ಕೆ.ಆರ್.ಪೇಟೆ:ಸರ್ಕಾರಿ ನೌಕರರ ಸಂಘದ ಚುನಾವಣೆ-ಸಿ.ಕೆ ಶಿವರಾಮೇಗೌಡ ತಂಡದಿಂದ ನಾಮಪತ್ರ ಸಲ್ಲಿಕೆ-ಮತ್ತೊಮ್ಮೆ ಅವಕಾಶ ನೀಡಲು ಮನವಿ

ಕೆ.ಆರ್.ಪೇಟೆ:ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಗೆ ಪ್ರಾಥಮಿಕ ಶಾಲಾ ಶಿಕ್ಷಕರ ವಿಭಾಗದಿಂದ ನಾಲ್ಕು ನಿರ್ದೇಶಕರ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಸಿ.ಕೆ ಶಿವರಾಮೇಗೌಡ ತಂಡದಿಂದ ಆನಂದಕುಮಾರ್,ಗಿರೀಶ್, ಶಿವಲಿಂಗೇಗೌಡ,ಹಾಗೂ ಸಿ.ಕೆ ಶಿವರಾಮೇಗೌಡ ಅವರು ತಮ್ಮ ಅಪಾರ ಬೆಂಬಲಿಗ ಸರ್ಕಾರಿ ನೌಕರರೊಂದಿಗೆ ಕೆ.ಆರ್.ಪೇಟೆ ಪಟ್ಟಣದಲ್ಲಿರುವ ಶ್ರೀ ಈಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ತಾಲ್ಲೂಕು ಕಚೇರಿಗೆ ತೆರಳಿ ಗ್ರೇಡ್-2 ತಹಸೀಲ್ದಾರ್ ಲೋಕೇಶ್ ಅವರಿಗೆ ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು.

ಬಳಿಕ ಮಾತನಾಡಿದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ‌ ಸಿ.ಕೆ ಶಿವರಾಮೇಗೌಡ, ನಾನು ನಿಮೆಲ್ಲರ ಆಶೀರ್ವಾದದಿಂದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಹಾಗೂ ನಮ್ಮ ರಾಜ್ಯಾಧ್ಯಕ್ಷರಾದ ಷಡಕ್ಷರಿ ಅವರ ಜೊತೆಗೂಡಿ ಸರ್ಕಾರಿ ನೌಕರರ ಅಭಿವೃದ್ಧಿಗೆ ಅನೇಕ ‌ ಹೋರಾಟದ ಮೂಲಕ ಶ್ರಮ ವಹಿಸಿದ್ದೇವೆ.ಅವು ನಿಮ್ಮ ಕಣ್ಣು ಮುಂದೆ ಇವೆ.ಇನ್ನೂ ಅನೇಕ ಸರ್ಕಾರಿ ನೌಕರರ ಅಭಿವೃದ್ಧಿ ಕೆಲಸಗಳು ಬಾಕಿ ಇವೆ. ನಮ್ಮ ತಂಡಕ್ಕೆ ಮತ್ತೊಮ್ಮೆ ಅವಕಾಶ ಮಾಡಿಕೊಟ್ಟರೆ ಬಾಕಿ‌ ಉಳಿದಿರುವ ಕೆಲಸಗಳನ್ನು ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ‌ ಎಂದರು.

ಸರ್ಕಾರಿ ನೌಕರರ ಅಭಿವೃದ್ಧಿಗೆ ಸೇವೆ ಸಲ್ಲಿಸಲು ನಾನು ಸೇರಿದಂತೆ ಶಿಕ್ಷಕ ಆನಂದಕುಮಾರ್, ಗಿರೀಶ್, ಶಿವಲಿಂಗೇಗೌಡ ಸೇರಿದಂತೆ ನೂರಾರು ಬೆಂಬಲಿಗರೊಂದಿಗೆ ಶುಭ ಸಮಯದಲ್ಲಿ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರವನ್ನು ಸಲ್ಲಿಸಿದ್ದೇವೆ. ಸರ್ಕಾರಿ ನೌಕರ ಬಂಧುಗಳು ನಿಮ್ಮ ಅಮೂಲ್ಯವಾದ ಮತವನ್ನು ನೀಡುವ ಮೂಲಕ ನಮ್ಮ ತಂಡವನ್ನು ಜಯಗಳಿಸುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನೌಕರರ ಸಂಘದ ಪ್ರದಾನ ಕಾರ್ಯದರ್ಶಿ ಪಿ.ಜೆ.ಕುಮಾರ್, ಎಸ್.ಸಿ.ಎಸ್.ಟಿ.ನೌಕರರ ಸಂಘದ ಕಾರ್ಯದರ್ಶಿ ಹೊಸಹೊಳಲು ಬಸವರಾಜು,ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಮಹೇಶ್, ಜಿ.ಪಿ.ಟಿ.ಅಧ್ಯಕ್ಷೆ ಪವಿತ್ರ,ಶಿಕ್ಷಕರಾದ ಪ್ರತಿಭಾ,ಪರಿಷತ್ ಅಧ್ಯಕ್ಷ ಆರ್. ಬಿ.ಉದೇಶಗೌಡ,ಶಿಕ್ಷಕರ ಪ್ರತಿಭಾ ವೇದಿಕೆಯ ಅಧ್ಯಕ್ಷೆ ಜಿ.ಎಚ್.ಯೋಗೇಶ್,ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಬಿ.ರವಿಕುಮಾರ್,ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಎಂ.ಎಸ್.ಸುಬ್ರಮಣ್ಯ,ಎನ್.ಪಿ.ಎಸ್.ನೌಕರರ ಸಂಘದ ಅದ್ಯಕ್ಷ ಕುಂದುರು ಕೃಷ್ಣೇಗೌಡ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಮೋಹನಕುಮಾರಿ,ಮಾಜಿ ಉಪಾಧ್ಯಕ್ಷ ಬಿ.ಎಸ್.ಪ್ರಭುಸ್ವಾಮಿ, ಬಿ.ಸಿ.ಎಸ್.ಕುಮಾರ್ ,ನಿರ್ದೇಶಕರಾದ ಸಾರಂಗಿ ದಿನೇಶ್, ಆರ್. ಎನ್.ಶ್ರೀಧರ್,ಎಂ.ಜೆ.ಮಂಜೇಗೌಡ,ಎಸ್.ಕೆ.ರವಿಕುಮಾರ್,ಹಾಗೂ ವಿವಿಧ ಶಿಕ್ಷಕರ ಸಂಘಟನೆಯ ಅನೇಕ ಪದಾಧಿಕಾರಿಗಳು ಹಾಗೂ ನೂರಾರು ಶಿಕ್ಷಕವೃಂದ ಸೇರಿದಂತೆ ಉಪಸ್ಥಿತರಿದ್ದರು.

——————–-ಮನು ಮಾಕವಳ್ಳಿ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?