ಕೆ.ಆರ್.ಪೇಟೆ-ಸಡಗರದ-ಶ್ರೀ-ಮುತ್ತುರಾಯಸ್ವಾಮಿ-ಜಾತ್ರಾ- ಮಹೋತ್ಸವ-ಹಾಗೂ-ಪಲ್ಲಕ್ಕಿ-ರಥೋತ್ಸವ

ಕೆ.ಆರ್.ಪೇಟೆ: ಪಟ್ಟಣದ ಹೇಮಗಿರಿ ರಸ್ತೆಯಲ್ಲಿರುವ ಕೆ.ಆರ್.ಪೇಟೆ ಗ್ರಾಮ ರಕ್ಷಕ, ಶಕ್ತಿ ದೇವರಾದ ಶ್ರೀ ಮುತ್ತುರಾಯಸ್ವಾಮಿ ಯವರ ಪಲ್ಲಕ್ಕಿ ರಥೋತ್ಸವ, ಜಾತ್ರಾ ಮಹೋತ್ಸವ ಹಾಗೂ ಹಸಿರು ಬಂಡಿ ಉತ್ಸವವು ಸಡಗರ ಸಂಭ್ರಮದಿಂದ ನಡೆಯಿತು.

ಪಟ್ಟಣದ ಮುತ್ತುರಾಯಸ್ವಾಮಿ ದೇವಾಲಯದ ಆವರಣದಿಂದ ಆರಂಭವಾದ ಪಲ್ಲಕ್ಕಿ ರಥೋತ್ಸವವು ಹಳೆ ಹೇಮಗಿರಿ ರಸ್ತೆ, ಅಗ್ರಹಾರ ಬಡಾವಣೆ, ಈಶ್ವರ ದೇವಾಲಯ, ಗಣಪತಿ ದೇವಾಲಯ ಮಾರ್ಗವಾಗಿ ಸಾಗಿ, ಮುಕ್ಕಟ್ಟೆ ಚೌಕ ಹಾಗೂ ದುರ್ಗಾಭವನ್ ವೃತ್ತದ ಮೂಲಕ ಸಾಗಿ ಗ್ರಾಮ ದೇವತೆ ದೊಡ್ಡಕೇರಮ್ಮ ದೇವಾಲಯದ ಮಾರ್ಗದಿಂದ ಬಂದು ನಿರ್ವಿಘ್ನವಾಗಿ ಸ್ವಸ್ಥಾನ ತಲುಪಿತು. ಯುವಕರು ಪಲ್ಲಕ್ಕಿ ಉತ್ಸವವನ್ನು ಹೆಗಲೆ ಮೇಲೆ ಒತ್ತುಕೊಂಡು ಸಡಗರ ಸಂಭ್ರಮದಿಂದ ಹಾಗೂ ಶ್ರದ್ದಾಭಕ್ತಿಯಿಂದ ಶ್ರೀ ಮುತ್ತುರಾಯಸ್ವಾಮಿ ದೇವರ ಮೆರವಣಿಗೆಯನ್ನು ನೇರವೇರಿಸಿದರು.

ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಆರ್.ರವೀಂದ್ರಬಾಬು ಮಾತನಾಡಿ, ಕೆ ಆರ್ ಪೇಟೆ ಪಟ್ಟಣದ ಅಗ್ರಹಾರ ಬಡಾವಣೆ, ಅಂಬೇಡ್ಕರ್ ನಗರದ ಎಲ್ಲಾ ವರ್ಗದ ಜನರು ಒಟ್ಟಿಗೆ ಸೇರಿ ಮುತ್ತುರಾಯಸ್ವಾಮಿ ದೇವರ ಪಲ್ಲಕ್ಕಿ ರಥೋತ್ಸವ ಹಾಗೂ ಬಂಡಿ ಉತ್ಸವ ಜಾತ್ರಾ ಮಹೋತ್ಸವವನ್ನು ಅತ್ಯಂತ ಭಕ್ತಿಯಿಂದ ಆಚರಣೆ ಮಾಡುವ ಮೂಲಕ ಧಾರ್ಮಿಕ ಸಮಾನತೆಯನ್ನು ನೂರಾರು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ.

ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ದೇವಾಲಯವನ್ನು ತಳಿರು ತೋರಣಗಳಿಂದ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಮಹಿಳೆಯರು ಮನೆಯ ಮುಂದೆ ದೇವಾಲಯದ ಆವರಣದಲ್ಲಿ ಬಗೆಬಗೆಯ ಬಣ್ಣದ ರಂಗೋಲಿ ಹಾಕಿ ಉತ್ಸವಕ್ಕೆ ಸ್ವಾಗತ ಕೋರಿದರು. ರಥೋತ್ಸವದ ದಿನದಂದು ಮಹಿಳೆಯರು, ಯುವತಿಯರು ತಲೆಯ ಮೇಲೆ, ಮಡೆ ಹೊತ್ತು ಉತ್ಸಾಹದಿಂದ ಬಂಡಿ ಉತ್ಸವದೊಂದಿಗೆ ಸಂಭ್ರಮದಿಂದ ಸಾಗಿದರು, ಹರಕೆ ಹೊತ್ತವರು ಬಾಯಿ ಬೀಗ ಹಾಕಿಸಿಕೊಂಡು ಉತ್ಸವದ ಜೊತೆ ಸಾಗಿದರು.


ದೇವರ ಉತ್ಸವ ಹಾಗೂ ಜಾತ್ರಾ ಮಹೋತ್ಸವದಲ್ಲಿ ಶಾಸಕ ಹೆಚ್.ಟಿ.ಮಂಜು, ಸಮಾಜ ಸೇವಕ ಆರ್.ಟಿ.ಓ.ಮಲ್ಲಿಕಾರ್ಜುನ್, ಮನ್‌ಮುಲ್ ನಿರ್ದೇಶಕ ಎಂ.ಬಿ.ಹರೀಶ್, ಡಾಲು ರವಿ, ಪುರಸಭಾ ಅಧ್ಯಕ್ಷೆ ಪಂಕಜಾಪ್ರಕಾಶ್, ಉಪಾಧ್ಯಕ್ಷೆ ಸೌಭಾಗ್ಯ ಉಮೇಶ್, ಗ್ರಾಮದ ಯಜಮಾನರುಗಳಾದ ಹೆಗ್ಗಡಿ ಕೃಷ್ಣೇಗೌಡ,ಮುಡಾ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್, ಕಡಲೆಕಾಯಿ ಕೃಷ್ಣಪ್ಪ, ಥಿಯೇಟರ್ ಚಂದ್ರಣ್ಣ, ಪಟೇಲ್ ಚಂದ್ರಣ್ಣ, ಶಿವಣ್ಣ, ವೆಂಕಟಪ್ಪ, ನಿವೃತ್ತ ಶಿಕ್ಷಕ ಬಾಲಕೃಷ್ಣ, ಜವರಯ್ಯ, ಹಣ್ಣಿನ ಅಂಗಡಿ ರಾಮಣ್ಣ, ಪುರಸಭಾ ಮಾಜಿ ಅಧ್ಯಕ್ಷ ಕೆ.ಟಿ.ಚಕ್ರಪಾಣಿ, ಕೌನ್ಸಿಲರ್ ಪ್ರಮೋದ್, ಹೇಮಂತ್, ಕೆ.ಪುರುಷೋತ್ತಮ್, ಹನುಮಂತು, ದೇವಾಲಯದ ಪ್ರಧಾನ ಅರ್ಚಕ ಮುತ್ತುರಾಜ್, ಅರ್ಚಕ ಶ್ರೀನಿವಾಸ್ ಮುತ್ತಣ್ಣ ಸೇರಿದಂತೆ ಸಾವಿರಾರು ಭಕ್ತಾದಿಗಳು ಶ್ರೀ ಮತ್ತುರಾಯಸ್ವಾಮಿ ಪಲ್ಲಕ್ಕಿ ರಥೋತ್ಸವ, ಜಾತ್ರಾ ಮಹೋತ್ಸವದಲ್ಲಿ ಹಾಗೂ ಬಂಡಿ ಉತ್ಸವದಲ್ಲಿ ಭಾಗವಹಿಸಿದ್ದರು.

ಪಲ್ಲಕ್ಕಿ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ದೇವಾಲಯ ಸಮಿತಿ ವತಿಯಿಂದ ಮಜ್ಜಿಗೆ, ಪಾನಕ, ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

-ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *

× How can I help you?