ಕೆ.ಆರ್.ಪೇಟೆ-ಎಳನೀರು ವರ್ತಕರು ರೈತರಿಗೆ ವೈಜ್ಞಾನಿಕ ಬೆಲೆ ನೀಡಿ-ತೂಕದಲ್ಲಿ ಮೋಸವಾಗದಂತೆ ಎಚ್ಚರ ವಹಿಸಿ ಸಚಿವ ಚೆಲುವರಾಯ ಸ್ವಾಮಿ ಸೂಚನೆ

ಕೆ.ಆರ್.ಪೇಟೆ-ಎಳನೀರು ವರ್ತಕರು ರೈತರಿಗೆ ವೈಜ್ಞಾನಿಕ ಬೆಲೆ ನೀಡಬೇಕು.ತೂಕದಲ್ಲಿ ಮೋಸವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಚಿವರಾದ ಎನ್.ಚೆಲುವರಾಯಸ್ವಾಮಿ ವರ್ತಕರಿಗೆ ಸೂಚಿಸಿದರು.

ತಾಲ್ಲೂಕಿನ ಕಿಕ್ಕೇರಿ ಪಟ್ಟಣದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ನೂತನವಾಗಿ ಆರಂಭಿಸಲಾದ ಕಿಕ್ಕೇರಮ್ಮ ಎಳೆನೀರು ವರ್ತಕರ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಹಾಗೂ ಮದ್ದೂರಿನ ಎಳನೀರು ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಎಳನೀರು ಬರುತ್ತಿದೆ.ಇಲ್ಲಿನ ಎಳನೀರಿಗೆ ಮುಂಬೈ ,ಬೆಂಗಳೂರು, ದೆಹಲಿಯ ಮಾರುಕಟ್ಟೆಗಳಲ್ಲಿ ಉತ್ತಮ ಬೇಡಿಕೆ ಇದೆ. ಹಾಗಾಗಿ ವರ್ತಕರು ನಮ್ಮ ರೈತರಿಗೆ ಹೆಚ್ಚಿನ ಬೆಲೆಯನ್ನು ನೀಡಿ ಅನುಕೂಲ ಮಾಡಿಕೊಡಬೇಕು ಎಂದರು.

ರೈತರಿಗೆ ಹಾಗೂ ಎಳೆನೀರು ವರ್ತಕರ ಸಂಘಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.

ಎಳನೀರು ಮಾರುಕಟ್ಟೆಗೆ ಎಳೆನೀರು ತಂದು ಮಾರಾಟ ಮಾಡುವ ವರ್ತಕರು ಸಂಘಟಿತರಾಗಿ ಕಿಕ್ಕೇರಮ್ಮ ಎಳೆನೀರು ವರ್ತಕರ ಸಂಘವನ್ನು ಆರಂಭಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.

ಕಿಕ್ಕೇರಮ್ಮ ಎಳನೀರು ವರ್ತಕರ ಸಂಘದ ಅಧ್ಯಕ್ಷ ಹೆಚ್.ಕೆ.ಸುಂದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಬೆಡದಹಳ್ಳಿ ಶ್ರೀ ಪಂಚಭೂತೇಶ್ವರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಕಾರ್ಯಕ್ರಮದ ದಿವ್ಯಸಾನಿದ್ಯ ವಹಿಸಿದ್ದರು. ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕಿಕ್ಕೇರಿ ಸುರೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಕಾರ್ಯಕ್ರಮದಲ್ಲಿ ಕಿಕ್ಕೇರಮ್ಮ ಎಳೆನೀರು ವರ್ತಕರ ಸಂಘದ ಗೌರವಾಧ್ಯಕ್ಷ ಪುಟ್ಟಣ್ಣ, ಉಪಾಧ್ಯಕ್ಷ ರಂಗಸ್ವಾಮಿ, ಕಾರ್ಯದರ್ಶಿ ಎಸ್.ರಘು, ಉಪಕಾರ್ಯದರ್ಶಿ ಪ್ರಕಾಶ್‌ಗೌಡ, ಖಜಾಂಚಿ ನಿತೀಶ್‌ಕುಮಾರ್, ಸಂಚಾಲಕ ಎಸ್.ಶಿವಕುಮಾರ್, ಕಾರ್ಯಕಾರಿ ಮಂಡಳಿ ಸದಸ್ಯರಾದ ಮಂಜೇಗೌಡ, ಕುಮಾರ್, ದೇವರಾಜು, ರವಿ(ಗಾಂಧಿ), ಬಿ.ಎನ್.ಕುಮಾರ್, ಶಿವಕುಮಾರ್, ಕುಮಾರ್, ರಂಗೇಗೌಡ, ಮಂಜುಗೌಡ, ತಮ್ಮಯ್ಯ, ರಂಜು, ಪ್ರಮೋದ್, ಟಿ.ಎನ್.ಉಮೇಶ್, ರಮೇಶ್, ಭರತ್, ಹರೀಶ್, ಅಶೋಕ್, ಯಶವಂತ್, ಸುದರ್ಶನ್, ಪ್ರಶಾಂತ್, ಉಮೇಶ್, ಲಕ್ಷ್ಮೀ ನರಸಿಂಹ, ಶಿವಕುಮಾರ್, ಶಿವು ಸೇರಿದಂತೆ ಸಂಘದ ಸದಸ್ಯರು ಹಾಗೂ ಎಳೆನೀರು ವರ್ತಕರು, ರೈತರು ಉಪಸ್ಥಿತರಿದ್ದರು.

——ಶ್ರೀನಿವಾಸ್ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?