ಕೆ.ಆರ್.ಪೇಟೆ-ಡಾ.ರಾಜ್‌ಕುಮಾರ್ ಕಲಾ ಸಂಘದ ನೇತೃತ್ವದಲ್ಲಿ 10ದಿನಗಳ ಕಾಲ ರಾಜ್ಯಮಟ್ಟದ ಪೌರಾಣಿಕ ನಾಟಕಗಳ ಪ್ರದರ್ಶನ ಪ್ರಶಂಶನೀಯ-ಗಂಜಿಗೆರೆ ಮಹೇಶ್

ಕೆ.ಆರ್.ಪೇಟೆ-ರಂಗಭೂಮಿ ಕಲೆಗಳು ಸೇರಿದಂತೆ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಭಾಗವಾಗಿರುವ ಪೌರಾಣಿಕ ನಾಟಕಗಳು ದೂರದರ್ಶನ ಹಾಗೂ ಚಲನಚಿತ್ರ ಮಾಧ್ಯಮಗಳ ಹೊಡೆತದಿಂದ ಕಣ್ಮರೆಯಾಗುತ್ತಿರುವ ಸಮಯದಲ್ಲಿ ಡಾ. ರಾಜ್‌ಕುಮಾರ್ ಕಲಾ ಸಂಘದ ನೇತೃತ್ವದಲ್ಲಿ 10ದಿನಗಳ ಕಾಲ ರಾಜ್ಯಮಟ್ಟದ ಪೌರಾಣಿಕ ನಾಟಕಗಳ ಪ್ರದರ್ಶನ ನಡೆಯುತ್ತಿರುವುದು ಶ್ಲಾಘನೀಯವಾದುದಾಗಿದೆ ಎಂದು ತಾಲ್ಲೂಕು ಆರ್.ಟಿ.ಓ ಮಲ್ಲಿಕಾರ್ಜುನ್ ಅಭಿಮಾನಿಗಳ ಬಳಗದ ಅಧ್ಯಕ್ಷ ಗಂಜಿಗೆರೆ ಮಹೇಶ್ ಅಭಿಪ್ರಾಯಪಟ್ಟರು.

ಅವರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಮುಂಭಾಗದ ಆವರಣದಲ್ಲಿ ತಾಲ್ಲೂಕು ಡಾ.ರಾಜ್ ಕುಮಾರ್ ಕಲಾ ಸಂಘ ಹಾಗೂ ತಾಲ್ಲೂಕು ಆರ್.ಟಿ.ಓ ಮಲ್ಲಿಕಾರ್ಜುನ್ ಅಭಿಮಾನಿಗಳ ಬಳಗದ ಸಹಯೋಗದೊಂದಿಗೆ ಡಾ.ಪುನೀತ್‌ರಾಜ್‌ಕುಮಾರ್ ರಂಗಮoಟಪದಲ್ಲಿ ನಡೆಯುತ್ತಿರುವ 10ದಿನಗಳ ನಾಟಕೋತ್ಸವದಲ್ಲಿ ರಂಗ ನಿರ್ದೇಶಕ ಮಟ್ಟನವಿಲೆ ಸಚಿನ್ ರಂಗರಾಜು ನಿರ್ದೇಶನದಲ್ಲಿ ನಡೆದ ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಾವಿದರನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿದರು.

ಪೌರಾಣಿಕ ನಾಟಕಗಳು ನ್ಯಾಯ ನೀತಿ ಹಾಗೂ ಧರ್ಮದ ಮಾರ್ಗದಲ್ಲಿಯೇ ಸಾಗಿ ಯಶಸ್ಸು ಪಡೆಯಬೇಕು ಎಂಬ ಸತ್ಯ ಸಂದೇಶ ನೀಡುತ್ತವೆ. ಸತ್ಯ ಹಾಗೂ ಧರ್ಮಕ್ಕೆ ಕಡೆಗಾಲಕ್ಕಾದರೂ ಗೆಲುವು ಖಚಿತ.ಅಸತ್ಯ ಹಾಗೂ ಅಧರ್ಮಕ್ಕೆ ಸೋಲು ನಿಶ್ಚಿತ ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿ ನಮ್ಮನ್ನು ನ್ಯಾಯದ ದಾರಿಯಲ್ಲಿಯೇ ಸಾಗುವಂತೆ ಉತ್ತೇಜಿಸುತ್ತಿವೆ.

ನಾಟಕದ ವಿವಿಧ ಪಾತ್ರಗಳನ್ನು ನೋಡಿದಾಗ ನಮ್ಮ ಜೀವನ ಹಾಗೂ ಬದುಕಿಗೆ ಸಾರ್ಥಕತೆ ದೊರೆಯುವ ಜೊತೆಗೆ ಯಾವುದೇ ತಪ್ಪುಮಾಡದಂತೆ ಸತ್ಯದ ಮಾರ್ಗದಲ್ಲಿ ಸಾಗುವಂತೆ ಉತ್ತೇಜನ ನೀಡುತ್ತಿರುವುದು ಕೂಡ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ವರದಾನವಾಗಿದೆ ಎಂದು ಗಂಜಿಗೆರೆ ಮಹೇಶ್ ಹೇಳಿದರು.

ಕಾರ್ಯಕ್ರಮದಲ್ಲಿ ಶಿಕ್ಷಕ ಕೆ.ಎಸ್.ಚಂದ್ರು, ಗ್ರಾ.ಪಂ.ಸದಸ್ಯ ಆರ್.ಶ್ರೀನಿವಾಸ್, ರಂಗಕಲಾವಿದ ಅಗ್ರಹಾರಬಾಚಹಳ್ಳಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಎ.ಎಂ.ಮoಜೇಗೌಡ, ರಾಗಿಮುದ್ದನಹಳ್ಳಿ ದೇವರಾಜು, ಶೀಳನೆರೆ ಎಸ್.ಪಿ.ದೇವರಾಜು, ಕಾಮನಹಳ್ಳಿ ಮಂಜುನಾಥ್, ಹೊಸಹೊಳಲು ರಘು, ರಂಗ ನಿರ್ದೇಶಕ ತಂದ್ರೆಕೊಪ್ಪಲು ಮಂಜು, ರಂಗಪ್ಪ, ಗಾಯಕ ಅಬಾರಾಶೆ ಚಂದ್ರಶೇಖರ್, ವರುಣ್ ಚಕ್ರವರ್ತಿ, ಚಿಕ್ಕಗಾಡಿಗನಹಳ್ಳಿ ರೋಹಿತ್, ನಂಜುoಡಸ್ವಾಮಿ, ಗುಂಡಣ್ಣ, ಕೃಷ್ಣಮೂರ್ತಿ, ಚೈತ್ರ, ನಾಗಮಣಿ, ಚಿಕ್ಕಗಾಡಿಗನಹಳ್ಳಿ ಸಿ.ಬಿ.ಸುನಿಲ್‌ಕುಮಾರ್, ಅಗ್ರಹಾರಬಾಚಹಳ್ಳಿ ಶಬ್ಬೀರ್ ಅಹಮದ್ ಸೇರಿದಂತೆ ನೂರಾರು ರಂಗಭೂಮಿ ಕಲಾವಿದರು ಹಾಗೂ ಕಲಾ ಪೋಷಕರು ಉಪಸ್ಥಿತರಿದ್ದರು.

ಬೆಳಿಗ್ಗೆ 11.30ಕ್ಕೆ ಗಂಟೆಗೆ ಆರಂಭವಾದ ಸಂಪೂರ್ಣ ರಾಮಾಯಣ ನಾಟಕವು ರಾತ್ರಿ 11.30ಕ್ಕೆ ಮುಕ್ತಾಯವಾಯಿತು.

——————-ಶ್ರೀನಿವಾಸ್ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?