ಕೆ.ಆರ್.ಪೇಟೆ-ಪುನೀತ್ ರಾಜ್ಕುಮಾರ್ ಅವರು ನಮ್ಮನ್ನಗಲಿ ಮೂರು ವರ್ಷಗಳು ಕಳೆಯುತ್ತಿದ್ದರೂ ಅವರ ನೆನಪು ಇಂದಿಗೂ ಕನ್ನಡಿಗರ ಮನೆ-ಮನಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ.ತಮ್ಮ ತಂದೆ ಕನ್ನಡದ ವರನಟ ಡಾ. ರಾಜಕುಮಾರ್ ಅವರಿಗೂ ಮೀರಿದ ಸಾಧನೆಯನ್ನು ಪುನೀತ್ ರಾಜಕುಮಾರ್ ಮಾಡಿದ್ದಾರೆ.ಅವರ ಅಭಿಮಾನಿಗಳು ನಡೆಸುತ್ತಿರುವ ಸಾಮಾಜಿಕ ಕಾರ್ಯಚಟುವಟಿಕೆಗಳ ಕಾರಣಕ್ಕೆ ಪುನೀತ್ ರಾಜಕುಮಾರ್ ಹೆಸರು ಚಿರ ಸ್ಥಾಯಿಯಾಗಿ ಉಳಿಯಲಿದೆ ಎಂದು ಮಾಜಿ ಸಚಿವ ಡಾ. ನಾರಾಯಣಗೌಡ ತಿಳಿಸಿದರು.
ಪವರ್ಸ್ಟಾರ್ ಡಾ.ಪುನೀತ್ ರಾಜ್ಕುಮಾರ್ ಅವರ 3ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ತಾಲ್ಲೂಕು ಅಪ್ಪು ಯುವ ಸಾಮ್ರಾಜ್ಯ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರ, ಅನ್ನಧಾನ, ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅವರ ನೆನಪಿನಲ್ಲಿ ತಾಲ್ಲೂಕು ಅಪ್ಪು ಯುವ ಸಾಮ್ರಾಜ್ಯ ಸೇವಾ ಟ್ರಸ್ಟ್ಇಂದು ರಕ್ತದಾನ, ಆರೋಗ್ಯ ತಪಾಸಣೆ ಹಾಗೂ ಅನ್ನದಾನ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡು ಶ್ರೀ ಸಾಮಾನ್ಯರ ಹೃದಯ ಗೆದ್ದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇದೆ ಸಂದರ್ಭದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಅಭಿನಯದ ಕುಲದಲ್ಲಿ ಕೀಳ್ಯಾವುದೋ ಕನ್ನಡ ಚಲನ ಚಿತ್ರದ ಪೋಸ್ಟರ್ ಅನ್ನು ಅತಿಥಿಗಳು ಬಿಡುಗಡೆ ಮಾಡಿದರು.
ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳು ಸರತಿಯ ಸಾಲಿನಲ್ಲಿ ನಿಂತು ಅನ್ನ ಪ್ರಸಾದ ಸ್ವೀಕರಿಸಿದರು. ನೂರಕ್ಕೂ ಹೆಚ್ಚಿನ ಯುವ ಜನರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ ಮಾದರಿಯಾದರು.
ಕಾರ್ಯಕ್ರಮದ ನೇತೃತ್ವವನ್ನು ತಾಲ್ಲೂಕು ಅಪ್ಪು ಯುವ ಸಾಮ್ರಾಜ್ಯ ಸೇವಾ ಟ್ರಸ್ಟ್ ಅಧ್ಯಕ್ಷರಾದ ಕೆ.ಎಲ್.ಮಹೇಶ್, ಪದಾಧಿಕಾರಿಗಳಾದ ಬೇಕರಿ ರಾಮು, ಎಂ.ಸಿ.ಜಗದೀಶ್, ಗೋವಿಂದರಾಜು, ಬೇಕರಿ ಹರೀಶ್, ಚಂದ್ರು, ಅಶೋಕ್, ಹೋಟೆಲ್ ಯೋಗೇಶ್, ಚೇತು, ರಾಮು, ರಾಮು, ದೇವರಾಜು, ಯೋಗೇಶ್, ಮನು, ರವಿ, ಅನಿಲ್ ಮತ್ತಿತರರು ವಹಿಸಿಕೊಂಡು ಅಪ್ಪು ಸ್ಮರಣೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ತಾಲ್ಲೂಕು ಅಪ್ಪು ಯುವ ಸಾಮ್ರಾಜ್ಯ ಸೇವಾ ಟ್ರಸ್ಟ್ ಅಧ್ಯಕ್ಷರಾದ ಕೆ.ಎಲ್.ಮಹೇಶ್ ನೇತೃತ್ವದಲ್ಲಿ ಕೆ.ಆರ್.ಪೇಟೆ ಪಟ್ಟಣದ ಮೈಸೂರು-ಚನ್ನರಾಯಪಟ್ಟಣ ಮುಖ್ಯ ರಸ್ತೆಯ ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ಎತ್ತರದ ಕಟ್ಟೆಯ ಮೇಲೆ ಪ್ರತಿಷ್ಟಾಪಿಸಿರುವ 6ಅಡಿ ಎತ್ತರದ ಪುನೀತ್ ರಾಜ್ಕುಮಾರ್ ಕಂಚಿನ ಪ್ರತಿಮೆಗೆ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಆದಿಚುಂಚನಗಿರಿಯ ಹೇಮಗಿರಿ ಶಾಖಾಮಠದ ಪ್ರಧಾನ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ.ಕೆ. ಶ್ರೀನಿವಾಸ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು, ಪುರಸಭೆ ಅಧ್ಯಕ್ಷೆ ಪಂಕಜಾಪ್ರಕಾಶ್, ತಾಲೂಕು ಅಪ್ಪು ಯುವ ಸಾಮ್ರಾಜ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಎಲ್.ಮಹೇಶ್, ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಹೆಚ್.ಆರ್.ಸೋಮಶೇಖರ್ ಮತ್ತಿತರರು ಪೂಜೆ ಮಾಡಿ ಪುಷ್ಪ ನಮನ ಸಲ್ಲಿಸಿ ತಮ್ಮ ಗೌರವ ಸಮರ್ಪಣೆ ಮಾಡಿದರು.
ರೇಣುಕಾದೇವಿ ಟ್ರಸ್ಟ್:
ಕೆ.ಆರ್.ಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದ ರೇಣುಕಾದೇವಿ ಟ್ರಸ್ಟ್ ವತಿಯಿಂದ ದಾನಶೂರ ಕರ್ಣ, ಕರ್ನಾಟಕ ರತ್ನ, ಪವರ್ ಸ್ಟಾರ್, ನಟ ಪುನೀತ್ ರಾಜ್ಕುಮಾರ್ ಮೂರನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಕೆ.ಆರ್.ಪೇಟೆ ಪಟ್ಟಣದ ಮುಖ್ಯರಸ್ತೆಯಲ್ಲಿ ಸಾರ್ವಜನಿಕರಿಗೆ ಅನ್ನದಾನ ಕಾರ್ಯಕ್ರಮ, ಪೂಜಾ ಕಾರ್ಯಕ್ರಮ ಏರ್ಪಡಿಸಿ, ಪುನೀತ್ ಅವರ ಆಳೆತ್ತರದ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ, ಪುಷ್ಪ ನಮನದೊಂದಿಗೆ ಗೌರವ ಸಲ್ಲಿಸಿದರು.
ಟ್ರಸ್ಟ್ ಅಧ್ಯಕ್ಷ ವೆಂಕಟೇಶ್, ಎಸ್.ಟಿ.ಡಿ ಮೂರ್ತಿ, ರಾಮಸ್ವಾಮಿ, ಪ್ರಕಾಶ್, ನಂಜುoಡಪ್ಪ, ಸ್ವಾಮಿ, ಶಿಕ್ಷಕರಾದ ನಾಗೇಶ್, ರವಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
————ಶ್ರೀನಿವಾಸ್ ಕೆ ಆರ್ ಪೇಟೆ