ಕೆ.ಆರ್.ಪೇಟೆ:ಮಾಕವಳ್ಳಿ ಗ್ರಾಮದ ಕೋರಮಂಡಲ ಸಕ್ಕರೆ ಕಾರ್ಖಾನೆ ತನ್ನ ವ್ಯಾಪ್ತಿಯ ಗ್ರಾಮಗಳಿಗೆ ವಿಷಕಾರಿ ಹಾರುವ ಬೂದಿಯ ಜೊತೆಗೆ ರೈತರ ಜೀವನಾಡಿ ಹೇಮಾವತಿ ನದಿಗೆ ತನ್ನ ತ್ಯಾಜ್ಯ ನೀರು ಬಿಡುವ ಮೂಲಕ ಕಲುಷಿತ ಗೊಳಿಸುತ್ತಿದ್ದು,ಕಾರ್ಖಾನೆಯ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಹಾಗೂ 150ಕೆ.ಎಲ್.ಡಿ ಡಿಸ್ಟಿಲರಿ ಮತ್ತು ಯಥನಾಲ್ ಘಟಕದ ನಿರ್ಮಾಣಕ್ಕೆ ಅನುಮತಿಯನ್ನು ಶಾಶ್ವತವಾಗಿ ನೀಡಬಾರದೆಂದು ಹಿರಿಯ ರೈತ ಮುಖಂಡ ಮದುಗೆರೆ ರಾಜೇಗೌಡ ನೇತೃತ್ವದಲ್ಲಿ ನೂರಾರು ರೈತರು ತಹಸಿಲ್ದಾರ್ ಡಾ ಎಸ್.ಯು ಅಶೋಕ್ ರವರಿಗೆ ಮನವಿ ಸಲ್ಲಿಸಿದರು.
ಪಟ್ಟಣದಲ್ಲಿರುವ ತಾಲೂಕು ಮಿನಿ ವಿಧಾನಸೌಧದ ಮುಖ್ಯದ್ವಾರದಲ್ಲಿ ಪ್ರತಿಭಟನೆ ಹಾಗೂ ಮನವಿ ಸಲ್ಲಿಸಿ ಮಾತನಾಡಿದ ಹಿರಿಯ ರೈತ ಮುಖಂಡ ಮುದುಗೆರೆ ರಾಜೇಗೌಡ,20 ವರ್ಷಗಳ ಹಿಂದೆ ತಾಲೂಕಿನಲ್ಲಿ ರೈತರ ಬದುಕು ಹಸನಾಗಿಸಲು ಎಂದು ನಿರ್ಮಾಣಗೊಂಡ ಕಾರ್ಖಾನೆ ವಿಷಕಾರಿ ಹಾರುವ ಬೂದಿ ಮತ್ತು ಕೊಳಚೆ ನೀರನ್ನು ಹಳ್ಳಕೊಳ್ಳದ ಮೂಲಕ ರೈತರ ಜೀವನಾಡಿ ಹೇಮಾವತಿ ನದಿಗೆ ಹರಿಬಿಟ್ಟು,ನದಿಯ ನೀರನ್ನು ಕಲುಷಿತಗೊಳಿಸಿ ಸಾರ್ವಜನಿಕರ ಮತ್ತು ರೈತರ ಬದುಕಿಗೆ ಮಾರಕವಾಗಿದೆ ಎಂದು ಆರೋಪಿಸಿದರು.
ಪ್ರಸ್ತುತವಿರುವ ಸಕ್ಕರೆ ಕಾರ್ಖಾನೆಯನ್ನೇ ನಿಭಾಯಿಸಲು ಆಗದೆ ಕಾನೂನು ನಿಯಮಾವಳಿಯನ್ನ ಗಾಳಿಗೆ ತೂರಿ ದಿನನಿತ್ಯ ಈ ಭಾಗದ ರೈತರಿಗೆ ಬದುಕಿನ ಜೊತೆ ಚೆಲ್ಲಾಟವಾಡುತ್ತಿರುವ ಕಾರ್ಖಾನೆಯ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಎಂದು ತಾಲೂಕು,ಜಿಲ್ಲಾ ಮತ್ತು ರಾಜ್ಯ ಪರಿಸರ ಮಾಲಿನ್ಯ ಅಧಿಕಾರಿಗಳು ಹೋರಾಟದ ಮೂಲಕ ಮನವಿ ಸಲ್ಲಿಸಿದರು ಬಡವರ ಕೋಪ ದವಡೆಗೆ ಮೂಲ ಎಂದು ಭಾವಿಸಿ ನಮ್ಮ ಹೋರಾಟವನ್ನು ಪರಿಗಣಿಸುತ್ತಿಲ್ಲ. ಆದರೂ ಸುಮ್ಮನೆ ಕೂರುವ ಹೋರಾಟಗಾರರಲ್ಲ ನಾವು ಪ್ರಾಣ ಬಿಟ್ಟೇವು ಹೊರತು ಇಂತಹ ರೈತರಿಗೆ ಪರಿಸರಕ್ಕೆ ಅಪಾಯಕಾರಿ ಉಂಟುಮಾಡುವ ಘಟಕ ನಿರ್ಮಾಣಕ್ಕೆ ಬಿಡುವುದಿಲ್ಲ ಎಂದು ಕಿಡಿಕಾರಿದರು.
ಇಂತಹ ಸಂದರ್ಭದಲ್ಲಿ ಪ್ರಸ್ತುತ ಸಕ್ಕರೆ ಕಾರ್ಖಾನೆ ಹೊರತುಪಡಿಸಿ ರೈತರ ಬದುಕಿಗೆ ಮಾರಕವಾಗುವ ಘಟಕಗಳು ನಿರ್ಮಾಣವಾದರೆ ಈ ಭಾಗದ ಸಾರ್ವಜನಿಕರ ಬದುಕು ನರಕವಾಗುವುದು ಶತಸಿದ್ಧ. ಹಾಗಾಗಿ ಈ ಅಪಾಯಕಾರಿ ಘಟಕದ ನಿರ್ಮಾಣಕ್ಕೆ ಶಾಶ್ವತವಾಗಿ ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಕಾರ್ಖಾನೆಯ ವ್ಯಾಪ್ತಿಗೆ ಬರುವ ನೂರಾರು ರೈತರ ಸಮ್ಮುಖದಲ್ಲಿ ಮುದುಗೆರೆ ರಾಜೇಗೌಡ ಮನವಿ ಸಲ್ಲಿಸಿದರು.
ರೈತರ ಮನವಿ ಸ್ವೀಕರಿಸಿ ಮಾತನಾಡಿದ ತಾಲೂಕು ದಂಡಾಧಿಕಾರಿ ಡಾ: ಎಸ್.ಯು ಅಶೋಕ್ ನಿಮ್ಮ ಮನವಿಯನ್ನ ಪ್ರಾಮಾಣಿಕವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸಿ ರೈತರಿಗೆ ಮಾರಕವಾಗುವ ಕಾರ್ಖಾನೆಗಳ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್,ತಾಲೂಕು ರೈತ ಸಂಘ ಮಾಜಿ ಅಧ್ಯಕ್ಷ ಸಿಂದಘಟ್ಟ ಮುದ್ದು ಕುಮಾರ್,ರೈತ ಸಂಘ ಪ್ರಧಾನ ಕಾರ್ಯದರ್ಶಿ ನಾಗರಾಜು, ಲಕ್ಷ್ಮಿಪುರ ಜಗದೀಶ್, ರೈತಪರ ಹೋರಾಟಗಾರ ಕರೋಟಿ ತಮ್ಮಯ್ಯ, ನಿವೃತ್ತ ಶಿಕ್ಷಕ ಮಾಕವಳ್ಳಿ ದೊಡ್ಡೇಗೌಡ, ಪದ್ದೇಗೌಡ, ದೇವರಸೇಗೌಡ,ನಾಗೇಶ್, ಆನಂದ್, ಮಂಜುನಾಥ್,ಕರೋಟಿ ಪುಟ್ಟೇಗೌಡ,ಕೃಷ್ಣೆಗೌಡ, ಗುಂಡೇಗೌಡ,ಪಾಪೇಗೌಡ,ಚಂದ್ರೆಗೌಡ,ರಾಮೇಗೌಡ, ಬೈರನಾಯಕ, ರಮೇಶ್, ರವಿಕುಮಾರ್,ಹೆಗ್ಗಡಹಳ್ಳಿ ಚೇತನ್, ರಾಮನಹಳ್ಳಿ ಡೇರಿ ಕುಮಾರ್, ಮಂಜು, ವಡ್ಡರಹಳ್ಳಿ ಶಿವಕುಮಾರ್, ಕುಮಾರ್,ಕೃಷ್ಣಪುರ ರಾಜಣ್ಣ,ಲಿಂಗಾಪುರ ರವಿ,ಯುವ ಮುಖಂಡರಾದ ಗುರು,ಅನಿಲ್,ಹೆಗಡಹಳ್ಳಿ ಚೆಲುವರಾಜು,ಸೇರಿದಂತೆ ನೂರಾರು ರೈತ ಮುಖಂಡರು ಇದ್ದರು.
————- ಮನು ಮಾಕವಳ್ಳಿ