ಕೆ.ಆರ್.ಪೇಟೆ-ಅಣ್ಣೇಚಾಕನಹಳ್ಳಿ ನಾಗರಾಜೇಗೌಡರಿಗೆ ಒಲಿದ ಪಿ.ಎಲ್.ಡಿ ಬ್ಯಾಂಕ್ ಉಪಾಧ್ಯಕ್ಷ ಸ್ಥಾನ-ಪಟಾಕಿ ಸಿಡಿಸಿ,ಸಿಹಿ ಹಂಚಿ ಸಂಭ್ರಮಿಸಿದ ಬೆಂಬಲಿಗರು.

ಕೆ.ಆರ್.ಪೇಟೆ-ಪಿ.ಎಲ್. ಡಿ ಬ್ಯಾಂಕ್ ಆಡಳಿತ ಮಂಡಳಿಯ ಹಿಂದಿನ ಉಪಾಧ್ಯಕ್ಷ ಏಜಾಸ್ ಪಾಷಾ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಿಗಧಿಯಾಗಿತ್ತು.ಉಪಾಧ್ಯಕ್ಷ ಸ್ಥಾನ ಬಯಸಿ ಶಂಭುಲಿಂಗೇಗೌಡ ಹಾಗೂ ನಾಗರಾಜೇಗೌಡ ಅರ್ಜಿ ಸಲ್ಲಿಸಿದ್ದರು. ಚುನಾವಣೆಯಲ್ಲಿ ನಾಗರಾಜೇಗೌಡ 7ಮತಗಳು ಹಾಗೂ ಶಂಭುಲಿಂಗೇಗೌಡ 7ಮತಗಳನ್ನು ಪಡೆದು ಸಮಬಲ ಸಾಧಿಸಿದರು.ಫಲಿತಾಂಶಕ್ಕಾಗಿ ಚುನಾವಣಾಧಿಕಾರಿಗಳಾದ ತಾಲ್ಲೂಕು ಸಹಕಾರ ಅಭಿವೃದ್ದಿ ಅಧಿಕಾರಿ ಭರತ್ ಕುಮಾರ್ ಲಾಟರಿ ಮೊರೆ ಹೋದರು. ಲಾಟರಿಯಲ್ಲಿ ಅಣ್ಣೇಚಾಕನಹಳ್ಳಿ ನಾಗರಾಜೇಗೌಡ ಅವರಿಗೆ ವಿಜಯಲಕ್ಷ್ಮಿ ಒಲಿದಳು.

ನೂತನ ಉಪಾಧ್ಯಕ್ಷರಾಗಿ ಅಣ್ಣೆಚಾಕನಹಳ್ಳಿ ನಾಗರಾಜೇಗೌಡ ಅವರನ್ನು ಬ್ಯಾಂಕ್ ಅಧ್ಯಕ್ಷ ಬಂಡಿಹೊಳೆ ಶಿವಕುಮಾರ್ ಹಾಗೂ ನಿರ್ದೇಶಕರು,ಬೆಂಬಲಿಗರು ಪಟಾಕಿ‌ ಸಿಡಿಸಿ,ಶಾಲು ಹೊದಿಸಿ, ಬೃಹತ್ ಹಾರ ಹಾಕಿ ಅಭಿನಂದಿಸಿದರು.

ಬಳಿಕ ಮಾತನಾಡಿದ ಪಿ. ಎಲ್. ಡಿ ಬ್ಯಾಂಕ್ ಮಾಜಿ‌ ಅಧ್ಯಕ್ಷ ಕಬ್ಬಲಗೆರೆಪುರ ಪುಟ್ಟಸ್ವಾಮಿಗೌಡ, ಬ್ಯಾಂಕ್ ನ‌ ಅಭಿವೃದ್ಧಿಯಲ್ಲಿ ಅಧ್ಯಕ್ಷರಷ್ಟೆ ಉಪಾಧ್ಯಕ್ಷರಿಗೆ ಜವಾಬ್ದಾರಿ ಇರುತ್ತದೆ.ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈಗಾಗಲೇ ಪ್ರಗತಿ ಹಂತದಲ್ಲಿರುವ ಬ್ಯಾಂಕ್ ನ ನೂತನ ಕಟ್ಟಡವನ್ನು ಶೀಘ್ರದಲ್ಲೇ ಪೂರ್ಣಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಬ್ಯಾಂಕ್ ನ ಷೇರುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಿಸಬೇಕು.ಷೇರುದಾರರು ಪಡೆದಿರುವ ಸಾಲವನ್ನು ಮರುಪಾವತಿ ಮಾಡುವ ಕಡೆ ಗಮನ ಹರಿ ಸಬೇಕು. ಷೇರುದಾರರು ಬ್ಯಾಂಕ್ ಅಭಿವೃದ್ಧಿ ಹೊಂದಬೇಕಾದರೆ ಸಕಾಲಕ್ಕೆ ಸಾಲವನ್ನು ಮರುಪಾವತಿ ಮಾಡುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ‌ಬ್ಯಾಂಕ್ ಅಧ್ಯಕ್ಷ ಬಂಡಿಹೊಳೆ ಶಿವಕುಮಾರ್,ಮಾಜಿ‌ ಅಧ್ಯಕ್ಷ ಕಬ್ಬಲಗೆರೆ ಪುಟ್ಟಸ್ವಾಮಿಗೌಡ, ಮಾಜಿ ಅಧ್ಯಕ್ಷೆ ರಾಧಾಈಶ್ವರಪ್ರಸಾದ್,ಜಯಶೀಲ,ಮಾಜಿ ಉಪಾಧ್ಯಕ್ಷ ಬಣ್ಣೇನಹಳ್ಳಿ ಧನಂಜಯ, ಚಂದ್ರೇಗೌಡ, ಅಂಜನಿಪಾಪಣ್ಣ, ಕಾಂತರಾಜೇಗೌಡ, ಗೋವಿಂದರಾಜು,ಕಮಲಮ್ಮ,ರಾಜಾನಾಯ್ಕ್, ನಾಮಿನಿ ಸದಸ್ಯ ಲಕ್ಷ್ಮೀಪುರ ಚಂದ್ರೇಗೌಡ, ಬ್ಯಾಂಕ್ ಮ್ಯಾನೇಜರ್ ರವಿಕುಮಾರ್ ‌ಸೇರಿದಂತೆ ಇತರರು ಹಾಜರಿದ್ದರು.

—–ಶ್ರೀನಿವಾಸ್ ಆರ್

Leave a Reply

Your email address will not be published. Required fields are marked *

× How can I help you?