ಕೆ.ಆರ್.ಪೇಟೆ-ಮಹಿಳೆಯರ-ಬಗೆಗಿನ-ಗೌರವ-ಸಮಾಜದಲ್ಲಿ- ಹೆಚ್ಚಾದಾಗ-ಮಾತ್ರ-ಸುಸ್ಥಿರ-ಸಮಾಜದ-ನಿರ್ಮಾಣ-ಸಾಧ್ಯ-ಡಾ.ಕೆ.ಬಿ.ಪ್ರತಿಮಾ

ಕೆ.ಆರ್.ಪೇಟೆ: ಮಹಿಳೆಯರ ಬಗೆಗಿನ ಗೌರವ ಸಮಾಜದಲ್ಲಿ ಹೆಚ್ಚಾದಾಗ ಮಾತ್ರ ಸುಸ್ಥಿರ ಸಮಾಜದ ನಿರ್ಮಾಣ ಸಾಧ್ಯ. ಅದರಲ್ಲಿಯೂ ಯುವಕರಲ್ಲಿ ಮಹಿಳೆಯರ ಬಗೆಗೆ ಗೌರವ ಭಾವನೆ ಮೂಡಬೇಕು ಎಂದು ಪಟ್ಟಣದ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಬಿ.ಪ್ರತಿಮಾ ಹೇಳಿದರು.

ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾವಿತ್ರಿಬಾಯಿಪುಲೆ ಮಹಿಳಾ ಘಟಕದ ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶದ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ತನ್ನ ತಾಯಿ ಮತ್ತು ಸೋದರಿಯರನ್ನು ಗೌರವದಿಂದ ಕಾಣುವ ಪುರುಷ ಸಮಾಜ ಇತರೆ ಹೆಣ್ಣುಮಕ್ಕಳ ಬಗೆಗೆ ಏಕೆ ಗೌರವ ಭಾವನೆಯನ್ನು ಹೊಂದುತ್ತಿಲ್ಲ. ಹೆಣ್ಣನ್ನು ಕೇವಲ ದೇಹ ಸೌಂದರ್ಯಕ್ಕೆ ಸೀಮಿತಗೊಳಿಸಿ ನೋಡಬೇಡಿ.

ಹೆಣ್ಣಿನ ಆಂತರಿಕ ಸೌಂದರ್ಯವನ್ನು ನೋಡಿ. ಹೆಣ್ಣು ಕೂಡಾ ಪುರುಷರಷ್ಟೆ ಸಮರ್ಥಳು ಎಂಬುದನ್ನು ಇನ್ನೆಷ್ಟು ಬಾರಿ ನಿರೂಪಿಸಬೇಕು. ಕ್ರೀಡೆ, ಸಂಸ್ಕೃತಿ, ವಿಜ್ಞಾನ, ತಂತ್ರಜ್ಞಾನ ಹೀಗೆ ಯಾವುದರಲ್ಲಿ ಹೆಣ್ಣಿನ ಭಾಗವಹಿಸುವಿಕೆ ಇಲ್ಲ. ಇಂದಿನ ಜಾಗತಿಕ ಸ್ಪರ್ಧಆ ಜಾಗತಿಕ ಜಗತ್ತಿನಲ್ಲಿ ಮಿಂಚುತ್ತಿರುವವಳೆ ಹೆಣ್ಣು. ಪುರುಷರಷ್ಟೆ ಸಂಖ್ಯೆಯಲ್ಲಿ ಹೆಣ್ಣು ಇದ್ದಾಳೆ. ಆದರೂ ಕೂಡಾ ಹೆಣ್ಣಿಗೆ ಸಮಾನತೆಯು ದೊರಕುತ್ತಿಲ್ಲ ಏಕೆ? ಎಂದು ಪ್ರಶ್ನಿಸಿದ ಪ್ರತಿಮಾ ದಯಮಾಡಿ ಯುವಕರು ಹೆಣ್ಣಿಗೆ ಗೌರವವನ್ನು ನೀಡಿ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಪ್ರಾಧ್ಯಾಪಕಿ ಸರಸ್ವತಿ ಮಾತನಾಡಿ ಪ್ರಸ್ತುತ ಸಮಾಜವು ಹಲವಾರು ಬದಲಾವಣೆಗಳನ್ನು ಸ್ತ್ರ ಯರ ವಿಷಯದಲ್ಲಿ ತೋರುತ್ತಿದೆ. ಪುರುಷರ ನೆರವಿಲ್ಲದೆ ಸ್ತ್ರೀ ಕೂಡಾ ಸಾಧನೆಯನ್ನು ಮಾಡಲು ಸಾಧ್ಯವಿಲ್ಲ. ಆದರೆ ಕೆಲವು ಘಟನೆಗಳು ಮಾತ್ರ ಸ್ತ್ರೀ ಪರ ಚಿಂತಕರನ್ನು ಕೂಡಾ ಕಾಡುತ್ತಿವೆ. ಹೆಣ್ಣಿನ ಸಾಧನೆಯ ಬಗೆಗೆ ವ್ಯಾಪಕವಾದ ಪ್ರಚಾರಗಳು ದೊರಕಬೇಕು. ಮಾಧ್ಯಮ ಜಗತ್ತು ಸ್ತ್ರೀ ಪರವಾದ ಕಾರ್ಯಕ್ರಮಗಳನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸಿಬಿಡುತ್ತಿವೆ.

ಆದರೆ ಎಲ್ಲಾದರೂ ಒಂದು ಘಟನೆ ಸ್ತ್ರೀಯರ ಶೋಷಣೆಯಾಗಿದ್ದರೆ ವ್ಯಾಪಕವಾದ ಪ್ರಚಾರವನ್ನು ಕೊಟ್ಟು ಎಲ್ಲಾ ಸ್ತ್ರೀಯರು ಹೀಗೆ ಎಂಬ ಭಾವನೆ ಇತರರಲ್ಲಿ ಮೂಡುವಂತೆ ಮಾಡುತ್ತಾರೆ. ಇದು ತಪ್ಪು. ಪುರುಷ ಪರವಾದ ಕ್ರೀಡಾ ಜಗತ್ತಿನಲ್ಲಿ ಸ್ತೀ ಯರು ಎಂತಹ ಸಾಧನೆಯನ್ನು ಮಾಡಿದರೂ ಕೂಡಾ ಸಾಧಕರಿಗೆ ಪುರುಷ ಸಾಧಕರಿಗೆ ಸಿಗುವಷ್ಟು ಗೌರವ ದೊರಕುತ್ತಿಲ್ಲ. ಇಂತಹ ವಿಷಯಗಳ ಬಗೆಗೆ ಗಂಭೀರ ಚರ್ಚೆಯಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ವಿ.ವಿ.ಜಗಧೀಶ್ ಮಾತನಾಡಿ ಸ್ತ್ರೀಯರ ಜಾಗೃತಿಗೆ ಶಿಕ್ಷಣದ ಕೊಡುಗೆ ಅಪಾರವಾಗಿ ಬೇಕಾಗಿದೆ. ಉದ್ಯೋಕ್ಕಾಗಿ ಓದುವ ಬದಲಿಗೆ ಜ್ಞಾನದ ಹಸಿವಿಗೆ ಓದಬೇಕು. ಸುಶಿಕ್ಷಿತ ಹೆಣ್ಣುಮಕ್ಕಳು ಮಾತ್ರ ಹೋರಾಟದ ಹಾದಿಯನ್ನು ತೆರೆದಿಟ್ಟುಕೊಳ್ಳಬಲ್ಲರು. ಗಂಡು ಹೆಣ್ಣು ಎಂಬ ಬೇಧವೆ ಬರದಂತೆ ಶಿಕ್ಷಣವು ಜ್ಞಾನವನ್ನು ನೀಡುತ್ತದೆ. ಸಮಾಜದಲ್ಲಿ ಹೆಣ್ಣಿನ ಬಗೆಗೆ ಗೌರವ ಬಾವನೆಯಿದೆ.

ಪುರುಷರೆಲ್ಲರೂ ಹೆಣ್ಣಿನ ಜೊತೆಗಿದ್ದಾರೆ. ಇದರಲ್ಲಿ ಯಾವ ಸಂಶಯವೂ ಇಲ್ಲ. ಆದರೆ ಸ್ತ್ರೀಯರೆ ಸ್ತ್ರೀ ಪೀಡಕರಾಗುತ್ತಿರುವ ಬಗೆಗೆ ಸ್ತ್ರೀ ಸಮಾಜವು ಎಚ್ಚರದಿಂದಿರಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಇತಿಹಾಸ ವಿಭಾಗ ಮತ್ತು ರಾಜ್ಯಶಾಸ್ತç ವಿಭಾಗವು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕಾಲೇಜಿನ ಹಿರಿಯ ಸಹ ಪ್ರಾಧ್ಯಾಪಕ ಡಾ.ಸಿ.ರಮೇಶ್ ಬಹುಮಾನಗಳನ್ನು ವಿತರಿಸಿದರು.

ವೇದಿಕೆಯಲ್ಲಿ ಪ್ರಾಧ್ಯಾಪಕಿ ಜಿ.ಸವಿತಾ, ಮಹಿಳಾ ಘಟಕದ ಸಂಚಾಲಕಿ ರೂಪಾ, ಐಕ್ಯೂಎಸಿ ಸಂಚಾಲಕ ಉಮೇಶ್, ಪತ್ರಾಂಕಿತ ವ್ಯವಸ್ಥಾಪಕರುಗಳಾದ ಬಿ.ಎ.ಮಂಜುನಾಥ್, ಜೆ.ಭುವನೇಶ್ವರಿ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪುಷ್ಪಲತಾ, ಪ್ರಾಧ್ಯಾಪಕರುಗಳಾದ ಡಿ.ಎನ್.ಸರಸ್ವತಿ, ಬೋರೇಗೌಡ, ಸುರೇಶ್, ಹೊನ್ನೇಗೌಡ, ಶಿಲ್ಪ, ನಾಗವೇಣಿ, ಸಿದ್ದಯ್ಯ, ನಾಗರಾಜೇಗೌಡ, ಡಿಇಓ ನಂದಿನಿ, ಅಭಿಲಾಷ್ ಕೂಡಲಕುಪ್ಪೆ ಮತ್ತಿತರರು ಇದ್ದರು.

ಶ್ರೀನಿವಾಸ ಆರ್.

Leave a Reply

Your email address will not be published. Required fields are marked *

× How can I help you?