ಕೆ.ಆರ್.ಪೇಟೆ-ಕಿಡಿಗೇಡಿಗಳಿಂದ-ಅಕ್ಕಿಹೆಬ್ಬಾಳು-ಪ್ರಾಥಮಿಕ-ಶಾಲೆಯ- ಕೈತೋಟ-ನಾಶ-ಅಲಂಕಾರಿಕ-ಔಷಧೀಯ-ಸಸ್ಯಗಳನ್ನು-ಬುಡಸಮೇತ-ಕಿತ್ತು-ವಿಕೃತಿ-ಮೆರೆದ-ಕಿಡಿಗೇಡಿಗಳು

ಕೆ.ಆರ್.ಪೇಟೆ : ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಿರ್ಮಾಣ ಮಾಡಿರುವ ಶಾಲಾ ಕೈತೋಟದಲ್ಲಿ ಬೆಳೆದಿದ್ದ ಔಷಧೀಯ ಸಸ್ಯಗಳು ಸೇರಿದಂತೆ, ಆಕರ್ಷಣೀಯ ಅಲಂಕಾರಿಕ ಗಿಡಗಳನ್ನು ಕಿಡಿಗೇಡಿಗಳು ಕಿತ್ತುಹಾಕಿ ನಾಶ ಮಾಡುವ ಶಾಲಾ ಪರಿಸರವನ್ನು ಹಾಳು ಮಾಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.


ಅಕ್ಕಿಹೆಬ್ಬಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಾಲಾ ಅಭಿವೃದ್ಧಿ ಸಂಸ್ಥೆ, ಪೋಷಕರು, ಗ್ರಾಮದ ಮುಖಂಡರು, ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳ ಸಹಕಾರದಿಂದ ಸುಂದರ ಕೈತೋಟವನ್ನು ನಿರ್ಮಾಣ ಮಾಡಲಾಗಿತ್ತು. ಹೂವಿನ ಗಿಡಗಳು, ಸರ್ಕಾರಿ ಸಸಿಗಳು ಜೊತೆಯಲ್ಲಿ ಔಷಧೀಯ ಸಸಿಗಳನ್ನು ಸೇರಿದ ಹಾಗೆ ಅನೇಕ ರೀತಿಯ ಗಿಡಗಳನ್ನು ನಿರ್ಮಾಣ ಮಾಡಲಾಗಿತ್ತು.

ಫೆ.16 ರ ಭಾನುವಾರ ರಾತ್ರಿ ಕೈ ತೋಟಕ್ಕೆ ನುಗ್ಗಿರುವ ಕಿಡಿಗೇಡಿಗಳು ಸುಂದರವಾಗಿ ಬೆಳೆದಿದ್ದ ಬಣ್ಣ ಬಣ್ಣದ ಅಲಂಕಾರಿಕ ಗಿಡಗಳನ್ನು ಬುಡ ಸಮೇತ ಕಿತ್ತು ಹಾಳು ಮಾಡಿದ್ದಾರೆ. ಶಾಲೆ ಮುಗಿದ ನಂತರ ಶಾಲಾ ಆವರಣದಲ್ಲಿ ಕೆಲ ಕಿಡಿಗೇಡಿಗಳು ವಾಲಿಬಾಲ್ ಮತ್ತು ಇತರೆ ಕ್ರೀಡೆಗಳನ್ನು ಮಾಡಲು ಆಟದ ಮೈದಾನಕ್ಕೆ ಬರುತ್ತಾರೆ.

ಶಾಲಾ ರಜೆಯ ದಿನವಂತೂ ಶಾಲಾ ಮೈದಾನ ಅವರದ್ದೇ ಆಗಿರುತ್ತದೆ. ಶಾಲಾ ರಜೆಯ ದಿನಗಳಲ್ಲಿ ನೀರಿನ ನಲ್ಲಿಗಳನ್ನು ಆಫ್ ಮಾಡಿ ಹೋಗಿರುತ್ತೇವೆ. ಆಟ ಆಡಲು ಬಂದಿರುವ ಕಿಡಿಗೇಡಿಗಳು ನೀರು ಸಿಗದೇ ಇರುವ ಸಂದರ್ಭದಲ್ಲಿ ನಲ್ಲಿಗಳನ್ನು ಮುರಿದು ಹಾಕುವ ಜೊತೆಯಲ್ಲಿ ಶಾಲೆಯ ಸುಂದರ ಪರಿಸರವನ್ನು ಕೂಡ ಹಾಳು ಮಾಡಿ ಹೋಗಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕ ರವಿ ಅವರು ತಿಳಿಸಿದ್ದಾರೆ.


ಶಾಲೆಯ ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಲೋಲಾಕ್ಷಿಜಗದೀಶ್ ದಾನಿಗಳ ಸಹಕಾರದಿಂದ ಕೈತೋಟದಲ್ಲಿ ಕಟ್ಟೆಗಳನ್ನು ಕಟ್ಟಿಸಿ ಪಾರ್ಕ್ ರೀತಿ ನಿರ್ಮಾಣ ಮಾಡಲಾಗಿತ್ತು. ಆ ಸಂಪೂರ್ಣ ಕಟ್ಟೆಯನ್ನು ಮುರಿದು ಸುಂದರ ಪರಿಸರವನ್ನು ಹಾಳು ಮಾಡಿ ಹೋಗಿದ್ದಾರೆ.

ಇದರ ಜೊತೆಯಲ್ಲಿ ವಿದ್ಯಾರ್ಥಿಗಳಿಗೆ ಎಂದು ನಿರ್ಮಾಣ ಮಾಡಿದ್ದ ಕುಡಿಯುವ ನೀರಿನ ಘಟಕ ಮತ್ತು ತಟ್ಟೆ ತೊಳೆಯುವ ಘಟಕವನ್ನು ಹಿಂದೆ ಸಂಪೂರ್ಣವಾಗಿ ನಾಶ ಮಾಡಿ ಹೋಗಿದ್ದಾರೆ ಪರಿಸರವನ್ನು ನಾಶ ಮಾಡಿ ಹೋಗಿರುವ ಕಿಡಿಗೇಡಿಗಳನ್ನು ಪೋಲಿಸ್ ಇಲಾಖೆ ಪತ್ತೆ ಹಚ್ಚಿ ಅವರಿಗೆ ಸರಿಯಾದ ಶಿಕ್ಷೆಯನ್ನು ನೀಡಬೇಕು. ಇದರ ಜೊತೆಯಲ್ಲಿ ಸರ್ಕಾರವು ಸರ್ಕಾರಿ ಸಂಸ್ಥೆಯನ್ನು ಕಾಪಾಡಲು ಕಾವಲುಗಾರನನ್ನು ನೇಮಕ ಮಾಡಬೇಕು ಶಾಲೆಯ ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಲೋಲಾಕ್ಷಿಜಗದೀಶ್ ಅವರು ಮನವಿ ಮಾಡಿದ್ದಾರೆ.

  • ಶ್ರೀನಿವಾಸ , ಕೆ.ಆರ್.ಪೇಟೆ

Leave a Reply

Your email address will not be published. Required fields are marked *

× How can I help you?