ಕೆ.ಆರ್.ಪೇಟೆ-ಸ್ವಾರ್ಥವೇ ತುಂಬಿರುವ ಇಂದಿನ ಸಮಾಜದಲ್ಲಿ ಸೇವೆ ಎಂಬ ಪದಕ್ಕೆ ಸಾರ್ಥಕತೆಯನ್ನು ನೀಡಿದ ರೋಟರಿ ಸಂಸ್ಥೆಯಲ್ಲಿ ಸದಸ್ಯರಾಗಿ ಕೆಲಸ ಮಾಡುವುದೇ ಪುಣ್ಯದ ವಿಚಾರವಾಗಿದೆ ಎಂದು ರೋಟರಿ ಜಿಲ್ಲಾ ರಾಜ್ಯಪಾಲ ಡಾ.ಎಸ್.ವಿ.ಶ್ರೀನಿವಾಸಮೂರ್ತಿ ಹೇಳಿದರು.
ಅವರು ಪಟ್ಟಣದಲ್ಲಿ ನಡೆದ ರೋಟರಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಕೆ.ಆರ್.ಪೇಟೆ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ನಿಯೋಜನೆಗೊಂಡ ಸಮಾಜಸೇವಕ ಮಲ್ಲಿಕಾರ್ಜುನ್ ನೇತೃತ್ವದ ತಂಡಕ್ಕೆ ಪದಗ್ರಹಣ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಅಧಿಕಾರ ಹಸ್ತಾಂತರ ಮಾಡಿ ಮಾತನಾಡಿದರು.
ಕಗ್ಗಲ್ಲಿನಂತಿದ್ದ ನಮಗೆ ಮನುಷ್ಯತ್ವ ಹಾಗೂ ಸೇವಾ ಗುಣಗಳನ್ನು ತುಂಬಿ ಪರಿಪೂರ್ಣ ವ್ಯಕ್ತಿತ್ವದ ವಿಕಸನಕ್ಕೆ ಕಾರಣವಾಗುವ ರೋಟರಿ ಸಂಸ್ಥೆಯು ತನ್ನ ಶಾಖೆಗಳನ್ನು ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿಯೂ ಹೊಂದಿದೆ. ಮಕ್ಕಳ ಆರೋಗ್ಯಕ್ಕೆ ಮಾರಣಾಂತಿಕವಾಗಿದ್ದ ಪೋಲಿಯೋ ಮಹಾಮಾರಿಯನ್ನು ಹೊಡೆದೋಡಿಸಿ, ಪೋಲಿಯೋ ಮುಕ್ತ ರಾಷ್ಟ್ರ ನಿರ್ಮಾಣ ಮಾಡಲು ರೋಟರಿ ಸಂಸ್ಥೆಯು ನಿರ್ಣಾಯಕ ಪಾತ್ರವಹಿಸಿದೆ ಎಂದು ಅಭಿಮಾನದಿಂದ ಹೇಳಿದರು.
ಕೆ.ಆರ್.ಪೇಟೆ ಪಟ್ಟಣದಲ್ಲಿ ಸಮಾಜ ಸೇವಕ ಕೊಡುಗೈದಾನಿಗಳಾದ ಆರ್.ಟಿ.ಓ ಮಲ್ಲಿಕಾರ್ಜುನ್ ಅವರ ಅಧ್ಯಕ್ಷತೆಯಲ್ಲಿ ರೋಟರಿ ಸಂಸ್ಥೆಯು ಆರಂಭವಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಆದ್ದರಿಂದ ರೋಟರಿ ಸಂಸ್ಥೆಯ ಎಲ್ಲಾ ಆಡಳಿತ ಮಂಡಳಿ ಸದಸ್ಯರು ಅರ್ಪಣಾ ಮನೋಭಾವನೆಯಿಂದ ಕೆಲಸ ಮಾಡಿ ಸೇವಾ ಚಟುವಟಿಕೆಗಳನ್ನು ವಿಸ್ತರಿಸಿ ಬಡವರು ಹಾಗೂ ದೀನ ದಲಿತರ ಸೇವೆಯಲ್ಲಿ ಭಗವಂತನನ್ನು ಕಾಣುವ, ದೀನದಲಿತರು ಹಾಗೂ ಶೋಷಿತ ಸಮುದಾಯಗಳ ಜನರ ಕಣ್ಣೀರನ್ನು ಒರೆಸಿ ಸ್ವಾಭಿಮಾನದ ಬದುಕು ನಡೆಸಲು ನೆರವಿನ ಹಸ್ತ ಚಾಚಬೇಕು ಎಂದು ಕರೆ ನೀಡಿದರು.
ಕೆ.ಆರ್.ಪೇಟೆ ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಮಾತನಾಡಿ,ತಾಲ್ಲೂಕಿನಾದ್ಯಂತ ಸಮಾಜ ಸೇವಾ ಚಟುವಟಿಕೆಗಳನ್ನು ವಿಸ್ತರಿಸಿ, ಸೇವೆ ಎಂಬ ಪದಕ್ಕೆ ಸಾರ್ಥಕತೆ ತಂದುಕೊಟ್ಟು ಬಡಜನರ ಕಣ್ಣೀರು ಒರೆಸುವ ಕೆಲಸವನ್ನು ಬದ್ಧತೆಯಿಂದ ಮಾಡಿ ಸೇವಾ ಚಟುವಟಿಕೆ ಗಳನ್ನು ನೊಂದ ಜನರಿಗೆ ತಲುಪಿಸಲು ನಮ್ಮ ತಂಡದ ಎಲ್ಲಾ ಸದಸ್ಯರು ಬದ್ಧತೆಯಿಂದ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಕೋಲಾರ ಲೇಕ್ ಸೈಡ್‌ವ್ಯೂ ರೋಟರಿ ಕ್ಲಬ್ ಅಧ್ಯಕ್ಷ ರಾಮಕೃಷ್ಣೇಗೌಡ, ರೋಟರಿ 3192 ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಸೈಯ್ಯದ್ ಅಹಮದ್, ಬಿಳಿಗೆರೆ ಶಿವಕುಮಾರ್, ತಿರುಮುರುಗನ್, ನರ್ಮದಾ ನಾರಾಯಣ, ತಿರುಮುರುಗನ್, ನಾಗಮಂಗಲ ವಿಜಯಕುಮಾರ್, ಕೆ.ಆರ್.ಪೇಟೆ ರೋಟರಿ ಕ್ಲಬ್ ಕಾರ್ಯದರ್ಶಿ ರಂಗನಾಥ್, ಎಂ.ಕೆ.ಹರಿಚರಣತಿಲಕ್, ಬಳ್ಳೇಕೆರೆ ಮಂಜುನಾಥ್, ಅಕ್ಕಿಹೆಬ್ಬಾಳು ಆರ್.ವಾಸು, ಮಹೇಶನಾಯಕ್, ರಂಗಸ್ವಾಮಿ, ಸಿಂಧುಘಟ್ಟ ನಾಗೇಶ್, ಪ್ರಸನ್ನಕುಮಾರ್, ಯೋಗೇಶ್, ಜಿ.ಎಸ್.ಮಂಜು, ಗಂಜಿಗೆರೆ ಮಹೇಶ್, ಅಗ್ರಹಾರಬಾಚಹಳ್ಳಿ ಶ್ರೀನಿವಾಸ್, ಅಮೀನಾಭಾನು, ಸೇರಿದಂತೆ ರೋಟರಿ ಕುಟುಂಬದ ನೂರಾರು ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
———–ಶ್ರೀನಿವಾಸ್ ಕೆ ಆರ್ ಪೇಟೆ