ಕೆ ಆರ್ ಪೇಟೆ: ಪಿ.ಎಲ್.ಡಿ. ಬ್ಯಾಂಕ್ ಗೆ ನೂತನ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಕಬ್ಬಲಗೆರೆಪುರ ಪುಟ್ಟಸ್ವಾಮಿಗೌಡ ಉಪಾಧ್ಯಕ್ಷರಾಗಿ ಹೊಳೆ ಮಾರ್ಗೋನಳ್ಳಿ ಸಿಮೆಂಟ್ ರಮೇಶ್ (ಮಂಜು) ಅವಿರೋಧ ಆಯ್ಕೆಯಾಗಿದ್ದಾರೆ.
ಕೆ.ಆರ್.ಪೇಟೆ: ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿ ಕಬ್ಬಲಗೆರೆಪುರ ಪುಟ್ಟಸ್ವಾಮಿಗೌಡ ಹಾಗೂ ಉಪಾಧ್ಯಕ್ಷರಾಗಿ ಹೊಳೆ ಮಾರ್ಗೋನಹಳ್ಳಿ ಸಿಮೆಂಟ್ ಮಂಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸರ್ಕಾರದ ನಾಮ ನಿರ್ದೇಶಕ ಸೇರಿ 15 ಮಂದಿ ನಿರ್ದೇಶಕರ ಬಲ ಹೊಂದಿರುವ ಪಿ.ಎಲ್.ಡಿ ಬ್ಯಾಂಕ್ ಮುಂದಿನ ಐದು ವರ್ಷದ ಆಡಳಿತ ಮಂಡಳಿಯ ಅಧ್ಯಕ್ಷ -ಉಪಾಧ್ಯಕ್ಷರ ಸ್ಥಾನಗಳಿಗೆ ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರ ಸ್ಥಾನ ಬಯಸಿ ಕಬ್ಬಲಗೆರೆಪುರ ಪುಟ್ಟಸ್ವಾಮಿಗೌಡ, ಉಪಾಧ್ಯಕ್ಷ ಸ್ಥಾನ ಬಯಸಿ ಹೊಳೆ ಮಾರ್ಗೋನಹಳ್ಳಿ ರಮೇಶ್ (ಸಿಮೆಂಟ್ ಮಂಜು) ಸಲ್ಲಿಸಿದರು. ನಂತರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಬ್ಬಲಗೆರೆಪುರ ಪುಟ್ಟಸ್ವಾಮಿಗೌಡ ಹಾಗೂ ಉಪಾಧ್ಯಕ್ಷರಾಗಿ ಹೊಳೆ ಮಾರ್ಗೋನಹಳ್ಳಿ ರಮೇಶ್ (ಸಿಮೆಂಟ್ ಮಂಜು) ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸುಷ್ಮಾ ಅವಿರೋಧ ಆಯ್ಕೆಯನ್ನು ಘೋಷಿಸಿದರು.ಸಹ ಚುನಾವಣಾಧಿಕಾರಿಯಾಗಿ ಬ್ಯಾಂಕ್ ಕಾರ್ಯದರ್ಶಿ ರವಿಕುಮಾರ್ ಕಾರ್ಯ ನಿರ್ವಹಿಸಿದರು.

ನೂತನ ಅಧ್ಯಕ್ಷರಾದ ಕಬ್ಬಲಗೆರೆ ಪುಟ್ಟಸ್ವಾಮಿಗೌಡ ಮಾತನಾಡಿ ಪಿ.ಎಲ್.ಡಿ ಬ್ಯಾಂಕಿನ ಎಲ್ಲಾ ನಿರ್ದೇಶಕರು ಪಕ್ಷ ಭೇದ ಮರೆತು ನನ್ನನ್ನು ಎರಡನೇ ಬಾರಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದಕ್ಕೆ ನನ್ನ ಎಲ್ಲ ನಿರ್ದೇಶಕರಿಗೆ ನಮ್ಮ ನಾಯಕರಿಗೆ ಅಭಾರಿಯಾಗಿದ್ದೇನೆ. ಎಲ್ಲಾ ನಿರ್ದೇಶಕರನ್ನು ಒಟ್ಟಿಗೆ ಸೇರಿಸಿಕೊಂಡು ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಬದ್ದರಾಗಿರುವುದಾಗಿ ತಿಳಿಸಿದ ಅವರು. ಗ್ರಾಮೀಣ ಭಾಗದ ರೈತರ ಅಭಿವೃದ್ದಿಗೆ ಹೆಚ್ಚಿನ ಒತ್ತು ಪಿಎಲ್‍ಡಿ ಬ್ಯಾಂಕ್ ರೈತರಿಗೆ ಹೆಚ್ಚಿನ ನೆರವು ನೀಡಲು ಸ್ಥಾಪನೆಯಾಗಿರುವ ಸಹಕಾರಿ ಸಂಸ್ಥೆಯಾಗಿದ್ದು, ರೈತರ ಜಮೀನಿನ ಆಧಾರದ ಮೇಲೆ ಸಾಲ ಸೌಲಭ್ಯಗಳನ್ನು ಕಲ್ಪಿಸಿ, ಕೃಷಿ ಚುಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಸುವ ಉದ್ದೇಶವನ್ನು ಹೊಂದಿದೆ. ಸರ್ಕಾರ ರೈತರ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡುತ್ತಿದ್ದು ಈ ಮೂಲಕ ಸಹಕಾರ ಸಂಘಗಳ ಬಲವರ್ಧನೆಗೆ ಹೆಚ್ಚಿನ ಒತ್ತು ನೀಡಿದೆ.
ಹಾಗಾಗಿ ಬ್ಯಾಂಕಿನಲ್ಲಿ ಸಾಲ ಪಡೆದ ರೈತ ಬಾಂಧವರು ಸಕಾಲದಲ್ಲಿ ಮರು ಪಾವತಿ ಮಾಡುವ ಮೂಲಕ ತಮ್ಮ ಏಳಿಗೆಗಾಗಿ ಇರುವ ಬ್ಯಾಂಕಿನ ಅಭಿವೃದ್ದಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ಬಳಿಕ ಮಾತನಾಡಿದ ಉಪಾಧ್ಯಕ್ಷ ರಮೇಶ್ ಗ್ರಾಮೀಣ ಜನರ ಬದುಕು ಹಸನಾದಾಗ ಮಾತ್ರ ನಮ್ಮ ಹಳ್ಳಿಗಳ ಉದ್ದಾರವಾಗುತ್ತದೆ, ಗ್ರಾಮದಲ್ಲಿರುವ ರೈತರಿಗೆ ಸಾಲ ಸೌಲಭ್ಯ ನೀಡುವ ಮೂಲಕ ಅವರ ಬಾಳಿಗೆ ಬೆಳಕಾಗುವ ನಿಟ್ಟಿನಲ್ಲಿ ನಮ್ಮ ಆಡಳಿತ ಮಂಡಳಿ ಕಾರ್ಯ ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಬೆಂಬಲಿಗರು ಪಿಎಲ್‍ಡಿ ಬ್ಯಾಂಕ್ ಆಧಿಕಾರ ಹಿಡಿಯುತ್ತಿದ್ದಂತೆ ಅವರಣದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ, ಸಂಭ್ರಮಿಸಿದರು.ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಕಾಂಗ್ರೆಸ್ ಮುಖಂಡರು,ಕಾರ್ಯಕರ್ತರು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಬಿ.ಚಂದ್ರುಶೇಖರ್, ಕಾಂಗ್ರೆಸ್ ಮುಖಂಡರಾದ ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಬಿ.ಎಲ್ ದೇವರಾಜು, ಕಿಕ್ಕೇರಿ ಸುರೇಶ್, ಕೋಡಿಮಾರನಹಳ್ಳಿ ದೇವರಾಜು, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಎ.ಬಿ.ಕುಮಾರ್, ತಾ.ಪಂ ಮಾಜಿ ಸದಸ್ಯ ಗುಡ್ಡೆಹೊಸಹಳ್ಳಿ ಜವರಾಯಿಗೌಡ, ತಾಲ್ಲೂಕು ಆರಾಧನಾ ಕಮಿಟಿ ಸದಸ್ಯ ಪ್ರೀತಮ್, ಟಿ.ಎಂ.ದೇವರಾಜು, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾದ ಕೆ.ಟಿ.ಚಕ್ರಪಾಣಿ, ಮಾಳಗೂರು ಜಗದೀಶ್, ಅಣ್ಣೇಚಾಕನಹಳ್ಳಿ ನಾಗರಾಜು, ಅರೆಬೊಪ್ಪನಹಳ್ಳಿ ಸುನಿಲ್, ಅರಳಕುಪ್ಪೆ ಮೋಹನ್, ಬಣ್ಣೇನಹಳ್ಳಿ ಧನಂಜಯ್,ಶೀಳನೆರೆ ರಾಮೇಗೌಡ, ,ರಾಜನಾಯಕ್, ,ಹೊನ್ನೇನಹಳ್ಳಿ ಮಂಜುಳಕೃಷ್ಣೇಗೌಡ, ನಾಟನಹಳ್ಳಿ ಕವಿತ, ಲಕ್ಷ್ಮಿಪುರ ಚಂದ್ರೇಗೌಡ, ಭಾರತಿಪುರ ಸುರೇಶ್, ಬಂಡಿಹೊಳೆ ನಾಗೇಶ್, ಮಾಜಿ ಅಧ್ಯಕ್ಷ ಬಂಡಿಹೊಳೆ ಶಿವಕುಮಾರ್,ಚೇತನ್
ನಾಗರಾಜ್, ಸುರೇಶ್, ಕಿಕ್ಕೇರಿ ಹರೀಶ್,ಸೇರಿದಂತೆ ನೂರಾರು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
- ಶ್ರೀನಿವಾಸ್ ಆರ್.