ಕೆ.ಆರ್.ಪೇಟೆ: ತಾಲ್ಲೂಕಿನ ಸೋಮನಹಳ್ಳಿ ಗ್ರಾಮದ ಗ್ರಾಮೀಣ ಪ್ರತಿಭೆ ಹಿತಶ್ರೀ ಎಂಬಾಕೆ ವಿಜ್ಞಾನ ವಿಭಾಗದಲ್ಲಿ 600ಕ್ಕೆ 523ಅಂಕಗಳನ್ನು ಪಡೆಯುವ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣ ಹೊಂದುವ ಮೂಲಕ ಮೂಲಕ ಶ್ರೇಷ್ಠ ಸಾಧನೆ ಮಾಡಿದ್ದಾರೆ.

ಶಿಕ್ಷಕ ದಂಪತಿಗಳಾದ ನೇತ್ರಾವತಿಅಯ್ಯಣ್ಣ ಅವರು ಹಳ್ಳಿಯಲ್ಲಿ ವಾಸವಿದ್ದು ಗ್ರಾಮೀಣ ಪರಿಸರದಲ್ಲಿ ವಿದ್ಯಾಭ್ಯಾಸ ಮಾಡಿಸಿದ್ದು, 523ಅಂಕಗಳನ್ನು ಪಡೆಯುವ ಮೂಲಕ ಅತ್ಯುತ್ತಮ ಶ್ರೇಣಿ ಪಡೆದುಕೊಂಡು ಸೋಮನಹಳ್ಳಿ ಗ್ರಾಮಕ್ಕೆ ಹಾಗೂ ತಾಲ್ಲೂಕಿಗೆ ಕೀರ್ತಿ ತಂದಿದ್ದಾಳೆ ಎಂದಿರುವ ಪೋಷಕರು ತಮ್ಮ ಪುತ್ರಿಯ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.
- ಶ್ರೀನಿವಾಸ್ ಆರ್.