ಕೆ.ಆರ್.ಪೇಟೆ: ಅಂಗವೈಕಲ್ಯ ಹೊಂದಿದವರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಸರ್ಕಾರ ಮೂರು ಚಕ್ರದ ವಾಹನವನ್ನು ನೀಡುತ್ತಿದ್ದು ಇದನ್ನು ಅರ್ಹರು ಅರ್ಜಿ ಸಲ್ಲಿಸಿ ಪಡೆದುಕೊಂಡು ಸದುಪಯೋಗ ಪಡೆದುಕೊಂಡು ಇತರರಂತೆ ಬದುಕಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಶಾಸಕ ಹೆಚ್.ಟಿ ಮಂಜು ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯತ್ ಆವರಣದಲ್ಲಿ ತಾ.ಪಂ.ಅನಿರ್ಬಂಧಿತ ಅನುದಾನದಡಿಯಲ್ಲಿ ವಿಕಲ ಚೇತನರಿಗೆ ಶಾಸಕ ಹೆಚ್.ಟಿ.ಮಂಜು ತ್ರಿಚಕ್ರ ಬೈಕ್ ವಾಹನಗಳನ್ನು ಸಾಂಕೇತಿಕವಾಗಿ ಮೂರು ಚಕ್ರದ ವಿದ್ಯುತ್ ಚಾಲಿತ ವಾಹನ ವಿತರಿಸಿ ಮಾತನಾಡಿದರು.ಅಂಗವಿಕಲರ ಅನುದಾನದಡಿ ಈ ಬಾರಿ 4 ವಾಹನಗಳನ್ನು ವಿತರಣೆ ಮಾಡಲಾಗಿದೆ. ಇದರ ಸದುಪಯೋಗವನ್ನು ಫಲಾನುಭವಿಗಳೇ ಪಡೆದುಕೊಂಡಿದ್ದಾರೆ ಅವರಿಗೂ ಸಹ ಸಾಮಾನ್ಯ ಜನರಂತೆ ಓಡಾಡಲು ಅನುಕೂಲವಾಗಿದೆ.
ಅಂಗವಿಕಲರ ಮೇಲೆ ನಮಗೆ ಕರುಣೆ ಇರಬಾರದು ಬದಲಾಗಿ ನಾವು ಅವರಿಗೆ ಧೈರ್ಯ ತುಂಬುವ ಮೂಲಕ ಸ್ವಂತವಾಗಿ ದುಡಿಮೆ ಮಾಡುವ ಶಕ್ತಿ ನೀಡಬೇಕೆಂಬ ದೃಷ್ಟಿಯಲ್ಲಿ ಸರ್ಕಾರ ವಾಹನಗಳನ್ನು ನೀಡಿದ್ದೇವೆ ಈ ಯೋಜನೇಯನ್ನ ಸದುಪಯೋಗ ಪಡೆದು ಮುಖ್ಯ ವಾಹಿನಿಗೆ ಬರಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುಷ್ಮಾ,ಸಹಾಯಕ ನಿರ್ದೇಶಕ ಡಾ. ನರಸಿಂಹರಾಜು,ಯೋಜನಾ ಅಧಿಕಾರಿ ಶ್ರೀನಿವಾಸ್, ಪುರಸಭಾ ಸದಸ್ಯರಾದ ಗಿರೀಶ್, ದಿನೇಶ್, ಮಾಜಿ ಸದಸ್ಯರಾದ ಹೇಮಂತ್ ಕುಮಾರ್, ಕೋಳಿ ನಾಗರಾಜು,ತಾ.ಪಂ.ಮಾಜಿ ಸದಸ್ಯ ಮಾಂಬಳ್ಳಿ ಅಶೋಕ್, ಹೋಬಳಿ ಜೆಡಿಎಸ್ ಅಧ್ಯಕ್ಷ ಸಂತೇಬಾಚಹಳ್ಳಿ ಸಾಮಿಲ್ ರವಿಕುಮಾರ್, ತಾಲ್ಲೂಕು ವಿಕಲ ಚೇತನರ ಸಮನಯ್ವಾಧಿಕಾರಿ ಬಸವರಾಜು, ಶಾಸಕರ ಅಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
- ಶ್ರೀನಿವಾಸ್ ಆರ್.