ಕೆ.ಆರ್.ಪೇಟೆ-ಪೌಷ್ಟಿಕ ಹಾಗೂ ಆಹಾರ ತಜ್ಞೆ ಎಂ.ಕೆ. ಮೋನಿಕಾ ಅವರಿಗೆ ಮೈಸೂರಿನ ಜೆ.ಎಸ್.ಎಸ್.ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ವತಿಯಿಂದ ಜೀವ ವಿಜ್ಞಾನ ಪಿ.ಎಚ್.ಡಿ ಪದವಿ ದೊರೆತಿದೆ.
ಎಂ.ಕೆ. ಮೋನಿಕಾ ಅವರು ಜೀವ ವಿಜ್ಞಾನ ವಿಭಾಗದ ಜೈವಿಕ ರಸಾಯನಶಾಸ್ತ್ರದಲ್ಲಿ ಎಂ.ಎಸ್.ಸಿ ಪದವಿ ಹಾಗೂ ಕ್ಲಿನಿಕಲ್ ನ್ಯೂಟ್ರಿಷಿಯನ್ ಮತ್ತು ಡಯಟ್ ಯಿನ್ ನಲ್ಲಿ ಎಂ. ಎಸ್. ಸಿ ಪದವಿ ಪಡೆದಿದ್ದಾರೆ.
ಜೆ.ಎಎಸ್.ಎಸ್. ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಜೀವರಸಾಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಜೆ. ಎಂ. ಸಿದ್ದೇಶ್ ಅವರ ಮುಖ್ಯ ಮಾರ್ಗದರ್ಶನ ಹಾಗೂ ಸಹಾಯಕ ಪ್ರಾಧ್ಯಾಪಕರಾದ ಡಾ. ರಘುರಾಮ್ ಆಚಾರ್ ಮತ್ತು ಡಾ. ಹರೀಶ್‌ಪ್ರಶಾಂತ್ ಕೆ .ವಿ. ಪ್ರಧಾನ ವಿಜ್ಞಾನಿ ಸಿ ಎಫ್ ಟಿ ಆರ್ ಐ ಇವರ ಸಹ ಮಾರ್ಗದರ್ಶನದಲ್ಲಿ ಜೀವ ವಿಜ್ಞಾನದ ಜೀವ ರಾಸಾಯನಿಕ ಶಾಸ್ತ್ರಕ್ಕೆ ಸಂಬoಧಿಸಿದ ‘ವ್ಯಾಲಿಡೇಷನ್ ಆಫ್ ಬಯೋ ಆಕ್ಟಿವ್ ಮಾಲಿಕುಲಸ್ ಫ್ರಮ್ ಆರ್ಟೊಕಾರ್ಪಸ್ ಅಲ್ಟಿಲಿಸ್ ಎಸಿಇ ಇನ್ನಿಬೀಟರ್ಸ್ ಫ್ರಮ್ ದಿ ಟ್ರೀಟ್ಮೆಂಟ್ ಆಫ್ ಹೈಪರ್ ತೆನ್ಶನ್ ಯೂಸಿಂಗ್ ಇನ್ ಸಿಲಿಕೋ ಇನ್ ವಿಟ್ರೋ ಅಂಡ್ ಇನ್ ವಿ ವೋ ಮಾಡೆಲ್ ಸಿಸ್ಟಮ್ಸ್ ಎಂಬ ವಿಷಯದ ಮೇಲೆ ನಡೆಸಿದ ಮಹಾಪ್ರಬಂಧಕ್ಕೆ ಜೀವ ವಿಜ್ಞಾನ ವಿಷಯದ ಮೇಲೆ ಪಿ.ಎಚ್.ಡಿ ಪದವಿ ನೀಡಲಾಗಿದೆ.
ಎಂ.ಕೆ.ಮೋನಿಕಾ ಅವರು ನಿವೃತ್ತ ಜಿಲ್ಲಾ ಲೋಕ ಶಿಕ್ಷಣಾಧಿಕಾರಿ ಹಾಗೂ ಪ್ರಾಂಶುಪಾಲ ಡಾ.ಕೆ.ಕಾಳೇಗೌಡ ಹಾಗೂ ಪ್ರಗತಿ ಎಜುಕೇಶನ್ ಸಂಸ್ಥೆಯ ಶೈಲಜಾ ಅವರ ಪುತ್ರಿಯಾಗಿದ್ದಾರೆ.ಮೋನಿಕಾ ರವರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.
———————ಶ್ರೀನಿವಾಸ್ ಕೆ ಆರ್ ಪೇಟೆ