ಕೆ.ಆರ್.ಪೇಟೆ- ಪುರಸಭೆಯ-ಅಧ್ಯಕ್ಷೆ-ಪಂಕಜಾಪ್ರಕಾಶ್-ಅಧ್ಯಕ್ಷತೆಯಲ್ಲಿ ಪುರಸಭೆ-ಬಜೆಟ್ -ಪೂರ್ವಸಭೆ


ಕೆ.ಆರ್.ಪೇಟೆ,ಫೆ.: ಕೆ.ಆರ್.ಪೇಟೆ ಪುರಸಭೆಯ 2025-26ನೇ ಸಾಲಿನ ಬಜೆಟ್ ಮಂಡನಾ ಸಭೆಯ ಪೂರ್ವಭಾವಿ ಸಭೆಯು ಶಹರಿ ರೋಜ್‌ಗಾರ್ ಯೋಜನಾ ಭವನದಲ್ಲಿ ಪುರಸಭೆಯ ಅಧ್ಯಕ್ಷೆ ಪಂಕಜಾಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆಯಿತು.


ಯಾವುದೇ ಅಭಿವೃದ್ಧಿ ಕೆಲಸ ಕರ‍್ಯಗಳನ್ನು ಮಾಡದೇ ಕೇವಲ ಸಭೆ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು, ಪುರಸಭಾ ಆಯ ವ್ಯಯ ಸಭೆಗೆ ಹಾಲಿ ಕೆಲವು ಪುರಸಭಾ ಸದಸ್ಯರು ಹಾಗೂ ಮುಖಂಡರುಗಳು ಗೈರಾಗಿದ್ದರಿಂದ ಸಭೆಯು ಬಹುತೇಕ ವಿಫಲವಾಯಿತು.


ಪುರಸಭಾ ಅಧ್ಯಕ್ಷೆ ಪಂಕಜಾಪ್ರಕಾಶ್ ಅವರ ಅಕ್ಷೆಕ್ಷತೆಯಲ್ಲಿ ನಡೆದ ಸಭೆಯು ವಿಫಲವಾಗಿದ್ದು ಅದಕ್ಕೆ ಕಳೆದ ಐದು ವರ್ಷಗಳಿಂದ ಆಯವ್ಯಯ ಸಭೆಯಲ್ಲಿ ಮಂಡಿಸಲಾಗಿದ್ದ ಯಾವುದೇ ಅಭಿವೃದ್ಧಿ ಕೆಲಸಗಳಾಗದೆ ಇರುವುದರಿಂದ ಹಾಗೂ ಕಳೆದ ಸಾಲಿನ ಆಯವ್ಯಯ ಸಭೆಯಲ್ಲಿ ಮಂಡಿಸಿದಂತಹ, ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ಆಗಿಲ್ಲ. ಕಳೆದ ಬಜೆಟ್‌ನಲ್ಲಿ ಸೇರಿದ್ದ ಒಂದೂ ಕೆಲಸವನ್ನು ಪುರೆಸಭೆಯವರು ನಿರ್ವಹಣೆ ಮಾಡದೆ ಇರುವುದರಿಂದ ಬೇಸತ್ತ ಜನ ಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಭೆಗೆ ಗೈರು ಹಾಜರಾಗಿದ್ದರೆ, ಸಭೆಯಲ್ಲಿ ಯಾವುದೆ ಹೊಸ ವಿಷಯಗಳನ್ನು ಮಂಡಿಸದೇ ಹಳೆಯ ಮನವಿಗಳನ್ನು ಮುಂದಿನ ಸಾಲಿನಲ್ಲಿ ಬಗೆಹರಿಸಿದರೆ ಸಾಕು ಎಂದು ಸಭೆಯಲ್ಲಿ ಹಾಜರಿದ್ದ ಬೆರಳೆಣಿಕೆಯಷ್ಟು ಜನಪ್ರತಿನಿಧಿಗಳು ಮತ್ತು ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮನವಿ ಮಾಡಿದರು.

ಈ ಮೂಲಕ ಪುರಸಭೆಯಲ್ಲಿ ಯಾವುದೇ ಕೆಲಸ ಕರ‍್ಯಗಳು ಆಗುತ್ತಿಲ್ಲಾ ಎಂದು ಆಡಳಿತ ಪಕ್ಷದ ಸದಸ್ಯರೆ ಬೇಸರ ವ್ಯಕ್ತಪಡಿಸಿದ ಪ್ರಸಂಗ ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ನಡೆಯಿತು.


ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಆರ್.ರವೀಂದ್ರಬಾಬು ಅವರು ಸಭೆಯನ್ನು ಕುರಿತು ಮಾತನಾಡಲು ಆರಂಭಿಸುತ್ತಿದ್ದಂತೆಯೇ ಹಿರಿಯ ಸದಸ್ಯ ಕೆ.ಸಿ.ಮಂಜುನಾರ್ಥ ಹೊಸ ಆಯ ವ್ಯಯದ ಬಗ್ಗೆ ಸಭೆ ಮಾಡುವ ಮೊದಲು ಈ ಹಿಂದಿನ ವರ್ಷದಲ್ಲಿ ನಾವು ಕೋರಿ ಕೊಂಡಿದ್ದ ಶ್ರೀ ಲಕ್ಷೀನಾರಾಯಣಸ್ವಾಮಿ ದೇವಸ್ಥಾದ ಮುಖ್ಯದ್ವಾರ, ಹಿಂದೂ ರುದ್ರಭೂಮಿ ಅಭಿವೃದ್ಧಿ, ಶುದ್ದ ಕುಡಿಯುವ ನೀರಿನ ಘಟಕ ಸೇರಿದಂತೆ ಇತರೆ ಕೆಲಸಗಳು ಏನಾಗಿವೆ ಎಂದು ಮಾಹಿತಿ ನೀಡಿ ನಂತರ ಸಭೆಯನ್ನು ನಡೆಸಿ ಎಂದು ಪ್ರಶ್ನಿಸಿದರು. ಅವರ ಬೆಂಬಲಕ್ಕೆ ನಿಂತ ಮತ್ತೊಬ್ಬ ಸದಸ್ಯ ಡಿ ಪ್ರೇಮ್‌ಕುಮಾರ್ ನಾನೂ ಕೂಡಾ ಹಳೆ ಕಿಕ್ಕೇರಿರಸ್ತೆಯ ಎರಡೂ ಪ್ರವೇಶ ಸ್ಥಳಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ದ್ವಾರÀ ನಿರ್ಮಿಸಲು ಕೋರಿದ್ದೆ. ಪಟ್ಟಣ ಪ್ರವೇಶದಲ್ಲಿ ಸ್ವಾಗತ ಕಮಾನ್ ಅಳವಡಿಸಲು ಕೋರಿದ್ದೆವು. ಪಾರ್ಕ್ ಮತ್ತು ಕೆರೆಗಳ ಅಭಿವೃದ್ಧಿಗೆ ಮನವಿಮಾಡಿದ್ದೇವು ಇವುಗಳಲ್ಲಿ ಯಾವುದಾದರು ಕೆಲಸ ಆಗಿದ್ದರೆ ಹೇಳಿ ಎಂದು ಪಟ್ಟು ಹಿಡಿದು ಕುಳಿತಾಗ ಮುಖ್ಯಾಧಿಕಾರಿ ನಟರಾಜ್ ಅವರು ಕಾರಣಾಂತರಗಳಿAದ ಯಾವುದೇ ಕೆಲಸ ಆಗಿಲ್ಲಾ. ಈಗ ನಿಮ್ಮ ಸಲಹೆ ಸೂಚನೆ ನೀಡಿ ನಾವು ಅದಕ್ಕೆ ಆಧ್ಯತೆ ನೀಡುವೆ ಎಂದಾಗ ಇದಕ್ಕೆ ಸಭೆಯಲ್ಲಿ ಹಾಜರಿದ್ದ ಎಲ್ಲಾ ಸದಸ್ಯರು ವಿರೋಧ ವ್ಯಕ್ತ ಪಡಿಸಿ ಈ ಹಿಂದಿನ ಮನವಿಯನ್ನೇ ಪೂರೈಸಿ ಎಂದರು.


ಸದಸ್ಯೆ ಕೆ.ಎಸ್.ಸಂತೋಷ್ ಕುಮಾರ್ ಮಾತನಾಡಿ ಸ್ವಾಮಿ ನಮಗೂ ಬೇರೆ ಬೇರೆ ಕೆಲಸ ಇರುತ್ತದೆ ಅದರ ನಡುವೆ ಜನರಿಗೆ ಏನಾದರೂ ಸೇವೆ ಮಾಡೋಣ ಅಂತಾ ಈ ಸಭೆಗೆ ಬಂದಿದ್ದೇವೆ. ಆದರೆ ನೀವು ನಮ್ಮ ಮನವಿಗೆ ನ್ಯಾಯ ಕೊಡಿಸದೆ ಕೇವಲ ಕಾಫಿ ಕುಡಿಸಿ ಕಳುಹಿಸುವುದಾದರೆ ಇಂತಹ ಸಭೆಗಳನ್ನು ದಯಮಾಡಿ ಮಾಡಬೇಡಿ. ಈಗಾಗಲೆ ವಾರಕ್ಕೆ ಎರಡು ರಜೆಪಡೆದುಕೊಂಡು ಜನರ ಕೆಲಸಮಾಡಿದ ಅಧಿಕಾರಿಗಳು ಇಂತಹ ಸಭೆಯ ನೆಪಮಾಡಿಕೊಂಡು ಕಾಲಹರಣ ಮಾಡದೇ ಜನರ ಕೆಲಸವನ್ನಾದರೂ ಕಚೇರಿಯಲ್ಲಿ ಕುಳಿತುಮಾಡಿ ಎಂದು ಬೇಸರ ವ್ಯಕ್ತಪಡಿಸಿದರು.

ಸಭೆಯಲ್ಲಿ ಅನುದಾನದ ಕೊರತೆಯಿಂದ ಪಟ್ಟಣ ಅಭಿವೃದ್ಧಿಯಾಗುತ್ತಿಲ್ಲ ಎಂಬ ಚರ್ಚೆ ಬಂದಾಗ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ರವೀಂದ್ರಬಾಬು ಮಾತನಾಡಿ ಎಲ್ಲರೂ ಒಂದು ದಿನಾಂಕ ನಿಗಧಿಮಾಡಿ ನಾವು ಮುಖ್ಯಮಂತ್ರಿಗಳನ್ನು ಬೇಟಿಮಾಡಿ ವಿಶೇಷ ಅನುಧಾನವನ್ನು ಬಿಡುಗಡೆಮಾಡಿಸಿಕೊಂಡು ಪಟ್ಟಣದ ಅಭಿವೃದ್ಧಿಮಾಡೊಣ ಎಂದು ತಿಳಿಸಿದರು. ಸಭೆಯಲ್ಲಿ ಬನ್ನಾರಿಯವರು ಪೌರಕಾರ್ಮಿಕರಿಗೆ ನಿಗಧಿತ ಸಮಯಕ್ಕೆ ಸರಿಯಾಗಿ ಸಂಬಳ ನೀಡುವಂತೆ ಮತ್ತು ನಿವೇಶನ ನೀಡುವಂತೆ ಮನವಿ ಮಾಡಿದರು.

ಸರ್ವೆ ನಂಬರ್ 287 ನಲ್ಲಿ ಇರುವ ಹಿಂದೂ ರುದ್ರಭೂಮಿಗೆ ರಸ್ತೆ, ಜನರು ಕೂಳಿತಿಕೊಳ್ಳಲು ಶೆಡ್ ನಿರ್ಮಾಣ, ನೀರಿನ ವ್ಯವಸ್ಥೆ ಮತ್ತು ಶವ ಸಾಗಿಸುವ ವಾಹನದ ವ್ಯವಸ್ಥೆ ಮಾಡಿಸಲು, ಒಳ ಚರಂಡಿಯನ್ನು ಪೂರ್ಣಗೊಳಿಸಲು ರಸ್ತೆಯಲ್ಲಿ ಇರುವ ಗುಂಡಿಗಳನ್ನು ತಕ್ಷಣ ಮುಚ್ಚಿಸಲು ಸಭೆಯಲ್ಲಿ ನಿರ್ಣಯಮಾಡಲಾಯಿತು.


ಸಭೆಯಲ್ಲಿ ಉಪಾಧ್ಯೆಕ್ಷೆ ಸೌಭಾಗ್ಯಉಮೇಶ್, ಸದಸ್ಯರಾದ ಪ್ರವೀಣ್‌ಕುಮಾರ್, ತಿಮ್ಮೇಗೌಡ, ವ್ಯವಸ್ಥಾಪಕಿ ಕಾಂಚನಾ, ಆರೋಗ್ಯ ನಿರೀಕ್ಷಕ ಅಶೋಕ್, ಕಂದಾಯ ಅಧಿಕಾರಿ ರವಿ, ಲೆಕ್ಕಾಧಿಕಾರಿ ಸುನೀಲ್, ಮುಖಂಡರಾದ ವಿಶ್ವಾನಾಥ್, ಮಂಜುನಾಥ್, ಮತ್ತಿತರರು ಹಾಜರಿದ್ದರು. ಅರ್ಧಕ್ಕೂ ಹೆಚ್ಚು ಪುರಸಭಾ ಸದಸ್ಯರು ಇಂಜಿನಿಯರ್ ಬಸವರಾಜ್ ಗೈರುಹಾಜರಿ ಸಭೆಯಲ್ಲಿ ಕಂಡು ಬಂದಿತು.

Leave a Reply

Your email address will not be published. Required fields are marked *

× How can I help you?