ಕೆ.ಆರ್.ಪೇಟೆ-ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಕೋಡಿಮಠದ ಶ್ರೀಗಳಿಗೆ ಆಹ್ವಾನ-ಡಿಸೆಂಬರ್ 14 ಮತ್ತು 15ರಂದು ನಡೆಯಲಿರುವ ಸಮ್ಮೇಳನ

ಕೆ.ಆರ್.ಪೇಟೆ-ತಾಲೂಕಿನ ಬೆಡದಹಳ್ಳಿಯ ಶ್ರೀಪಂಚಭೂತೇಶ್ವರ ಸುಕ್ಷೇತ್ರದ 10ನೇ ವರ್ಷದ ದಶಮಾನೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಮಠದಲ್ಲಿ ನಡೆಯುತ್ತಿರುವ ಸರ್ವಧರ್ಮ ಸಮ್ಮೇಳನ ಹಾಗೂ ಧಾರ್ಮಿಕ ಸಭೆಯಲ್ಲಿ ಭಾಗವಹಿಸುವಂತೆ ಸುಕ್ಷೇತ್ರ ಕೋಡಿಮಠದ ಶ್ರೀಗಳಿಗೆ ಅಧಿಕೃತ ಆಹ್ವಾನ ನೀಡಲಾಯಿತು.

ಪಂಚಭೂತೇಶ್ವರ ಕ್ಷೇತ್ರದ ಪೀಠಾಧಿಪತಿ ಶ್ರೀ ರುದ್ರಮುನಿ ಸ್ವಾಮೀಜಿಗಳು ಭಕ್ತರ ನಿಯೋಗದೊಂದಿಗೆ ಅರಸೀಕೆರೆ ತಾಲೂಕಿನ ಹಾರನಹಳ್ಳಿಯ ಸುಕ್ಷೇತ್ರ ಕೋಡಿಮಠಕ್ಕೆ ಭೇಟಿ ನೀಡಿ ಜಗದ್ಗುರುಗಳಾದ ಶ್ರೀ. ಡಾ.ಶಿವಯೋಗಿ ರಾಜೇಂದ್ರ ಶಿವಯೋಗಿ ಮಹಾಸ್ವಾಮೀಜಿ ಅವರನ್ನು ಭೇಟಿ ಮಾಡಿ ಬೆಡದಹಳ್ಳಿಯ ಪಂಚಭೂತೇಶ್ವರ ಕ್ಷೇತ್ರದಲ್ಲಿ ಡಿಸೆಂಬರ್ 14 ಮತ್ತು 15ರಂದು ನಡೆಯಲಿರುವ ಸರ್ವಧರ್ಮ ಸಮ್ಮೇಳನ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಜಗದ್ಗುರುಗಳು, ಮೈಸೂರಿನ ಸುತ್ತೂರು ಪೀಠದ ಜಗದ್ಗುರುಗಳು, ಶ್ರವಣಬೆಳಗೊಳ ಜೈನಮಠದ ಭಟ್ಟಾರಕವರ್ಯ ಶ್ರೀಗಳು, ತೆಂಡೇಕೆರೆ ಬಾಳೆಹೊನ್ನೂರು ಶಾಖಾಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿಗಳು ಭಾಗವಹಿಸುತ್ತಿದ್ದು ಶ್ರೀಮಠದ ಭಕ್ತರ ಕೋರಿಕೆ ಹಾಗೂ ಅಭೀಷ್ಠೆಯಂತೆ ಜಗದ್ಗುರುಗಳಾದ ಕೋಡಿಶ್ರೀಗಳು ಭಾಗವಹಿಸುವಂತೆ ಮನವಿ ಮಾಡಲಾಯಿತು.

ಎರಡು ದಿನಗಳ ಕಾಲ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮ ಹಾಗೂ ವಿವಿಧ ಸಾಧಕರಿಗೆ ಪಂಚಶ್ರೀ ಪ್ರಶಸ್ತಿ ನೀಡಿ ಗೌರವಿಸುವುದು, ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸುವುದು ಸೇರಿದಂತೆ ನಮ್ಮಸoಸ್ಕೃತಿ ಪರಂಪರೆಯನ್ನು ಪ್ರತಿಬಿಂಬಿಸುವ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ, ಆಯೋಜಿಸಲಾಗುತ್ತಿದೆ ಎಂದು ರುದ್ರಮುನಿ ಸ್ವಾಮೀಜಿಗಳು ಕಾರ್ಯಕ್ರಮದ ರೂಪುರೇಷೆಗಳನ್ನು ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಕೋಡಿಮಠದ ಶ್ರೀಗಳು ಸರ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಸಮ್ಮತಿ ಸೂಚಿಸಿದರು.

ಭಕ್ತರ ನಿಯೋಗದಲ್ಲಿ ಬೆಡದಹಳ್ಳಿ ಪಂಚಭೂತೇಶ್ವರ ಮಠದ ಟ್ರಸ್ಟಿನ ಕಾರ್ಯದರ್ಶಿ ಕಾಂತರಾಜು, ಬಳ್ಳೇಕೆರೆ ಕೆ.ಮನು,ಕಿಕ್ಕೇರಿ ಬಲರಾಂ,ಸಯ್ಯದ್ ಖಲೀಲ್, ಕೆ.ಆರ್.ನೀಲಕಂಠ, ಶರಥ್‌ಗೌಡ ಮತ್ತಿತರರು ಉಪಸ್ಥಿತರಿದ್ದರು.

———————-ಶ್ರೀನಿವಾಸ್ ಕೆ.ಆರ್ ಪೇಟೆ

Leave a Reply

Your email address will not be published. Required fields are marked *

× How can I help you?