್ಲೂಕಿನ ವಿವಿಧ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರುಗಳು ಸೇರಿದಂತೆ ಸಾವಿರಾರು ಮಂದಿ ಸಹಕಾರಿ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
——-——–ಶ್ರೀನಿವಾಸ್ ಕೆ.ಆರ್ ಪೇಟೆ