ಕೆ.ಆರ್.ಪೇಟೆ- ರಸ್ತೆ-ಮತ್ತು ಚರಂಡಿ-ಅಭಿವೃದ್ದಿ-ಕಾಮಗಾರಿಗಳಿಗೆ-ಶಾಸಕ-ಹೆಚ್.ಟಿ.ಮಂಜುರಿಂದ-ಭೂಮಿ ಪೂಜೆ

ಕೆ.ಆರ್.ಪೇಟೆ: ತಾಲ್ಲೂಕಿನ ಅಕ್ಕಿಹೆಬ್ಬಾಳಿನ ಹಳೆ ದಡದಹಳ್ಳಿ, ಸಿಂಧುಘಟ್ಟ ಗ್ರಾಮಗಳಲ್ಲಿ ಹಾಗೂ ಪಟ್ಟಣದ ಕ್ರಿಶ್ಚಿಯನ್ ಕಾಲೋನಿ ಹಾಗೂ ಸಂತೇಬಾಚಹಳ್ಳಿ ಗ್ರಾಮದಲ್ಲಿ ರಾಜ್ಯ ಅಲ್ಪ ಸಂಖ್ಯಾತರ ಅಭಿವೃದ್ದಿ ನಿಗಮದ ವತಿಯಿಂದ ರಸ್ತೆ ಮತ್ತು ಚರಂಡಿ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕರಾದ ಹೆಚ್.ಟಿ.ಮಂಜು ಅವರು ಭೂಮಿ ಪೂಜೆ ನೆರವೇರಿಸಿದರು ‌.


ಬಳಿಕ ಮಾತನಾಡಿದ ಅವರು ರಸ್ತೆ ಮತ್ತು ಚರಂಡಿಗಳ ಸಮಗ್ರ ಅಭಿವೃದ್ಧಿಯಿಂದ ಗ್ರಾಮಗಳಲ್ಲಿ ಆರ್ಥಿಕ ಸುಸ್ಥಿರತೆ ಕಾಪಾಡಿಕೊಳ್ಳಬೇಕು. ಸ್ಥಳೀಯ ನಿವಾಸಿಗಳು ಗುಣಮಟ್ಟದ ಕಾಮಗಾರಿ ನಡೆಯುವಂತೆ . ಕಳಪೆ ಕಾಮಗಾರಿ ನಡೆಯದಂತೆ ಸ್ಥಳೀಯರು ಎಚ್ಚರಿಕೆ ವಹಿಸಬೇಕು. ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ ದಡದಹಳ್ಳಿ ಗ್ರಾಮದಲ್ಲಿ 10 ಲಕ್ಷ, ಪಟ್ಟಣದ ಕ್ರಿಶ್ಚಿಯನ್‌ ಕಾಲೋನಿಯಲ್ಲಿ 42ಲಕ್ಷ, ಸಿಂಧುಘಟ್ಟದಲ್ಲಿ 75ಲಕ್ಷ, ಸಂತೇಬಾಚಹಳ್ಳಿಯಲ್ಲಿ 15ಲಕ್ಷ ರೂಪಾಯಿಗಳ ಅನುಧಾನವು ರಸ್ತೆ ಅಭಿವೃದ್ದಿ ಹಾಗೂ ಚರಂಡಿ ಅಭಿವೃದ್ಧಿಗೆ ಬಿಡುಗಡೆಯಾಗಿದೆ. ಚಾಲನೆ ನೀಡಲಾಗಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸರಿಯಾಗಿ ಅನುಧಾನ ಬರುತ್ತಿಲ್ಲ. ಅನುದಾನ ಸಿಗದೆ ತಾಲೂಕಿನ ಅಭಿವೃದ್ಧಿ ಇರಲಿ ಜನರ ಸಮಸ್ಯೆಗೆ ಸ್ಪಂಧಿಸಲು ಕಷ್ಟವಾಗುತ್ತಿದೆ. ಹೋರಾಟ ಮಾಡಿಯಾದರೂ ಅನುದಾನ ತಂದು ಅಭಿವೃದ್ಧಿಗಾಗಿ ಶ್ರಮಿಸುವೆ ಎಂದು ತಿಳಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾದ ಸುಮಾರು 12ಸಾವಿರ ಕೋಟಿಯಷ್ಟು ಅನುಧಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡಿದೆ. ಇದರಿಂದ ದಲಿತ ಬಂಧುಗಳಿಗೆ ಅನ್ಯಾಯವಾಗಿದೆ ಇದರ ವಿರುದ್ದ ದಲಿತ ಬಂಧುಗಳು ಸಂಘಟಿತ ಹೋರಾಟ ಮಾಡುವ ಅಗತ್ಯವಿದೆ ಎಂದು ಶಾಸಕರು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ಎ.ಆರ್.ರಘು, ಮಲ್ಲೇನಹಳ್ಳಿ ಮೋಹನ್, ಅತೀಕ್ ಅಹಮದ್, ವಾಸು.ಆರ್, ಜೈನ್ನಹಳ್ಳಿ ದಿನೇಶ್, ಮಹೇಶನಾಯಕ್, ನರಸನಾಯಕ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಕ್ಕಿಹೆಬ್ಬಾಳು ಹರೀಶ್, ಪಿಡಿಓ ಜಯಕುಮಾರ್, ಉಪಾಧ್ಯಕ್ಷ ಜಲೇಂದ್ರ, ಸಿಂಧುಘಟ್ಟ ಗ್ರಾ.ಪಂ.ಅಧ್ಯಕ್ಣೆ ಕಾವ್ಯ ಗಿರೀಶ್, ಉಪಾಧ್ಯಕ್ಷ ನಂಜಪ್ಪ, ಪಿಡಿಓ ವಾಣಿ, ಗ್ರಾ.ಪಂ.ಸದಸ್ಯರಾದ ಸುಮ, ಲಾವಣ್ಯಕುಮಾರ್, ಸೊಸೈಟಿ ಅಧ್ಯಕ್ಷ ನಾಗೇಶ್, ಮುಖಂಡರದ ತಾ.ಪಂ.ಮಾಜಿ ಸದಸ್ಯ ಮೋಹನ್, ಜೆಡಿಎಸ್ ಮುಖಂಡರಾದ ,ಸಿಂಧುಘಟ್ಟ ಗಿರೀಶ್, ಸಾಧಿಕ್ ಅಹಮದ್, ಅಲ್ಪ ಸಂಖ್ಯಾತರ ಅಭಿವೃದ್ದಿ ನಿಗಮದ ಜಿಲ್ಲಾ ಅಧಿಕಾರಿ ಮಧುಶ್ರೀ, ನಿರ್ಮಿತಿ ಕೇಂದ್ರದ ಇಇ ಜಯಪ್ರಕಾಶ್, ಜೆ.ಇ ಹೇಮಂತ್ ಕುಮಾರ್, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಸೇರಿದಂತೆ ಹಲವು ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.

-ಶ್ರೀನಿವಾಸ, ಕೆ.ಆರ್.ಪೇಟೆ

Leave a Reply

Your email address will not be published. Required fields are marked *

× How can I help you?