ಕೆ.ಆರ್.ಪೇಟೆ,ಏ.05: ತಾಲ್ಲೂಕಿನ ಐತಿಹಾಸಿಕ ಹಿನ್ನಲೆಯುಳ್ಳ ಹೊಸಹೊಳಲು ಗ್ರಾಮದಲ್ಲಿ ಭಾನುವಾರ ರಾತ್ರಿ ಹನುಮಂತೋತ್ಸವವು ಸಡಗರ-ಸಂಭ್ರಮದಿ0ದ ನಡೆಯಿತು.
ಗ್ರಾಮದ ಕುರುಹಿನಶೆಟ್ಟಿ ನೇಕಾರ ಸಮಾಜದ ಹಾಗೂ ಗ್ರಾಮಸ್ಥರ ಸಹಕಾರದ ವತಿಯಿಂದ ಸಂಭ್ರಮದಿ0ದ ಕುರುಹಿನಶೆಟ್ಟಿ ಶ್ರೀರಾಮ ಮಂದಿರದಲ್ಲಿ ರಾತ್ರಿ 7 ಗಂಟೆಗೆ ವಿಶೇಷ ಪೂಜೆ ಸಲ್ಲಿಸಿ ಉತ್ಸವಕ್ಕೆ ಗ್ರಾಮದಹಿರಿಯ ಚಾಲನೆ ನೀಡಿದರು. ಸರ್ವಾಲಂಕೃತ ಬೆಳ್ಳಿ ರಥದಲ್ಲಿ ಶ್ರೀ ಆಂಜನೇಯ ಸ್ವಾಮಿಯವರ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಕೇರಳದ ಚಂಡೆ ವಾದನ, ಮ್ಯೂಸಿಕ್ ಟ್ಯಾಬ್ಲೋನ ಹಾಡಿಗೆ ಯುವಕರು, ಯುವತಿಯರು ಹಾಗೂ ಮಕ್ಕಳು ಕುಣಿದು ಕುಪ್ಪಳಿಸಿದರು.

ಲಕ್ಷ್ಮೀ ಸಾಗರದ ಕೆಂಪೇಗೌಡ ಮತ್ತು ತಂಡದ ವತಿಯಿಂದ ನಾಸಿಕ್ ಬ್ಯಾಂಡ್, ಮಂಡ್ಯದ ಕನ್ಯಾಕುಮಾರ್ ಅವರಿಂದ ಪೂಜಾಕುಣಿತ, ವೀರಗಾಸೆ, ಹುಲಿವೇಶ, ಪಾಳೇಗಿರಿವೇಶ, ವಿವಿಧ ವಿನೋದವಳಿಗಳನ್ನೊಳಗೊಂಡ ಕಲಾವಿದರು ಪ್ರದರ್ಶನ ಮಾಡಿ ಸಾರ್ವಜನಿಕರನ್ನು ರಂಜಿಸಿದರು. ಹೊಸಹೊಳಲು ಗ್ರಾಮದ ಪ್ರಮುಖ ರಸ್ತೆಗಳ್ಳಲ್ಲಿ ಮೆರವಣಿಗೆ ನಡೆಸಿದ ಸಂದರ್ಭದಲ್ಲಿ ರಂಗು ರಂಗಿನ ಪಟಾಕಿಗಳನ್ನು ಬಾಣಂಗಳದಲ್ಲಿ ಸಿಡಿಸಿ ಚಿತ್ತಾರ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮದ ದೇವಾಲಯ ಸಮಿತಿ ಅಧ್ಯಕ್ಷರಧ ಮುಖಂಡರಾದ ಹೆಚ್.ಜಿ.ರಾಮಚಂದ್ರು, ಹೆಚ್. ಆರ್.ಮಂಜುನಾಥ್, ದಾನಿಗಳಾದ ಜಿ.ಸೋಮಶೇಖರ್, ಪುರಸಭೆ ಸದಸ್ಯರಾದ ಶುಭಗಿರೀಶ್, ಹೆಚ್.ಆರ್. ಲೋಕೇಶ್, ಬಳ್ಳೆಕೆರೆ ಮಂಜುನಾಥ್, ಆರ್.ಸೋಮಶೇಖರ್, ಮನು, ಚರಣ್, ಜೀವನ್, ವೆಂಕಟೇಶ್, ಗೋಪಾಲ್ ಮಾಸ್ಟರ್, ಗುತ್ತಿಗೆದಾರ ಹೆಚ್.ಸಿ.ನಾಗೇಶ್, ಹನುಮಂತು, ಪುಟ್ಟರಾಜು, ವಿವಿಧ ಸಮಾಜದ ಮುಖಂಡರು ಆದ ನಾಗೇಗೌಡ, ಚಿಕ್ಕೇಗೌಡ, ಸಾಮಿಲ್ ರಘು, ರಾಮೇಗೌಡ, ಟಿಫಯ್ಯಾನಾ ಜಗದೀಶ್, ವೆಂಕಟಾಚಲ,ಪುನೀತ್, ಹೆಚ್. ಪುಟ್ಟರಾಜು, ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಪಟ್ಟಣ ಪೊಲೀಸ್ ಸಿಬ್ಬಂದಿ ವರ್ಗದವರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
– ಶ್ರೀನಿವಾಸ್ ಆರ್.