ಕೆ.ಆರ್.ಪೇಟೆ-ಪೌರಾಣಿಕ ನಾಟಕಗಳು ಮನುಷ್ಯನ ಉತ್ತಮ ಬದುಕಿಗೆ ಮಾರ್ಗದರ್ಶನವಾಗಿ ಕೆಲಸ ಮಾಡುತ್ತವೆ-ಸರಕಾರ ಕಲಾವಿದರಿಗೆ ಸಹಕಾರ ನೀಡಬೇಕು-ಹೆಚ್.ಟಿ.ಮಂಜು

ಕೆ.ಆರ್.ಪೇಟೆ-ಪೌರಾಣಿಕ ನಾಟಕಗಳು ಮನುಷ್ಯನ ಉತ್ತಮ ಬದುಕಿಗೆ ಮಾರ್ಗದರ್ಶನವಾಗಿ ಕೆಲಸ ಮಾಡುತ್ತವೆ. ನಾಟಕಗಳಲ್ಲಿ ಬರುವ ವಿವಿಧ ಪಾತ್ರಗಳಲ್ಲಿನ ಉತ್ತಮ ಸಾರವನ್ನು ಅರಿತು ಜೀವನ ನಡೆಸಿದರೆ ಮನುಷ್ಯ ಉತ್ತಮ ಜೀವನ ನಡೆಸಬಹುದು.ಇದು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಟಿ.ಮಂಜು ಅವರು ಹೇಳಿದರು.

ಅವರು ಕೆ.ಆರ್.ಪೇಟೆ ತಾಲ್ಲೂಕಿನ ಕಸಬಾ ಹೋಬಳಿಯ ಅಗ್ರಹಾರಬಾಚಹಳ್ಳಿ ಗ್ರಾಮದಲ್ಲಿ ಶ್ರೀ ಲಕ್ಷ್ಮೀದೇವಿ ಕೃಪಾ ಪೋಷಿತ ನಾಟಕ ಮಂಡಳಿಯವರು ತಾಲ್ಲೂಕು ಡಾ.ಪುನೀತ್ ರಾಜ್‌ಕುಮಾರ್ ಕಲಾ ಸಂಘದ ಆಶ್ರಯದಲ್ಲಿ ಪಿತೃಪಕ್ಷ ಹಬ್ಬದ ಅಂಗವಾಗಿ ಆಯೋಜಿಸಿದ್ದ ಸಂಕ್ಷಿಪ್ತ ಮಹಾಭಾರತ ಅಥವಾ ಭೀಮ-ದುರ್ಯೋದನ ಗದಾಯುದ್ದ ಎಂಬ ಪೌರಾಣಿಕ ನಾಟಕ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾಜದ ಪರಿವರ್ತನೆಗೆ ಪೌರಾಣಿಕ ನಾಟಕವು ಸಾಂಸ್ಕೃತಿಕ ಕಾರ್ಯಕ್ರಮವಾಗಿರುವುದರಿಂದ ಇಂದಿಗೂ ಸಹ ಪೌರಾಣಿಕ ನಾಟಕ ಪ್ರದರ್ಶನ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ನಡೆಯುತ್ತಿವೆ.ಟಿ.ವಿ ಧಾರಾವಾಹಿ, ಸಿನಿಮಾ, ರೀಲ್ಸ್, ಯುಟ್ಯೂಬ್, ಫೇಸ್‌ಬುಕ್, ವಾಟ್ಸಪ್ ಹಾವಳಿಯ ನಡುವೆಯೂ ಪೌರಾಣಿಕ ನಾಟಕಗಳು ಜನ ಸಾಮಾನ್ಯರಿಗೆ ಒಂದು ರಾತ್ರಿಯಿಡೀ ಮನರಂಜನೆ ನೀಡುತ್ತಾ ಜನ ಮೆಚ್ಚುಗೆ ಗಳಿಸಿವೆ.ಇದರಿಂದ ಪೌರಾಣಿಕ ನಾಟಕಗಳ ಪ್ರದರ್ಶನ ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ.

ಪೌರಾಣಿಕ‌ ನಾಟಕಗಳಿಗೆ ಜೀವ ತುಂಬಿಕೊಂಡು ಬರುತ್ತಿರುವ ಕಲಾವಿದರಿಗೆ ಸರ್ಕಾರವು ಮಾಸಾಶನವನ್ನು ಸರಿಯಾಗಿ ನೀಡಬೇಕು. ಗ್ರಾಮಗಳಲ್ಲಿ ಅಭಿನಯಿಸುವ ಪ್ರತಿ ನಾಟಕಕ್ಕೆ ಕನಿಷ್ಠ 1ಲಕ್ಷ ರೂಪಾಯಿಗಳನ್ನು ಪ್ರೋತ್ಸಾಹ ದನವಾಗಿ ನೀಡಬೇಕು. ಈ ಮೂಲಕ ಕನ್ನಡ ಭಾಷೆಯ ಬೆಳವಣಿಗೆಗೆ ಹಾಗೂ ನಮ್ಮ ಸಂಸ್ಕೃತಿ ಉಳಿಸುತ್ತಿರುವ ಕಲಾವಿದರಿಗೆ ಸಹಕಾರ ನೀಡಬೇಕು ಎಂದು ಶಾಸಕರು ಹೇಳಿದರು. ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಸಚಿವರಲ್ಲಿ ವಿಷಯ ಪ್ರಸ್ತಾಪ ಮಾಡಿ ವಿಧಾನಸಭೆಯಲ್ಲೂ ಚರ್ಚೆಸುತ್ತೇನೆ ಎಂದು ಶಾಸಕರು ಕಲಾವಿದರಿಗೆ ಭರವಸೆ ನೀಡಿದರು.

ಸಮಾಜ ಸೇವಕರು ಹಾಗೂ ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷರಾದ ಆರ್.ಟಿ.ಓ ಮಲ್ಲಿಕಾರ್ಜುನ್ ಕಮಾತನಾಡಿ, ನಮ್ಮ ತಾಲೂಕಿನಲ್ಲಿ ಪ್ರತಿಯೊಂದು ಗ್ರಾಮದಲ್ಲೂ ನಾಟಕಗಳನ್ನು ಅಭಿನಯಿಸುತ್ತಿರುವುದು ತುಂಬಾ ಸಂತೋಷದ ಸಂಗತಿ ಎಂದರು.ನಮ್ಮ ಸಂಸ್ಕೃತಿ-ಪರಂಪರೆಯ ಪ್ರತಿಬಿಂಬಗಳಾಗಿರುವ ನಾಟಕ ಕಲೆಗಳನ್ನು ಉಳಿಸಿಕೊಂಡು ಹೋಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.

ಈ ನಿಟ್ಟಿನಲ್ಲಿ ನಮ್ಮ ತಾಲ್ಲೂಕಿನ ಶ್ರೀ ಜೈ ಭುವನೇಶ್ವರಿ ಕಲಾ ಸಂಘ, ಡಾ.ರಾಜ್‌ಕುಮಾರ್ ಕಲಾ ಸಂಘ, ಡಾ.ಬಿ.ಆರ್.ಅಂಬೇಡ್ಕರ್ ಕಲಾ ಸಂಘ, ಡಾ.ಬಾಬು ಜಗಜೀವನರಾಂ ಕಲಾ ಸಂಘ, ಡಾ.ಪುನೀತ್ ರಾಜ್‌ಕುಮಾರ್ ಕಲಾ ಸಂಘ ಹೀಗೆ ಹತ್ತು ಹಲವು ಕಲಾ ಸಂಘಗಳು ಜೊತೆಗೆ ಪ್ರತಿ ಗ್ರಾಮದಲ್ಲಿರುವ ಆಯಾಯ ಗ್ರಾಮ ದೇವತೆಗಳ ಹೆಸರಿನ ಕೃಪಾ ಪೋಷಿತ ನಾಟಕ ಮಂಡಳಿಗಳು ನಾಟಕಗಳನ್ನು ಕಲಿತು ಪ್ರದರ್ಶನ ಮಾಡುವ ಮೂಲಕ ನಮ್ಮ ಕಲೆ, ಸಂಸ್ಕೃತಿಯನ್ನು ಉಳಿಸುವ ಸಾಂಸ್ಕೃತಿಕ ರಾಯಭಾರಿಗಳಾಗಿ ಕೆಲಸ ಮಾಡುತ್ತಿವೆ ಎಂದು ಆರ್.ಟಿ.ಓ ಮಲ್ಲಿಕಾರ್ಜುನ್ ಮೆಚ್ಚುಗೆ ವ್ಯಕ್ತಪಡಿಸಿದರು.

ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮಾತನಾಡಿ, ಸಿನಿಮಾ, ಟವಿ ಧಾರಾವಾಹಿಗಳ ಪ್ರಭಾವ ಎಷ್ಟೇ ಬೀರಿದರೂ ನಾಟಕ ಎಂದೆಂದಿಗೂ ಜೀವಂತವಾಗಿರುತ್ತದೆ. ನಾಟಕಗಳನ್ನು ಜನರು ಹೆಚ್ಚು ಹೆಚ್ಚು ನೋಡಿದಾಗ ಸಾರ್ಥಕತೆ ಪಡೆಯುತ್ತದೆ. ಸಮಾಜದಲ್ಲಿ ಕಲಾವಿದರಿಗೆ ಉತ್ತಮ ಸ್ಥಾನ ಮಾನಗಳು ಸಿಗಬೇಕು. ಕಲಾವಿದರ ಬದುಕು ಸಂಕಷ್ಟದಲ್ಲಿದ್ದರೂ ತಮ್ಮ ರಕ್ತಗತವಾದ ಕಲೆಯಿಂದ ಸಮಾಜದ ಸಂಕಷ್ಟಗಳನ್ನು ಮರೆಸಿ ಮನರಂಜಿಸುತ್ತಾರೆ. ಹಾಗಾಗಿ ಸಾರ್ವಜನಿಕರು ನಾಟಕಗಳನ್ನು ನೋಡಿ ಪ್ರೋತ್ಸಾಹಿಸುವ ಮೂಲಕ ಕಲಾವಿದರಿಗೆ ಶಕ್ತಿಯಾಗಿ ನಿಲ್ಲಬೇಕು ಎಂದು ಕೆ.ಬಿ.ಚಂದ್ರಶೇಖರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಸಮಾಜ ಸೇವಕರು ಹಾಗೂ ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಆರ್.ಟಿ.ಓ ಮಲ್ಲಿಕಾರ್ಜುನ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮೆಣಸ ವಿ.ಎನ್.ಮಹಾದೇವೇಗೌಡ, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಬಿ.ವಿ.ನಾಗೇಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿಕ್ಕೋಸಹಳ್ಳಿ ಸುರೇಶ್, ಸೊಸೈಟಿ ನಿರ್ದೇಶಕ ಮಹೇಂದ್ರ, ಎ.ಎಸ್.ರಾಮಚಂದ್ರೇಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ಆರ್.ರಮೇಶ್, ಚನ್ನೇಗೌಡ, ರೇಣುಕಾ ಈಶ್ವರ್, ಶ್ರೀನಿವಾಸ್.ಆರ್, ಗ್ರಾ.ಪಂ.ಮಾಜಿ ಅಧ್ಯಕ್ಷ ಎ.ಪಿ.ಶ್ರೀಧರ್, ತಾಲ್ಲೂಕು ಭೂನ್ಯಾಯ ಮಂಡಳಿ ಮಾಜಿ ಸದಸ್ಯ ಎ.ಬಿ.ಕುಮಾರ್, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಎ.ಎಂ.ಮಂಜೇಗೌಡ, ಗ್ರಾಮದ ಮುಖಂಡರಾದ ಅಶೋಕ್, ಮಧು, ಎ.ಎಸ್.ಪ್ರದೀಪ್, ಅಭಿ, ದ್ಯಾವಣ್ಣನ ರಮೇಶ್, ಎ.ಪಿ.ಕೇಶವಗೌಡ, ರಂಗಭೂಮಿ ಕಲಾವಿದರಾದ ಚಟ್ಟೇನಹಳ್ಳಿ ನಾಟಗರಾಜು, ಹರಿಹರಪುರ ಮಹಾದೇವೇಗೌಡ, ಹೆಚ್.ಕೆ.ಸಿದ್ದರಾಜು, ಶಬ್ಬೀರ್ ಅಹಮದ್, ಹೊಸಹೊಳಲು ದೇವರಾಜು, ಬೊಮ್ಮನಾಯಕನಹಳ್ಳಿ ಮಹದೇವಣ್ಣ, ತಾಲ್ಲೂಕು ಡಾ.ಪುನೀತ್ ರಾಜ್ ಕಲಾ ಸಂಘದ ಅಧ್ಯಕ್ಷ ಸಿಂಗನಹಳ್ಳಿ ರಾಜು, ಕಾರ್ಯದರ್ಶಿ ಎಂ.ಕೆ.ಜಗದೀಶ್, ಡ್ರಾಮಾ ಮಾಸ್ಟರ್ ಬಳ್ಳೇಕೆರೆ ಅನಿಲ್‌ಕುಮಾರ್ ಸೇರಿದಂತೆ ಅಗ್ರಹಾರಬಾಚಹಳ್ಳಿಮತ್ತು ಚಿಲ್ಲದಹಳ್ಳಿ ಅವಳಿ ಗ್ರಾಮಗಳ ಹಿರಿಯ ಮುಖಂಡರು ಹಾಗೂ ವಿವಿಧ ಗ್ರಾಮಗಳ ಗಣ್ಯರು ಭಾಗವಹಿಸಿದ್ದರು.

—————-ಶ್ರೀನಿವಾಸ್ ಕೆ.ಆರ್.ಪೇಟೆ

Leave a Reply

Your email address will not be published. Required fields are marked *

× How can I help you?